ಮಡಿಕೇರಿ, ಮೇ.೨೮: ಬೆಂಗಳೂರಿನಲ್ಲಿ ನಡೆದ ೨೦೨೫-೨೬ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಭರತನಾಟ್ಯ, ಕೂಚುಪುಡಿ ಮತ್ತು ಒಡಿಸ್ಸಿ ವಿಭಾಗದಲ್ಲಿ ಮಿಲನ ಕೆ. ಭರತ್ ಪ್ರಶಸ್ತಿಯನ್ನು ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿರುವ ಮಿಲನ, ನೃತ್ಯ ಗುರು ವಿದ್ವಾನ್ ರಾಜೇಶ್ ಆಚಾರ್ಯ ಅವರಿಂದ ಮಾರ್ಗದರ್ಶನ ಪಡೆದುಕೊಂಡಿದ್ದರು.
ಇವರು ಅಭಿನಯ ಕಲಾ ಮಿಲನ ಚಾರಿಟೆಬಲ್ ಟ್ರಸ್ಟ್ ಅಡಿಯಲ್ಲಿ ಶನಿವಾರಸಂತೆ ಮತ್ತು ಭಾಗಮಂಡಲದಲ್ಲಿ ನಾಟ್ಯ ಮಿಲನ ನೃತ್ಯ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ.