ವೀರಾಜಪೇಟೆ, ಜೂ. ೩: ವೀರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದ ೮ನೇ ವರ್ಷದ ೨೦೨೫-೨೬ನೇ ಸಾಲಿನ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ನಡೆಯಿತು.

ವೀರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮಹಿಳೆಯರು ಇಂದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯು ತಮ್ಮನ್ನು ತೊಡಗಿಸಿಕೊಂಡಿದ್ದಾರೆೆ. ಮಹಿಳೆಯರು ಕೇವಲ ಮನೆಯ ನಿರ್ವಹಣೆ ಮಾಡುವಲ್ಲಿ ಮಾತ್ರ ಸೀಮಿತವಾಗದೆ ಸಮಾಜದಲ್ಲಿಯೂ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಯಾವುದೇ ಕೆಲಸವನ್ನು ನಾವು ಮಾಡುವ ಸಂದರ್ಭದಲ್ಲಿ ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ ಮಾಡಬೇಕು. ಮನಸ್ಸಿಟ್ಟು ಮಾಡುವ ಕೆಲಸವು ಸಮಾಜಕ್ಕೆ ಕೊಡುಗೆಯನ್ನು ನೀಡುವಂತಿರಬೇಕು ಎಂದರು.

ಇAದು ನಮ್ಮ ಒಕ್ಕೂಟದ ಮಹಾಸಭೆ ನಡೆಯುತ್ತಿದ್ದು ನನ್ನ ಅಧ್ಯಕ್ಷತೆಯಲ್ಲಿ ಇದು ಮೊದಲ ಮಹಾಸಭೆಯಾಗಿದ್ದು ಈ ಒಂದು ವರ್ಷದಲ್ಲಿ ಒಕ್ಕೂಟದ ಸರ್ವರು ಸಹಕಾರವನ್ನು ನೀಡಿದ್ದಾರೆÉ. ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು ಸರ್ವರ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಒಕ್ಕೂಟದ ಸದಸ್ಯರುಗಳು ಸಮಾಜಮುಖಿ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಿರುವುದು ಶ್ಲಾಘನೀಯ. ಇನ್ನು ಮುಂದೆಯೂ ವೈವಿಧ್ಯಮಯ ಕಾರ್ಯಚಟುವಟಿಕೆಗಳನ್ನು ಆಯೋಜಿಸುವ ಧ್ಯೇಯೋದ್ದೇಶವನ್ನು ಹೊಂದಿದ್ದೇವೆ ಎಂದರು.

ಕುಂಜಿರ ಚಿತ್ರ ಚರ್ಮಣ ಅವರು ಕಳೆದ ಮಹಾಸಭೆಯ ವರದಿ ವಾಚಿಸಿದರು. ತಾತಂಡ ಯಸು ಕಬೀರ್, ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು.

ತದನಂತರ ಒಕ್ಕೂಟದ ವತಿಯಿಂದ ೨೦೨೬-೨೭ನೇ ಸಾಲಿನಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಉಮ್ಮತ್ತಾಟ್ ಪ್ರದರ್ಶನ, ಆಟೋಟ ಸ್ಪರ್ಧೆ, ಹಬ್ಬಗಳನ್ನು ಆಚರಿಸುವುದು ಹಾಗೂ ವೀರಾಜಪೇಟೆ ಕೊಡವ ಸಮಾಜವು ಒಕ್ಕೂಟಕ್ಕೆ ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಲಾಯಿತು.

ಒಕ್ಕೂಟದ ಬೈಲಾ, ವಂತಿಗೆಯ ಬಗ್ಗೆ ಹಾಗೂ ಸಮಾಜ ಸೇವೆಯಲ್ಲಿ ಒಕ್ಕೂಟದ ಪಾಲ್ಗೊಳ್ಳುವಿಕೆಯ ಕುರಿತು ಚರ್ಚೆ ಮಾಡಲಾಯಿತು. ಮೃತರಾದ ಒಕ್ಕೂಟದ ಸದಸ್ಯರುಗಳಾಗಿದ್ದ ಬೊವ್ವೇರಿಯಂಡ ಆಶಾ ಸುಬ್ಬಯ್ಯ ಹಾಗೂ ನಾಯಕಂಡ ಬೇಬಿ ಚಿಣ್ಣಪ್ಪ ಅವರಿಗೆ ಸಭೆಯಲ್ಲಿ ಸಂತಾಪವನ್ನು ಸೂಚಿಸಲಾಯಿತು.

ನಿರ್ದೇಶಕರುಗಳಾದ ಮೂಕೊಂಡ ಪ್ರೀತ್ ಈರಪ್ಪ, ಚೇದಂಡ ರೋಸಿ ಸುರೇಶ್, ಮಾತಂಡ ಸುಷ್ಮಾ ಅರುಣ್, ಮುರುವಂಡ ಉಷಾ ಮೊಣ್ಣಪ್ಪ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳು ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಭೆಯಲ್ಲಿ ವೀರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.