ವೀರಾಜಪೇಟೆ, ಜೂ. ೪: ವೀರಾಜಪೇಟೆ ಮಲಬಾರ್ ರಸ್ತೆಯಲ್ಲಿರುವ ವಿನಾಯಕ ಶಾಲೆಯಲ್ಲಿ ಶಾಲೆ ಆರಂಭದAದು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸ್ವಾಗತಿಸಲಾಯಿತು. ಮಕ್ಕಳು ಸಂತೋಷದಿAದ ತರಗತಿಗಳಿಗೆ ತೆರಳಿ ತಮ್ಮ ವಿದ್ಯಾಭ್ಯಾಸವನ್ನು ಪ್ರಾರಂಭ ಮಾಡಿದರು. ಶಾಲಾ ಮುಖ್ಯಸ್ಥರಾದ ಜಯಕುಮಾರಿ ಹಾಗೂ ಮುಖ್ಯೋಪಾಧ್ಯಾಯಿನಿಯರಾದ ಪ್ರತಿಮಾ ಆಚಾರ್ಯ ಮತ್ತು ಶೈಲಾ ಬಿ.ಎ ಮಕ್ಕಳನ್ನು ಸ್ವಾಗತಿಸಿ, ಶುಭ ಕೋರಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರು, ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.