ಮಡಿಕೇರಿ, ಜೂ. ೨: ಉತ್ತಮ ಸಂಸ್ಕಾರ-ಸAಸ್ಕೃತಿಯನ್ನು ಬೆಳೆಸುವಲ್ಲಿ ಪುಸ್ತಕಗಳು ದಾರಿದೀಪವಾಗಿದ್ದು, ಮೊಬೈಲ್ ಬಿಟ್ಟು ಕೆಲಕಾಲ ಪುಸ್ತಕ ಓದಿಗೆ ಸಮಯ ಮೀಸಲಿಡಬೇಕೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಕರೆ ನೀಡಿದರು.

ಕಡಿಯತ್ತನಾಡು ಬಲಂಬೇರಿಯಲ್ಲಿರುವ ಪಾಲಂದಿರ ಐನ್‌ಮನೆಯಲ್ಲಿ ನಡೆದ ೧೧ನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಬದುಕಿನಲ್ಲಿ ಓದಿ, ಕೇಳಿ, ತಿಳಿದು ಕಲಿತದ್ದು ಎಂದಿಗೂ ನಮ್ಮ ಮನಸ್ಸಿನಿಂದ ಮರೆಯಾಗುವುದಿಲ್ಲ. ಇದರೊಂದಿಗೆ ಪುಸ್ತಕಗಳಲ್ಲಿ ಅಡಗಿರುವ ಅಗಾಧವಾದ ಜ್ಞಾನ ಎಂದಿಗೂ ಮಾಸುವುದಿಲ್ಲ. ಆದ್ದರಿಂದ ಪುಸ್ತಕದ ಜ್ಞಾನ ಎಂಬುವುದು ಒಳ್ಳೆಯ ಸಂಸ್ಕಾರ-ಸAಸ್ಕೃತಿಗೆ ದಾರಿ ತೋರಿಸಬಲ್ಲದು. ಕೊಡವರ ವಿಶೇಷ ಸಂಸ್ಕೃತಿ ಇಡೀ ಜನಾಂಗದ ಹೆಸರನ್ನು ಎತ್ತಿ ಹಿಡಿಯಲು ಕಾರಣವಾಗಿದೆ. ಹೀಗಿರುವಾಗ ದಿನಕ್ಕೆ ಅರ್ಧಗಂಟೆಗಳ ಸಮಯವಾದರೂ ಮೊಬೈಲನ್ನು ದೂರವಿಟ್ಟು ಪುಸ್ತಕ ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳುವುದು ಉತ್ತಮ ಎಂದರು.

ಪಾಲAದಿರ ಕುಟುಂಬದ ಹಿನ್ನೆಲೆ, ಹಿರಿಯರ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ನೀಡಿರುವ ಸೇವೆಯನ್ನು ಸ್ಮರಿಸಿದರು.

ಪುಸ್ತಕ ಪತ್ತಾಯವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಅವರ ಪತ್ನಿ ಕಾಂಚನ ಪೊನ್ನಣ್ಣ, ಕೊಡವರ ಪ್ರತಿಯೊಂದು ಆಭರಣಗಳಿಗೆ, ಹಬ್ಬ-ಆಚರಣೆಗಳಿಗೆ, ಪದ್ಧತಿ-ಪರಂಪರೆಗೆ, ಹಾಕಿ ಉತ್ಸವಕ್ಕೆ ತನ್ನದೇ ಆದಂತಹ ಪ್ರಾಮುಖ್ಯತೆಯೊಂದಿಗೆ ಸಾಂಸ್ಕೃತಿಕವಾದ ಗಾಂಭೀರ್ಯವಿದೆ. ಇವೆಲ್ಲವನ್ನು ಜನಾಂಗದವರು ರಕ್ಷಿಸಬೇಕು. ಆಗ ಮಾತ್ರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಅದೇ ರೀತಿಯ ಘನತೆ-ಗಾಂಭಿರ್ಯದೊAದಿಗೆ ಹಸ್ತಾಂತರಿಸಲು ಸಾಧ್ಯ ಎಂದರು.

ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷÀ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಐನ್‌ಮನೆ, ಮುಂದ್‌ಮನೆಗಳಲ್ಲಿ ಪುಸ್ತಕ ಪತ್ತಾಯ ಸ್ಥಾಪಿಸುವಂತಹ ಅಕಾಡೆಮಿಯ ಯೋಜನೆಯು ಸಮಾಜದಲ್ಲಿ ಸಾಹಿತ್ಯ-ಸಂಸ್ಕೃತಿಯನ್ನು ಬೆಳೆಸುವಲ್ಲಿ ಅನುಕೂಲದಾಯಕವಾಗಿದೆ. ಎಲ್ಲಾ ಕುಟುಂಬಗಳು ಇಂತಹ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತಾಗಲಿ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕೊಡಗಿನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಬದ್ಧತೆಯನ್ನು ಮುನ್ನಡೆಸಲು ಕೊಡವ ಭಾಷೆ-ಸಂಸ್ಕೃತಿಯನ್ನು ಪಾಲಿಸಿಕೊಂಡು ಬರುತ್ತಿರುವ ಎಲ್ಲಾ ಜನಾಂಗಗಳು ಜವಾಬ್ದಾರಿಯುತವಾಗಿ ಒಗ್ಗಟ್ಟಿನ ಹೆಜ್ಜೆ ಇಡಬೇಕೆಂದರು.

ಈ ಸಂದರ್ಭ ಪಾಲಂದಿರ ಕುಟುಂಬದ ಪಟ್ಟೆದಾರ ಪಾಲಂದಿರ ಸೋಮಣ್ಣ ತಮ್ಮ ಅನುಭವದ ನುಡಿಗಳನ್ನಾಡಿ, ಕಾವೇರಿಯ ದರ್ಶನದ ಭಾಗ್ಯಪಡೆದ ಕುಟುಂಬದಲ್ಲಿ ಸಂತೋಷದ ಕ್ಷಣಗಳನ್ನು ಹಾಲು ಕುಡಿದು ಸಂಭ್ರಮಿಸುವ ಸಂದರ್ಭ ‘ಪಾಲ್ ಏಂದಿರ’ ಎಂಬ ದೈವವಾಣಿ ಕೇಳಿ ಬಂದ ಮೇರೆಗೆ ಕ್ರಮೇಣ ಇದೇ ಮನೆತನದ ಹೆಸರನ್ನು ಪಡೆದುಕೊಂಡಿತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಟುಂಬದ ಬಾಳೋಪಾಟ್ ನುರಿತರಾದ ಪಾಲಂದಿರ ಮೊಣ್ಣಪ್ಪ, ಬೊಳಕಾಟ್ ತರಬೇತುದಾರರಾದ ಪಾಲಂದಿರ ರವಿ ಮಂದಣ್ಣರನ್ನು ಸನ್ಮಾನಿಸಲಾಯಿತು. ಕೋಟೆರ ಕುಟುಂಬಸ್ಥರಿಗೆ ಅಕಾಡೆಮಿ ವತಿಯಿಂದ ದುಡಿ ವಿತರಿಸಲಾಯಿತು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಅಕಾಡೆಮಿಯ ಸದಸ್ಯೆöಕಂಬೆಯAಡ ಡೀನಾ ಬೋಜಣ್ಣ, ಕೇಟೋಳಿರ ಕುಟ್ಟಪ್ಪ ರಾಜಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಮೊದಲು ಪಾಲಂದಿರ ಪ್ರಜ್ಞಾ ದರ್ಶನ್ ಪ್ರಾರ್ಥಿಸಿದರು. ಬಲಂಬೇರಿ ಗ್ರಾಮದ ಬೊಳ್ಳಚೆಟ್ಟಿರ ವಿಜಯ ಸಂಗಡಿಗರು ಕಾವೇರಿ ಪುರಾಣವನ್ನು ಬಾಳೋಪಾಟ್ ಮೂಲಕ ಪ್ರಸ್ತುತಪಡಿಸಿದರು. ಪಾಲಂದಿರ ಜಗ ಜೋಯಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಸದಸ್ಯ ನಾಪಂಡ ಗಣೇಶ್ ವಂದಿಸಿದರು.