ಮಡಿಕೇರಿ, ಜೂ. ೨: ಮೂರ್ನಾಡು ೩೩/೧೧ ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರದಿAದ ಹೊರಹೊಮ್ಮುವ ಎಫ್೧ ಪಾರಾಣೆ ಫೀಡರ್‌ಗಳಲ್ಲಿ ತಾ. ೪ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ಮಾರ್ಗದ ನಿರ್ವಹಣೆ ಕಾಮಗಾರಿ ನಡೆಸಬೇಕಿರುವುದರಿಂದ ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಬಲಮುರಿ, ಪಾರಾಣೆ, ಬಾವಲಿ, ಕೈಕಾಡು, ಕಿರುಂದಾಡು, ಎಡಪಾಲ, ಕಡಂಗ, ಕರಡ, ಚೆಯ್ಯಂಡಾಣೆ, ಚೇಲವಾರ, ಮರಂದೋಡ, ಕೊಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಕೋರಿದ್ದಾರೆ.