ಮಡಿಕೇರಿ, ಜೂ.೫: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ೨೦೨೬-೨೭ನೇ ಸಾಲಿನಲ್ಲಿ “ಯುವ ಸೌರಭ“ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸುಗಮ ಸಂಗೀತ, ವಚನ ಸಂಗೀತ, ಜನಪದ ಗೀತೆಗಳು, ಸಮೂಹ ನೃತ್ಯ, ನೃತ್ಯರೂಪಕ, ಜನಪದ ಪ್ರದರ್ಶನ ಕಲಾತಂಡ, ನಾಟಕ, ಯಕ್ಷಗಾನ, ಮೂಡಲಪಾಯ, ಬಯಲಾಟ, ಗೊಂಬೆಮೇಳ ಇತರೆ ಕಲೆಗಳಲ್ಲಿ ಪರಿಣತಿ ಹೊಂದಿರುವ ಕಲಾವಿದರಾಗಿರಬೇಕು.
ಪ್ರದರ್ಶಿಸಲಿರುವ ಕಲೆಯ ವಿವರವನ್ನು ಸ್ವವಿವರ ಹಾಗೂ ತಂಡದ ವಿವರಗಳನ್ನು ಪಾಸ್ಪೋರ್ಟ್ ಸೈಜ್ ಭಾವಚಿತ್ರದೊಂದಿಗೆ ೧೫ ರಿಂದ ೩೦ ವರ್ಷದ ವಯೋಮಾನದ ದೃಢೀಕರಣ ಪತ್ರವನ್ನು ಕಾಲೇಜಿನಿಂದ ಪಡೆದು ತಾ.೩೦ ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನ, ಮಡಿಕೇರಿ ಇಲ್ಲಿಗೆ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಕೋರಿದ್ದಾರೆ.