ಸೋಮವಾರಪೇಟೆ, ಜೂ. ೨: ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಇಂದು ಧಾರಾಕಾರ ಮಳೆ ಸುರಿಯಿತು. ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಭಾರೀ ಮಳೆ ಸುರಿಯಿತು.

ನಿನ್ನೆ ಸಂಜೆಯ ವೇಳೆಗೆ ಗುಡುಗು ಮಿಂಚಿನೊAದಿಗೆ ಮಳೆಗಾಲದ ಪ್ರಥಮ ಮಳೆ ಆಗಮನವಾಗಿದ್ದು, ಇಂದೂ ಸಹ ಆಗಾಗ್ಗೆ ತನ್ನ ಆರ್ಭಟ ತೋರಿತು. ಭಾರೀ ಮಳೆಯಿಂದಾಗಿ ಕುಂದಳ್ಳಿಯಲ್ಲಿ ಮರದ ಕೊಂಬೆಯೊAದು ರಸ್ತೆಗೆ ಅಡ್ಡಲಾಗಿ ಬಿದ್ದು ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು. ಮಳೆಯಿಂದಾಗಿ ಚರಂಡಿ, ತೋಡುಗಳು ತುಂಬಿ ಹರಿದ ಹಿನ್ನೆಲೆ, ಚರಂಡಿಯಲ್ಲಿ ಸಂಗ್ರಹಗೊAಡಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಜ್ಯೂಸ್ ಬಾಟಲ್‌ಗಳು, ಕಲ್ಲು, ಮಣ್ಣು ರಸ್ತೆಯ ಮೇಲೆ ಹರಿದು ಸಂಚಾರಕ್ಕೆ ಸಮಸ್ಯೆಯಾಗಿದೆ. ಇಳಿಜಾರು ಪ್ರದೇಶದಿಂದ ಹರಿದು ಬರುವ ನೀರಿನೊಂದಿಗೆ ಕಲ್ಲುಗಳೂ ಸಹ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿದ್ದು, ದ್ವಿಚಕ್ರ ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿದೆ.

ಆಲೇಕಟ್ಟೆಯಿಂದ ಕೂಡುರಸ್ತೆ ಜಂಕ್ಷನ್‌ವರೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದರಿಂದ ಎಲ್ಲಾ ವಾಹನಗಳು ಆಲೇಕಟ್ಟೆ, ಹಾನಗಲ್ಲುಬಾಣೆ ಅಥವಾ ಕಕ್ಕೆಹೊಳೆ ಜಂಕ್ಷನ್, ಹಾನಗಲ್ಲು, ಹಾನಗಲ್ಲು ಶೆಟ್ಟಳ್ಳಿ ಮೂಲಕ ಯಡೂರು ಮುಖ್ಯರಸ್ತೆ ತೆರಳಿ ಅಲ್ಲಿಂದ ಶಾಂತಳ್ಳಿ ಹಾಗೂ ತೋಳೂರು ಶೆಟ್ಟಳ್ಳಿ ಭಾಗಕ್ಕೆ ಸಂಚರಿಸಬೇಕಿದೆ.

ಹಾನಗಲ್ಲು ಬಾಣೆ ರಸ್ತೆಯಲ್ಲಿ ವಾಹನಗಳ ಅಧಿಕ ಓಡಾಟದಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ರಸ್ತೆಯಲ್ಲಿ ಮೊದಲ ಮಳೆಗೆ ಗುಂಡಿಗಳು ಬಿದ್ದಿವೆ. ತಿರುವು ಸ್ಥಳಗಳಲ್ಲಿ ವಾಹನಗಳು ಅವಘಡಕ್ಕೀಡಾಗುತ್ತಿವೆ. ಕಾಂಕ್ರೀಟ್ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ತುಂಬಿಸದೇ, ಸೂಕ್ತ ಚರಂಡಿ ಅಳವಡಿಸದೇ ಇರುವುದರಿಂದ ವಾಹನಗಳು ರಸ್ತೆ ಬಿಟ್ಟು ಕೆಳಗಿಳಿದರೆ ಮಣ್ಣಿಗೆ ಸಿಲುಕಿಕೊಳ್ಳುತ್ತಿವೆ.

ಹೀಗೆಯೇ ಮುಂದುವರೆದರೆ ಈ ರಸ್ತೆ ಮಳೆಗಾಲ ಮುಗಿಯುವುದರೊಳಗೆ ಸಂಚಾರಕ್ಕೆ ಅಯೋಗ್ಯವಾಗಲಿವೆ. ಇತ್ತ ಕಾಂಕ್ರೀಟ್ ರಸ್ತೆ ಕಾಮಗಾರಿಯೂ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಹೆಚ್ಚಿನ ಸಮಸ್ಯೆಯಾಗುತ್ತಿದೆ. ನಿನ್ನೆ ಹಾಗೂ ಇಂದು ಮಳೆ ಸುರಿದ ಹಿನ್ನೆಲೆ ಕಾಫಿ ಬೆಳೆಗಾರರು ಸಂತಸಗೊAಡಿದ್ದಾರೆ. ತೋಟಗಳಲ್ಲಿ ಗೊಬ್ಬರ ಹಾಕುವ ಕಾರ್ಯಕ್ಕಾಗಿ ಗಿಡಗಳ ಬುಡ ಬಿಡಿಸುವ ಕಾರ್ಯ ಜೋರಾಗಿ ನಡೆಯುತ್ತಿದೆ. ಹಾಗೆಯೇ ಗೊಬ್ಬರ ಖರೀದಿ, ಸಂಗ್ರಹ ಕಾರ್ಯದಲ್ಲಿ ಬೆಳೆಗಾರರು ಮಗ್ನರಾಗಿದ್ದಾರೆ.

ಕಳೆದ ಡಿಸೆಂಬರ್‌ನಿAದಲೇ ಬತ್ತಿ ಹೋಗಿದ್ದ ಪಟ್ಟಣದ ಕಕ್ಕೆಹೊಳೆ ಇದೀಗ ಜೀವ ಕಳೆ ಪಡೆದಿದೆ. ೨ ದಿನಗಳಿಂದ ಆಗಾಗ್ಗೆ ಮಳೆ ಸುರಿಯುತ್ತಿರುವ ಹಿನ್ನೆಲೆ ಕಕ್ಕೆಹೊಳೆಯಲ್ಲಿ ಕೆಸರು ಮಿಶ್ರಿತ ನೀರಿನ ಹರಿವು ಕಂಡುಬAದಿದೆ. - ವಿಜಯ್