ವೀರಾಜಪೇಟೆ, ಜೂ.೫: ವಿದ್ಯಾರ್ಥಿಗಳಿಗೆ ಓದಿನೊಂದಿಗೆ ಛಲ ಮತ್ತು ಕಠಿಣ ಶ್ರಮ ಮುಖ್ಯ ಎಂದು ಬೆಂಗಳೂರು-ಮAಗಳೂರು ಕಾಲೇಜು ಶಿಕ್ಷಣ ವಿಭಾಗದ ವಲಯ ಉಪ ನಿರ್ದೇಶಕರಾದ ಪ್ರೋ. ಕೆ.ಆರ್. ಕವಿತಾ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ವೀರಾಜಪೇಟೆ ಕಾವೇರಿ ಕಾಲೇಜು ಮತ್ತು ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಕಾಲೇಜು ಶಿಕ್ಷಣ ಎಂದರೆ, ಕೇವಲ ವಿದ್ಯಾರ್ಥಿಗಳು ಆಯ್ಕೆ ಮಾಡಿದ ವಿಭಾಗದಲ್ಲಿ ಅಡಕವಾಗಿರುವ ಪುಸ್ತಕ ವಿಷಯವನ್ನು ಗ್ರಹಿಸಿ ಪರೀಕ್ಷೆ ಬರೆದು ಉತ್ತೀರ್ಣರಾಗುವುದು ಎಂದು ಭಾವಿಸುವುದು ತಪ್ಪು. ಕಾಲೇಜು ಶಿಕ್ಷಣದ ಜೊತೆಗೆ ಬಾಹ್ಯವಾಗಿ ಗ್ರಹಿಸುವ ವಿಷಯಗಳ ಬಗ್ಗೆ ಜ್ಞಾನ ಹೊಂದುವುದೂ ಮುಖ್ಯ ಎಂದರು.

ವಿವಿಧ ಕ್ಷೇತ್ರಗಳÀಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಮಣಿಪಾಲ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರೋ. ಡಾ. ಬಾಲಕೃಷ್ಣ ಎಸ್.ಮದ್ದೋಡಿ ಅವರು, ಪ್ರಕೃತಿಯು ಮನುಜನಿಗೆ ಎಲ್ಲವನ್ನೂ ಕರುಣಿಸಿದೆ. ಉತ್ತಮ ಗಾಳಿ, ಜಲ, ಪ್ರಾಣಿ ಸಂಕುಲ ಮುಂತಾದವು ಇವೆ. ಆದರೆ ನಾವುಗಳು ಪ್ರಕೃತಿಯ ಮೇಲೆ ದೌರ್ಜನ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಪ್ರಕೃತಿಯನ್ನು ಉಳಿಸುವ ಸಂಕಲ್ಪವನ್ನು ನಾವು ಮಾಡಬೇಕೆಂದು ಕರೆ ಕೊಟ್ಟರು.

ವೀರಾಜಪೇಟೆ ಪುರಸಭೆಯ ಮುಖ್ಯಾಧಿಕಾರಿಗಳಾದ ಪಿ.ಕೆ ನಾಚಪ್ಪ ಅವರು ಮಾತನಾಡಿ, ಶಿಸ್ತುಬದ್ಧ ಜೀವನವನ್ನು ವಿಧ್ಯಾರ್ಥಿಗಳು ರೂಡಿಸಿಕೊಳ್ಳಬೇಕು. ಪ್ರತಿಭೆಗಳಿಗೆ ಅನುಸಾರವಾಗಿ ಸಮಾಜದಲ್ಲಿ ಕೆಲಸಗಳಿವೆ ಎಂದು ಹೇಳಿದರು.

ಸಮಾರಂಭದ ವೇದಿಕೆಯಲ್ಲಿ ಪದವಿ ವಿಭಾಗದಲ್ಲಿ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಮತ್ತು ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ಯಲ್ಲಿ ಉತ್ತಮ ಸಾಧನೆಗೈದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಜಿ ವೀಣಾ ಅವರು ೨೦೨೫- ೨೬ ನೆ ಸಾಲಿನ ವರದಿ ವಾಚಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾವೇರಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಕೆ.ಪಿ ಬೋಪಣ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಮಾತನಾಡಿ, ಕಾವೇರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಕಾಣಸಿಗುತ್ತಾರೆ. ಕಾರಣ ಕಾಲೇಜಿನಲ್ಲಿ ದೊರಕುವ ಉಪನ್ಯಾಸ ಮತ್ತು ಇತರ ಸೌಲಭ್ಯಗಳು ಹಾಗೂ ನಾಯಕತ್ವದ ಶಿಕ್ಷಣದಿಂದಾಗಿ ಎಂದರು.

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ನಿರೂಪ್ ನಾಣಯ್ಯ ಟಿ.ಯು, ಕೀರ್ತನ್ ಕಾವೇರಪ್ಪ ಕೆ.ಜೆ, ನಾಚಪ್ಪ ಎ.ಎ ಮತ್ತು ಮುತ್ತಪ್ಪ ಎನ್.ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಐ.ಕ್ಯೂ.ಎ.ಸಿ. ಸಂಯೋಜಕರಾದ ಎಲ್.ಆರ್ ರಾಘವೇಂದ್ರ ಅವರು ಸ್ವಾಗತಿಸಿದರು. ಉಪನ್ಯಾಸಕರಾದ ಪವಿತ್ರ, ಲೋಚನ ಹಾಗೂ ವಿದ್ಯಾರ್ಥಿಗಳಾದ ರಕ್ಷಿತಾ, ಪೂರ್ವಿಕ ಕಾರ್ಯಕ್ರಮ ನಿರೂಪಣೆ ಮಾಡಿದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ವನಿತ ಅವರು ಸರ್ವರನ್ನು ವಂದಿಸಿದರು.

ಕಾವೇರಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ನಿರ್ದೇಶಕರು, ಪದವಿ ಕಾಲೇಜಿನ ಉಪನ್ಯಾಸಕರು, ನಿವೃತ್ತ ಪ್ರಾಂಶುಪಾಲರು, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಪೋಷಕರು ಮತ್ತು ಪದವಿ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.