ನಾಪೋಕ್ಲು, ಜೂ. ೪: ಕುಂದಚೇರಿ ಗ್ರಾಮದ ಕಲ್ಲುತಿರಿಕೆ ಈಶ್ವರ ದೇವಾಲಯದ ಪುರೋಹಿತ ಪ್ರಭಾಕರ ಭಟ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ಕಲ್ಲುತಿರಿಕೆ ಈಶ್ವರ ದೇವಾಲಯದ ಪೂಜಾ ವಿಧಿ ವಿಧಾನಗಳನ್ನು ಮಾಡುವುದರ ಜೊತೆಗೆ ಕೊಡಗಿನ ಹಲವಾರು ದೇವಸ್ಥಾನಗಳಲ್ಲಿ ವಾರ್ಷಿಕವಾಗಿ ನಡೆಯುವ ದೇವತಾ ಕಾರ್ಯಗಳಲ್ಲಿ ದೇವರ ಪೂಜೆ ಹಾಗೂ ದೇವರ ವಿಗ್ರಹವನ್ನು ಹೊತ್ತು ನೃತ್ಯ ಪ್ರದರ್ಶನ ಮಾಡುವುದರ ಜೊತೆಗೆ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಪ್ರಭಾಕರ ಭಟ್ ಅವರನ್ನು ಜೊತೆಗೆ ಅವರ ಪತ್ನಿಯನ್ನು ಕುಂದಚೇರಿ ಗ್ರಾಮಸ್ಥರು ದೇವಾಲಯದ ಆವರಣದಲ್ಲಿ ಸನ್ಮಾನಿಸಿ ಗೌರವಿಸಿದರು.