ಕುಶಾಲನಗರ, ಜೂ. ೩: ಮೂಲತಃ ಕುಶಾಲನಗರ ಬಳಿಯ ಕೊಪ್ಪ ಗ್ರಾಮದ ಗುಡ್ಡೆನಹಳ್ಳ ನಿವಾಸಿ ರತ್ನಾಕರ್ ಎಂಬವರ ಪುತ್ರ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕನೋರ್ವ ಶ್ರೀರಂಗಪಟ್ಟಣ ಬಳಿ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾನೆ.
ಕೀರ್ತಿಶ್ (೨೪) ಎಂಬವನೇ ಮೃತ ದುರ್ದೈವಿ. ಕೆಲಸ ನಿರ್ವಹಿಸಿ ಊರಿಗೆ ಬೈಕ್‌ನಲ್ಲಿ ಬರುತ್ತಿದ್ದ ಸಂದರ್ಭ ಟಾಟಾ ಏಸ್ ವಾಹನಕ್ಕೆ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.