ಮಡಿಕೇರಿ, ಜೂ. ೨: ಕಳೆದ ಹಲವು ದಿನಗಳಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಸವಾಲಾಗಿದ್ದ ಮಡಿಕೇರಿ ನಗರದ ರಾಜಾಸೀಟು ರಸ್ತೆಯ ಗುಂಡಿಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಆಟೋ ಚಾಲಕ ರೊಬ್ಬರು ಮುಚ್ಚುವ ಮೂಲಕ ಸಾಮಾಜಿಕ ಕಳಕಳಿ ತೋರಿದ್ದಾರೆ. ಯಾವುದೇ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಗಮನ ಹರಿಸದಿದ್ದರೂ, ತಮ್ಮ ಆಟೋದಲ್ಲಿ ಇಟ್ಟಿಗೆ ತುಂಡುಗಳು ಮತ್ತು ಮಣ್ಣನ್ನು ತಂದು ಗುಂಡಿಗಳನ್ನು ಮುಚ್ಚಿ ಸವಾರರಿಗೆ ನೆರವಾದರು. - ಸುಮನ್ ಸುರೇಶ್, ಲಾಲಿಪಾಳ