ಮಡಿಕೇರಿ, ಮೇ ೨೭: ಕರ್ನಾಟಕ ರಾಜ್ಯದಲ್ಲಿ ಇದೀಗ ವಾಣಿಜ್ಯೇತರ-ವಾಣಿಜ್ಯ ಕಾರ್ಯಕ್ರಮಗಳು ಅಂದರೆ ಸಭೆ, ಸಮಾರಂಭಗಳಲ್ಲಿ ಸೇರಿದಂತೆ ವಾಣಿಜ್ಯ ಕಾರ್ಯಕ್ರಮ ಸಂದರ್ಭದಲ್ಲಿ ಮದ್ಯ ವಿತರಣೆಗೆ ವಿಧಿಸಲಾಗುತ್ತಿದ್ದ ಪರವಾನಗಿ ಶುಲ್ಕವನ್ನು ದ್ವಿಗುಣಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಇಂತಹ ಕಾರ್ಯಕ್ರಮಗಳಲ್ಲಿ ಮದ್ಯ ವಿತರಣೆಗೆ ಸಂಬAಧಿಸಿದAತೆ ಈ ಹಿಂದಿನಿAದಲೂ ಅಬಕಾರಿ ಇಲಾಖೆ ಮೂಲಕ ನಿಗದಿತ ಶುಲ್ಕ ಪಾವತಿಸಬೇಕು ಎಂಬ ನಿಯಮವಿದೆ. ಇದೀಗ ಈ ತನಕ ಇದ್ದ ದರವನ್ನು ಹೆಚ್ಚಳ ಮಾಡಲಾಗಿದೆ. ಈ ದರ ಪರಿಷ್ಕರಣೆ ಅಬಕಾರಿ ನಿಯಮದಡಿ ಬರುವ ಸಿಎಲ್-೫ ಕೆಟಗರಿಗೆ ಅನ್ವಯವಾಗಲಿದೆ. ಈ ಸಿಎಲ್-೫ ಕೆಟಗರಿಯಲ್ಲಿ ಮೂರು ಹಂತಗಳAತೆ ಈ ಶುಲ್ಕ ಪರಿಷ್ಕರಣೆಯಾಗಿದೆ. ವಾಣಿಜ್ಯೇತರವಾದ ಪರ್ಸನಲ್ ಗ್ಯಾದರಿಂಗ್ (ಖಾಸಗಿ ಸಮಾರಂಭ) ನಲ್ಲಿ ಮದುವೆ, ಔತಣಕೂಟ, ಬೀಗರೂಟ, ನಾಮಕರಣ, ಬರ್ತ್ಡೇ.. ಇತ್ಯಾದಿ ಕಾರ್ಯಕ್ರಮಗಳಲ್ಲಿ ಮದ್ಯಬಳಕೆಗೆ ಇದ್ದ ಶುಲ್ಕವನ್ನು ದಿನವೊಂದಕ್ಕೆ ರೂ. ೧೧,೫೦೦ ರಿಂದ ರೂ. ೨೦ ಸಾವಿರಕ್ಕೆ ಹೆಚ್ಚಿಸಲಾಗಿದೆ. ೭ ದಿನ ಮುಂಚಿತವಾಗಿ ಈ ಪರವಾನಗಿ ಪಡೆಯಬೇಕು, ಅದೇ ತ್ವರಿತ (ತತ್ಕಾಲ್) ಆದಲ್ಲಿ ರೂ. ೪೦ ಸಾವಿರ ಆಗಲಿದೆ. ವಾಣಿಜ್ಯ ಕಾರ್ಯಕ್ರಮಗಳು ಅಂದರೆ ಗ್ರಾಹಕರಿಂದ ಹಣ ಪಡೆದು ಮದ್ಯ ವಿತರಿಸುವ ಸಂದರ್ಭದ ವಿಚಾರಕ್ಕೆ ಸಂಬAಧಿಸಿದAತೆ ದಿನವೊಂದಕ್ಕೆ ರೂ. ೭೫ ಸಾವಿರ ಶುಲ್ಕ ಏರಿಕೆಯಾಗಿದೆ. ತತ್ಕಾಲ್ ವಾಣಿಜ್ಯ ಕಾರ್ಯಕ್ರಮಕ್ಕೆ ರೂ. ೧.೫೦ ಲಕ್ಷದಷ್ಟು ಶುಲ್ಕ ಹೆಚ್ಚಿಸಲಾಗಿದೆ. ಇವುಗಳನ್ನು ಸಿಎಲ್ ೫ ಕ್ಯಾಟಗರಿಯಲ್ಲಿ ಸಾಂದರ್ಭಿಕ ಸನ್ನದು ಎನ್ನಲಾಗುತ್ತದೆ. ಈ ಬಗ್ಗೆ ಕರ್ನಾಟಕ ರಾಜ್ಯ ಪತ್ರದಲ್ಲೂ ಆದೇಶ ಹೊರಡಿಸಲಾಗಿದೆ.
ಆರ್ಥಿಕ ಇಲಾಖೆಯು ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ, ವಾಣಿಜ್ಯೇತರ (ಓoಟಿ-ಛಿommeಡಿಛಿiಚಿಟ) ಮತ್ತು ವಾಣಿಜ್ಯ (ಅommeಡಿಛಿiಚಿಟ) ಪಾರ್ಟಿಗಳ ಮದ್ಯದ ಪರ್ಮಿಟ್ ದರಗಳನ್ನು ಹೆಚ್ಚಿಸಲಾಗಿದೆ. ಸಣ್ಣ ಪಾರ್ಟಿಗಳಲ್ಲಿ ಇದುವರೆಗೆ ಪ್ರತಿದಿನಕ್ಕೆ ೧೧,೫೦೦ ರೂ. ಇದ್ದ ಪರವಾನಗಿ ಶುಲ್ಕವನ್ನು ಮಂಗಳವಾರ ಹೊರಡಿಸಿರುವ ನೂತನ ಆದೇಶದ ಪ್ರಕಾರ ದಿಢೀರಾಗಿ ೨೦,೦೦೦ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಮದ್ಯ ಪರವಾನಗಿಯನ್ನು ಪಾರ್ಟಿ / ಭೋಜನ ಆಯೋಜಿಸುವ ಕನಿಷ್ಟ ೭ ದಿನಗಳ ಮುಂಚಿತವಾಗಿಯೇ ಪಡೆಯಬೇಕು. ಒಂದು ವೇಳೆ ದಿಢೀರಾಗಿ ಪಾರ್ಟಿ ಆಯೋಜಿಸಿ ಮದ್ಯ ವಿತರಣೆ ಮಾಡಬಯಸಿದರೆ ಕಾರ್ಯಕ್ರಮಕ್ಕೆ ೨೪ ಗಂಟೆಗಳ ಮುಂಚೆ ತುರ್ತು ಅನುಮತಿಯನ್ನೂ ಇಲಾಖೆ ನೀಡುತ್ತದೆ. ಆದರೆ ಈ ತತ್ಕಾಲ್ ಯೋಜನೆಯಡಿ ಒಂದು ದಿನಕ್ಕೆ ಬರೋಬ್ಬರಿ ೪೦,೦೦೦ ರೂ.ಪಾವತಿಸಬೇಕಾಗುತ್ತದೆ.
ಸಂಗೀತ ಕಚೇರಿಗಳು (ಅoಟಿಛಿeಡಿಣs), ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರದರ್ಶನಗಳು, ಕಾರ್ಪೊರೇಟ್ ಈವೆಂಟ್‌ಗಳು ಮತ್ತು ಹೊಸ ವರ್ಷದ ಆಚರಣೆಗಳಂತಹ ವಾಣಿಜ್ಯ (ಅommeಡಿಛಿiಚಿಟ) ಪಾರ್ಟಿಗಳಿಗೆ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಏರಿಸಲಾಗಿದ್ದು, ಪ್ರತಿದಿನಕ್ಕೆ ೭೫,೦೦೦ ರೂ. ನಿಗದಿಪಡಿಸಲಾಗಿದೆ. ೨೪ ಘಂಟೆಗಳ ಮೊದಲು ನೀಡುವ ತುರ್ತು ಅನುಮತಿಗಾಗಿ ಪ್ರತಿದಿನಕ್ಕೆ ೧.೫ ಲಕ್ಷ ರೂ. ಶುಲ್ಕ ತೆರಬೇಕಾಗುತ್ತದೆ.
ಸಣ್ಣ ಪ್ರಮಾಣದ ಪಾರ್ಟಿಗೆ ಶುಲ್ಕವಿಲ್ಲ
ಮನೆಯಲ್ಲಿ ಅಥವಾ ಹೊರಗೆ ಸೀಮಿತ ಪ್ರಮಾಣದ ಅತಿಥಿಗಳಿಗೆ ಸಣ್ಣ ಪ್ರಮಾಣದ ಪಾರ್ಟಿ ಮಾಡುವವರಿಗೆ ಅಬಕಾರಿ ಇಲಾಖೆ ಒಂದು ಸಣ್ಣ ವಿನಾಯಿತಿ ನೀಡಿದೆ. ಖಾಸಗಿ ಪಾರ್ಟಿಗಳಲ್ಲಿ ೯ ಲೀಟರ್ ಮದ್ಯ (Iಒಈಐ) ಮತ್ತು ೧೮ ಲೀಟರ್ ಬಿಯರ್ ಅಥವಾ ವೈನ್ ಮಿತಿಯೊಳಗೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮದ್ಯ ಬಳಸಲು ಯಾವುದೇ ರೀತಿಯ ಅಬಕಾರಿ ಪರವಾನಗಿ ಪಡೆಯುವ ಅಗತ್ಯವಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಮಿತಿ ದಾಟುವಂತಿದ್ದರೆ ಕಡ್ಡಾಯವಾಗಿ ಅಐ-೫ ಲೈಸೆನ್ಸ್ ಪಡೆಯಲೇಬೇಕು. ಒಂದು ವೇಳೆ ಲೈಸೆನ್ಸ್ ಪಡೆಯದೇ ಪಾರ್ಟಿ ಆಯೋಜನೆ ಮಾಡಿ ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಮದ್ಯ ಪತ್ತೆ ಆದರೆ ಅಧಿಕಾರಿಗಳು ದುಪ್ಪಟ್ಟು ದಂಡ ವಿಧಿಸುವ ಜತೆಗೆ ಪ್ರಕರಣವನ್ನೂ ಎದುರಿಸಬೇಕಾಗುತ್ತದೆ. ವಾಣಿಜ್ಯೇತರ ಕಾರ್ಯಕಮಗಳಲ್ಲದೆ ಕಲ್ಯಾಣ ಮಂಟಪಗಳಲ್ಲಿ, ಪಾರ್ಟಿ ಹಾಲ್‌ಗಳಲ್ಲಿ ಏರ್ಪಡಿಸುವ ಕೌಟುಂಬಿಕ ಸಮಾರಂಭಗಳಿಗೂ ಇನ್ನು ಮುಂದೆ ಕಡ್ಡಾಯವಾಗಿ ಸಿಎಲ್-೫ ಪರವಾನಗಿ ಪಡೆಯುವುದು ಕಡ್ಡಾಯ ಎಂದು ರಾಜ್ಯ ಅಬಕಾರಿ ಆಯುಕ್ತ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.