ಮಡಿಕೇರಿ, ಜೂ. ೫: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ-ಗಾಳಿ ಪ್ರಾರಂಭವಾಗಿದ್ದು, ಮಳೆ ಹಾನಿಯಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ಹೆಚ್ಚಿನ ಪ್ರಮಾಣದ ಅಡಚಣೆಗಳು ಉಂಟಾಗುತ್ತಿದ್ದು, ವಿದ್ಯುತ್ ಅವಘಡಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ಜಾಲದ ವ್ಯತ್ಯಯಗಳನ್ನು (ವಿದ್ಯುತ್ ಮಾರ್ಗದ ತಂತಿ ಹಾಗೂ ಕಂಬಗಳು ತುಂಡಾಗುವುದು) ಗಮನಿಸಿದಲ್ಲಿ, ಸ್ವತಃ ಕ್ರಮಕೈಗೊಳ್ಳದೇ (ವಿದ್ಯುತ್ ತಂತಿಗಳನ್ನು ಸ್ಪರ್ಶಿಸದೇ) ತಕ್ಷಣ ಚಾ.ವಿ.ಸ.ನಿ.ನಿ.ಯ ಈ ಕೆಳಗಿನ ದೂರವಾಣಿ ಸಂಖ್ಯೆಗಳಲ್ಲಿ ತಮ್ಮ ದೂರುಗಳನ್ನು ದಾಖಲಿಸುವಂತೆ ಕೋರಿದೆ. ಗ್ರಾಹಕರು ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯವಾಗಿ ವಾಟ್ಸ್ಆ್ಯಪ್ ಮೂಲಕ ಫೋಟೋ ಸಂದೇಶವನ್ನು ನೀಡಬಹುದಾಗಿದೆ.
ಕೊಡಗು ಜಿಲ್ಲೆಯ (೨೪*೭) ಸಹಾಯವಾಣಿ ಸಂಖ್ಯೆ ಸರ್ವೀಸ್ ಸೆಂಟರ್ನ ದೂರವಾಣಿ ಸಂಖ್ಯೆ ೧೯೧೨, ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ ೧೮೦೦೫೯೯೦೦೬೧.
ಮಡಿಕೇರಿ ತಾಲೂಕಿನ ಮಡಿಕೇರಿ, ತಾಳತ್ಮನೆ, ಮೂರ್ನಾಡು, ಸಂಪಾಜೆ, ಭಾಗಮಂಡಲ, ನಾಪೋಕ್ಲು ಹಾಗೂ ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಯ ಕುಮಾರ್ ೯೪೪೯೫೯೮೬೦೨, ಸಹಾಯಕ/ ಜೂನಿಯರ್ ಇಂಜಿನಿಯರ್ಗಳು ಮಡಿಕೇರಿಗೆ ತೇಜ ೯೪೪೯೫೯೮೬೦೩, ತಾಳತ್ಮನೆ ಹೇಮಂತ್ ರಾಜ್ ೯೪೪೯೫೯೮೬೦೪, ಮೂರ್ನಾಡು ಶಾಖೆಗೆ ಚೈತ್ರೇಶ್ ೯೪೪೯೫೯೮೬೦೫, ಸಂಪಾಜೆಗೆ ಅನಿಲ್ ಕುಮಾರ್ ೯೪೪೮೯೯೪೮೫೧, ಭಾಗಮಂಡಲ ಹರಿಣಾಕ್ಷಿ ೯೪೮೦೮೧೦೩೪೪, ನಾಪೋಕ್ಲು ಶಾಖೆಗೆ ಹರೀಶ್ ೯೪೪೯೫೯೮೬೦೬ ಹಾಗೂ ಗ್ರಾಹಕರ ಸೇವಾ ಕೇಂದ್ರ ಮಡಿಕೇರಿ ಉಪ ವಿಭಾಗ ದೂ.ಸಂ. ೦೮೨೭೨-೨೪೮೪೫೪ ಮತ್ತು ೯೪೪೯೫೯೮೬೬೫.
ಕುಶಾಲನಗರ ತಾಲೂಕಿನ ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ಮಾದಾಪುರ, ಚೆಟ್ಟಳ್ಳಿ, ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ೯೪೪೯೫೯೮೫೩೮, ಸಹಾಯಕ/ಜೂನಿಯರ್ ಇಂಜಿನಿಯರ್ಗಳು ಸುಂಟಿಕೊಪ್ಪ ಶಾಖೆಗೆ ಲವಕುಮಾರ್ ಕೆ.ಎ ೯೪೪೯೫೯೮೬೧೫, ಕುಶಾಲನಗರ ಯೋಗಾಚಾರಿ ೯೪೪೯೫೯೮೫೮೯, ಕೂಡಿಗೆ ಶಾಖೆಗೆ ರಾಣಿ ೯೪೪೯೫೯೮೬೧೩, ಮಾದಾಪುರ ನಿರಂಜನ್ ಎಸ್.ಜಿ ೯೪೪೯೫೯೮೫೮೮, ಚೆಟ್ಟಳ್ಳಿ ಮಂಜುನಾಥ ಜಿ.ಆರ್.೯೪೪೮೪೯೯೯೬೫ ಹಾಗೂ ಗ್ರಾಹಕರ ಸೇವಾ ಕೇಂದ್ರ ಕುಶಾಲನಗರ ಉಪ ವಿಭಾಗ ೦೮೨೭೬-೨೭೧೦೪೬.
ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಆಲೂರು ಸಿದ್ದಾಪುರ, ಶಾಂತಳ್ಳಿ, ಗ್ರಾಹಕರ ಸೇವಾ ಕೇಂದ್ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಯ ಕುಮಾರ್ ೯೪೪೯೫೯೮೬೧೨, ಸಹಾಯಕ/ಜೂನಿಯರ್ ಇಂಜಿನಿಯರ್ಗಳು ಸೋಮವಾರಪೇಟೆ ಶಾಖೆಗೆ ಶಿವಪ್ರಸಾದ್ ೯೪೪೯೫೯೮೬೧೪, ಶನಿವಾರಸಂತೆ ಸುದೀಪ್ ಕುಮಾರ್ ೯೪೪೯೫೯೮೬೧೬, ಕೊಡ್ಲಿಪೇಟೆ ಶಾಖೆಗೆ ಪ್ರಕಾಶ್ ೯೪೪೯೫೯೮೬೧೭, ಆಲೂರು ಸಿದ್ದಾಪುರ ಮನುಕುಮಾರ್ ೯೪೪೯೫೯೮೬೨೨, ಶಾಂತಳ್ಳಿ ಎಚ್.ಡಿ.ಲೋಕೇಶ್(ಪ್ರಭಾರ) ೯೪೮೦೮೩೭೫೦೯, ಗ್ರಾಹಕರ ಸೇವಾ ಕೇಂದ್ರ ಸೋಮವಾರಪೇಟೆ ಉಪ ವಿಭಾಗ ೯೪೪೮೨೮೩೩೯೪.
ವೀರಾಜಪೇಟೆ ತಾಲೂಕಿನ ವೀರಾಜಪೇಟೆ, ಅಮ್ಮತ್ತಿ, ಸಿದ್ದಾಪುರ, ಪಾಲಿಬೆಟ್ಟ, ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನೀತಾ(ಪ್ರಭಾರ) ೯೪೮೦೮೩೭೫೪೫, ಸಹಾಯಕ/ಜೂನಿಯರ್ ಇಂಜಿನಿಯರ್ಗಳು ವೀರಾಜಪೇಟೆಗೆ ಸೋಮೇಶ್ ೯೪೪೯೫೯೮೬೧೦, ಅಮ್ಮತ್ತಿ ಮನೋಜ್ ೯೪೪೮೯೯೪೩೪೪, ಸಿದ್ದಾಪುರ ಶಾಖೆಗೆ ಸ್ವರಾಗ್ ೯೪೪೯೫೯೮೬೧೧, ಪಾಲಿಬೆಟ್ಟ ಶಿವರಾಜ ೯೪೪೮೯೯೪೩೪೧, ಗ್ರಾಹಕರ ಸೇವಾ ಕೇಂದ್ರ ವಿರಾಜಪೇಟೆ ಉಪ ವಿಭಾಗ ೯೪೪೮೨೮೯೪೦೯.
ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು, ಶ್ರೀಮಂಗಲ, ಬಾಳೆಲೆ ಹಾಗೂ ಗ್ರಾಹಕರ ಸೇವಾ ಕೇಂದ್ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ್ ೯೪೪೯೫೯೮೬೦೭, ಸಹಾಯಕ/ಜೂನಿಯರ್ ಎಂಜಿನಿಯರ್ಗಳು ಗೋಣಿಕೊಪ್ಪ ಶಾಖೆಗೆ ಹೇಮಂತ್ ಕುಮಾರ್ ೯೪೪೯೫೯೮೬೦೮, ಶ್ರೀಮಂಗಲ ನಾಗೇಂದ್ರ ಪ್ರಸಾದ್ ೯೪೪೯೫೯೮೬೦೯, ಬಾಳೆಲೆ ಶಾಖೆಗೆ ರಂಗಸ್ವಾಮಿ ೯೪೪೯೫೯೭೪೮೪, ಗ್ರಾಹಕರ ಸೇವಾ ಕೇಂದ್ರ ಗೋಣಿಕೊಪ್ಪಲು ಉಪ ವಿಭಾಗ ೯೪೪೯೮೭೮೦೭೨ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಮಡಿಕೇರಿ ವಿಭಾಗ ಎಂ.ರಾಮಚAದ್ರ ದೂ.ಸಂ.೯೪೪೯೫೯೮೬೦೧ ಅನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ರಾಮಚAದ್ರ ಅವರು ತಿಳಿಸಿದ್ದಾರೆ.