ಮಡಿಕೇರಿ, ಜೂ. ೪: ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಬಿಸಿ ಬಿಸಿ ಸನ್ನೇವೇಶದ ನಡುವೆ ವಿಧಾನ ಪರಿಷತ್ ಸದಸ್ಯರ ಪೈಕಿ ಹಲವರ ನಿವೃತ್ತಿ ದಿನಾಂಕ ಸಮೀಪಿಸುತ್ತಿದೆ. ಜೂ. ೩೦ಕ್ಕೆ ೭ ಸದಸ್ಯರು ಹಾಗೂ ಜುಲೈ ೨೧ಕ್ಕೆ ಐದು ಮಂದಿ ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸ್ಥಾನಗಳ ಮೇಲೆ ಈಗಾಗಲೇ ಹಲವು ಮಂದಿ ಆಕಾಂಕ್ಷಿಗಳು ಪ್ರಯತ್ನ ಆರಂಭಿಸಿದ್ದಾರೆ. ಅದರಲ್ಲೂ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ಭಾರಿ ಪ್ರಯತ್ನದಲ್ಲಿರುವ ಕುರಿತು ಪಕ್ಷದ ಪಾಳಯದಲ್ಲಿ ಮಾತು ಕೇಳಿಬರುತ್ತಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನೇಮಕವಾಗಿರುವ ಸದಸ್ಯರುಗಳ ಪೈಕಿ ಕಾಂಗ್ರೆಸ್ ಪಕ್ಷದಿಂದ ಬಿ.ಕೆ. ಹರಿಪ್ರಸಾದ್, ನಜೀರ್ ಅಹಮ್ಮದ್, ತಿಪ್ಪಣ್ಣಪ್ಪ ಕಮಕನೂರ, ಬಿಜೆಪಿಯ ಎಂಟಿಬಿ ನಾಗರಾಜ್, ಪ್ರತಾಪ್ ಸಿಂಹ ನಾಯಕ್, ಸುನೀಲ್ ವಲ್ಲಾಪುರ್ ಹಾಗೂ ಜೆಡಿಎಸ್‌ನ ಗೋವಿಂದರಾಜ್ ನಾಯಕ್ ಅವರುಗಳ ಅಧಿಕಾರಾವಧಿ ಜೂನ್ ೩೦ಕ್ಕೆ ಮುಕ್ತಾಯವಾಗಲಿದೆ. ಇನ್ನು ವಿಧಾನ ಪರಿಷತ್‌ಗೆ ನೇರವಾಗಿ ನಾಮನಿರ್ದೇಶನಗೊಂಡಿರುವ ಸದಸ್ಯರುಗಳಾದ ಭಾರತಿ ಶೆಟ್ಟಿ, ಶಾಂತಾರಾಮ್ ಬುಡ್ನ ಸಿದ್ಧಿ, ಡಾ. ತಳವಾರ್ ಸಾಬಣ್ಣ, ಅಡಗೂರು ಎಚ್ ವಿಶ್ವನಾಥ್ ಹಾಗೂ ರಮೇಶ್ ಬಾಬು ಅವರುಗಳ ಅಧಿಕಾರ ಜುಲೈ ೨೧ಕ್ಕೆ ಕೊನೆಯಾಗಲಿದೆ.

ಸಂಖ್ಯಾಬಲದAತೆ ಸ್ಪರ್ಧೆ

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಸದಸ್ಯರ ಆಯ್ಕೆಗೆ ಸಂಬAಧಿಸಿದAತೆ ಪ್ರಸ್ತುತ ಆಡಳಿತರೂಢ ಕಾಂಗ್ರೆಸ್‌ಗೆ ೪ ಮಂದಿಯನ್ನು ಆಯ್ಕೆಮಾಡಿ ಕಳುಹಿಸುವ ಅವಕಾಶವಿದೆ. ಹಾಲಿ ಶಾಸಕರ ಬಲದಂತೆ ಬಿಜೆಪಿಗೆ ೨ ಹಾಗೂ ಜೆಡಿಎಸ್‌ಗೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಬಹುದು. ಕಾಂಗ್ರೆಸ್‌ಗೆ ನಾಲ್ವರು ಸದಸ್ಯರ ಅವಕಾಶವಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಿಂದಲೂ ಕೆಲವರು ಈ ಬಗ್ಗೆ ಆಕಾಂಕ್ಷಿಗಳಾಗಿದ್ದಾರೆನ್ನಲಾಗಿದೆ.

ಪ್ರಮುಖವಾಗಿ ಕೆ.ಪಿ. ಚಂದ್ರಕಲಾ, ವಿಧಾನ ಪರಿಷತ್ ಮಾಜಿ ಸದಸ್ಯೆಯಾಗಿರುವ ವೀಣಾ ಅಚ್ಚಯ್ಯ ಹಾಗೂ ಹಿರಿಯ ವಕೀಲ ಕೆ.ಪಿ. ಚಂದ್ರಮೌಳಿ ಅವರುಗಳ ಹೆಸರು ಕೇಳಿಬರುತ್ತಿದೆ. ಪ್ರಸ್ತುತ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿದ್ದಾರೆ. ಈ ಹಿನ್ನೆಲೆ ಡಿ.ಕೆ. ಶಿವಕುಮಾರ್ ಅವರ ಬಣದಲ್ಲಿ ಈ ಹಿಂದಿನಿAದಲೂ ಗುರುತಿಸಿಕೊಂಡಿರುವ ಕೆ.ಪಿ. ಚಂದ್ರಕಲಾ ಅವರ ಬೇಡಿಕೆ ಇಲ್ಲಿ ಪ್ರಬಲವಾಗಿದೆ. ತಾವು ಪ್ರಬಲ ಆಕಾಂಕ್ಷಿ ಎಂದು ಚಂದ್ರಕಲಾ ಪ್ರತಿಕ್ರಿಯಿಸಿದ್ದಾರೆ. ಪಕ್ಷದಲ್ಲಿ ಹಲವು ವರ್ಷ ದುಡಿದಿದ್ದು, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಇದರ ಆಧಾರದಲ್ಲಿ ಬೇಡಿಕೆಯಿಡುತ್ತಿರುವುದಾಗಿ ಅವರು ಹೇಳಿದ್ದಾರೆ. ವೀಣಾ ಅಚ್ಚಯ್ಯ ಅವರು ಸೇವಾ ಹಿರಿತನದಲ್ಲಿ ಮತ್ತೊಂದು ಅವಧಿಗೆ ಆಕಾಂಕ್ಷಿಯಾಗಿದ್ದರೂ ಹೈಕಮಾಂಡ್ ಹಾಗೂ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಹೇಳುತ್ತಿದ್ದಾರೆ. ಇನ್ನು ಈ ಹಿಂದೊಮ್ಮೆ ಕೊಡಗಿನಿಂದ ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿ ಅಲ್ಪಮತಗಳಿಂದ ಸೋಲು ಕಂಡಿದ್ದ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ಅವರು ತಾವು ಕೂಡ ಈ ಬಾರಿ ಪ್ರಬಲ ಆಕಾಂಕ್ಷಿ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಪರಿಸ್ಥಿತಿ ವಿಭಿನ್ನವಾಗಿದ್ದ ಸಂದರ್ಭ ತಾವು ಪಕ್ಷಕ್ಕಾಗಿ ದುಡಿದಿದ್ದು, ಇದೀಗ ಕಾಂಗ್ರೆಸ್ ಅಧಿಕಾರದಲ್ಲಿದೆ. ಕೊಡಗಿನಲ್ಲಿ ಇಬ್ಬರು ಶಾಸಕರಿದ್ದರೂ ಬೆಂಗಳೂರು ಮಟ್ಟದಲ್ಲಿ ಕೆಲಸ ನಿರ್ವಹಣೆಗೆ ಎಂಎಲ್‌ಸಿ ಸ್ಥಾನ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ನಾಮನಿರ್ದೇಶನ

ಇನ್ನು ನೇರವಾಗಿ ವಿವಿಧ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನೇಮಕವಾಗಿರುವವರ ಪೈಕಿ ಐವರು ಜುಲೈ ೨೧ಕ್ಕೆ ನಿವೃತ್ತರಾಗುತ್ತಿದ್ದಾರೆ. ಇವರಲ್ಲಿ ಈ ಹಿಂದೆ ಕೊಡಗು-ಮೈಸೂರು ಕ್ಷೇತ್ರ ಮಾಜಿ ಸಂಸದ, ಸಾಹಿತಿಯಾಗಿಯೂ ಗುರುತಿಸಲ್ಪಟ್ಟಿರುವ ಅಡಗೂರು ವಿಶ್ವನಾಥ್ ಅವರು ಒಬ್ಬರಾಗಿದ್ದಾರೆ.

ಆದರೆ, ಅವರನ್ನು ಆಯ್ಕೆ ಮಾಡಿದ್ದ ಬಿಜೆಪಿ ಅಧಿಕಾರದಲ್ಲಿದ್ದಾಗ. ನಾಮ ನಿರ್ದೇಶಿತ ಸದಸ್ಯರ ಆಯ್ಕೆ ಆಡಳಿತ ಪಕ್ಷಕ್ಕೆ ಸೇರಲಿರುವುದರಿಂದ ಸರಕಾರ ಈ ಸ್ಥಾನಕ್ಕೆ ಯಾರಿಗೆ ಅವಕಾಶ ನೀಡಲಿದೆ ಎಂದು ಕಾದು ನೋಡಬೇಕಿದೆ.