ವೀರಾಜಪೇಟೆ, ಜೂ. ೨: ಜಾಗತಿಕ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಹಾಗೂ ಆಯಿಲ್ ದರ ಏರಿಕೆಯಾದ ಕಾರಣ ಆಟೋ ದರ ಏರಿಕೆ ಮಾಡುವುದು ಅನಿವಾರ್ಯ. ಕೂಡಲೇ ಜಿಲ್ಲಾ ಸಂಘ ಸಂಬAಧಪಟ್ಟ ಅಧಿಕಾರಿಗಳೆÉÆಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವಂತೆ ಜೈ ಭಾರತ್ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎನ್.ಎನ್ ಶಿವು ಒತ್ತಾಯಿಸಿದ್ದಾರೆ.
ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೇರಿಕಾ ಹಾಗೂ ಇರಾನ್ ನಡುವಿನ ಯುದ್ಧದ ಹಿನ್ನೆಲೆ ಕೊಲ್ಲಿ ರಾಷ್ಟçಗಳಿಂದ ಸರಿಯಾದ ಪ್ರಮಾಣದ ಪೆಟ್ರೋಲ್ ಹಾಗೂ ಡೀಸೆಲ್ ನಿಗದಿತ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ. ಕಳೆದ ಎರಡು ತಿಂಗಳುಗಳಿAದ ಪೆಟ್ರೋಲ್ ಹಾಗೂ ಡೀಸೆಲ್ ಸರಬರಾಜು ಮಾಡುತ್ತಿರುವ ತೈಲ ಕಂಪೆನಿಗಳು ಭಾರೀ ನಷ್ಟ ಅನುಭವಿಸುತ್ತಿರುವ ಕಾರಣ ತೈಲ ಬೆಲೆಯು ಒಂದು ತಿಂಗಳಲ್ಲಿ ಹಿಂದೆ ಇದ್ದ ದರಕ್ಕಿಂತ ೭ ರೂಪಾಯಿ ಏರಿಕೆ ಕಂಡಿದೆ.
ಆಟೋಗಳ ಕನಿಷ್ಟ ದರ ೪೦ ರೂಪಾಯಿಗಳಾಗಿತ್ತು. ತೈಲ ಬೆಲೆ ಏರಿಕೆಯ ಕಾರಣ ಕೆಲವೊಂದು ಆಟೋ ಚಾಲಕರು ೫೦ ರೂಪಾಯಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಮತ್ತು ಆಟೋ ಚಾಲಕರ ಮಧ್ಯೆ ವಾಗ್ವಾದಗಳು ನಡೆಯುತ್ತಿವೆ. ಸಂಬAಧಪಟ್ಟ ಆರ್‌ಟಿಓ ಅಧಿಕಾರಿಗಳು ಕನಿಷ್ಟ ದರ ೫೦ ರೂಪಾಯಿಗಳಿಗೆ ಏರಿಕೆ ಮಾಡುವುದು ಒಳಿತು ಎಂದು ಹೇಳಿದರು.
ಸದಸ್ಯ ವಸಂತ್ ಮಾತನಾಡಿ, ಆಟೋ ಚಾಲಕರಿಗೆ ಕೇವಲ ೧೫ ಕಿ.ಮೀ ಪರಿಮಿತಿಯನ್ನು ನೀಡಲಾಗಿದೆ. ಆದರೆ ಜಿಲ್ಲೆಯಲ್ಲಿ ವೀರಾಜಪೇಟೆ ಮತ್ತು ಕುಶಾಲನಗರದಲ್ಲಿ ಮಾತ್ರ ಸಿಎನ್‌ಜಿ ಬಂಕ್‌ಗಳಿವೆ. ದೂರದ ಊರಿನಿಂದ ಬಂದು ಗ್ಯಾಸ್ ತುಂಬಿಸಿಕೊAಡು ಹೋಗುವಾಗ ಅಪಘಾತ ಸಂಭವಿಸಿದರೆ ಯಾವುದೇ ವಿಮಾ ಸೌಲಭ್ಯಗಳು ಲಭಿಸುವುದಿಲ್ಲ. ಆದುದರಿಂದ ಆಟೋ ಚಾಲಕರು ಜಿಲ್ಲೆಯಾದ್ಯಂತ ಸಂಚರಿಸಲು ಮುಕ್ತ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸದಸ್ಯ ಸುರೇಶ್ ಕುಮಾರ್ ಮಾತನಾಡಿ, ಇದೊಂದು ಗಂಭೀರ ಸಮಸ್ಯೆಯಾಗಿದ್ದು ಜಿಲ್ಲಾಧ್ಯಕ್ಷ ಮೇದಪ್ಪ ಅವರು ಆರ್‌ಟಿಓ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಅಲ್ಲದೆ ಪಟ್ಟಣದಲ್ಲಿನ ಬಹುತೇಕ ರಸ್ತೆಗಳಲ್ಲಿ ರೋಡ್ ಕಟ್ಟಿಂಗ್ ಮಾಡಿ ಗುಂಡಿ ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು ಕೂಡಲೇ ರಸ್ತೆ ಅಗಲೀಕರಣವನ್ನು ನಡೆಸುವಂತೆ ಆಗ್ರಹಿಸಿದರು.
ಗೋಷ್ಠಿಯಲ್ಲಿ ಅರಣ್ ಬಿ.ಎಸ್, ಕಿರಣ್, ರೋಷನ್ ಎಸ್, ಶುಭಕರ ಉಪಸ್ಥಿತರಿದ್ದರು.