ಮಡಿಕೇರಿ, ಮೇ ೨೬: ಗೋಣಿಕೊಪ್ಪ ಸಮೀಪದ ದೇವರಪುರ ಗ್ರಾಮದ ಭದ್ರಕಾಳಿ ದೇವಾಲಯದಲ್ಲಿ ಆಚರಿಸುವ ಬೇಡು ಹಬ್ಬದ ಅಂಗವಾಗಿ ವಿವಿಧ ರೀತಿಯ ವೇಷ ಧರಿಸಿ ಹಣ ಸಂಗ್ರಹಿಸುವವರಿಗೆ ಪೊಲೀಸ್ ಇಲಾಖೆ ಕೆಲವೊಂದು ನಿರ್ಬಂಧ ವಿಧಿಸಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ತಾ. ೨೭ ಹಾಗೂ ೨೮ ರಂದು ಬೇಡು ಹಬ್ಬದ ಹಿನ್ನೆಲೆ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದ ಭಕ್ತಾದಿಗಳು ಬಂದು ದೇವಸ್ಥಾನದಲ್ಲಿ ಹರಕೆ ತೀರಿಸುವ ಆಚರಣೆಯಿದ್ದು, ಈ ಸಂದರ್ಭ ಕೆಲವು ಭಕ್ತಾದಿಗಳು, ವೇಷಾಧಾರಿಗಳು ಮದ್ಯ ಸೇವನೆ ಮಾಡಿ ಗೋಣಿಕೊಪ್ಪಲು ಪಟ್ಟಣ ಮತ್ತು ತಿತಿಮತಿ ರಸ್ತೆಯಲ್ಲಿನ ಅಂಗಡಿ ಮಳಿಗೆಗಳಿಗೆ ತೆರಳಿ ಒತ್ತಾಯವಾಗಿ ಹಣವನ್ನು ನೀಡುವಂತೆ ಪೀಡಿಸುವುದು, ಸಾರ್ವಜನಿಕರು, ವಾಹನಗಳನ್ನು ಅಡ್ಡಗಟ್ಟುವುದು ಹಾಗೂ ಮಹಿಳೆಯರೊಂದಿಗೆ ಕೆಲವು ವೇಷಾಧಾರಿಗಳು ಅಸಭ್ಯವಾಗಿ ವರ್ತಿಸಿ ಕೆಟ್ಟ ಪದಗಳಿಂದ ಬೈಯುತ್ತಾ ತೊಂದರೆ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆ ವೇಷಾಧಾರಿ ಭಕ್ತಾದಿಗಳು ಸಾರ್ವಜನಿಕರನ್ನು, ವಾಹನಗಳನ್ನು ಬಲವಂತವಾಗಿ ಅಡ್ಡಗಟ್ಟಿ ಹಣವನ್ನು ನೀಡುವಂತೆ ಒತ್ತಾಯಿಸುವುದನ್ನು ನಿಷೇಧಿಸಲಾಗಿದೆ. ಅಂಗಡಿಗಳಿಗೆ ತೆರಳಿ ಬಲವಂತವಾಗಿ ಹಣವನ್ನು ನೀಡುವಂತೆ ಒತ್ತಾಯಿಸುವುದನ್ನು ನಿಷೇಧಿಸಲಾಗಿದೆ. ವೇಷಾಧಾರಿ ಭಕ್ತಾದಿಗಳು ಮಹಿಳೆಯರು ಮತ್ತು ಮಕ್ಕಳೊಂದಿಗೆ ಸೌಜನ್ಯದಿಂದ ವರ್ತಿಸಿ ಯಾವುದೇ ತೊಂದರೆಯಾಗದAತೆ ನೋಡಿಕೊಳ್ಳಬೇಕು ಹಾಗೂ ಮಧ್ಯಪಾನ ಮಾಡಿ ಅಸಭ್ಯವಾಗಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ವರ್ತಿಸಿ ಅವಾಚ್ಯ ಪದಗಳಿಂದ ಬೈಯುತ್ತಾ ಸಾರ್ವಜನಿಕರಿಗೆ ತೊಂದರೆ ನೀಡುವುದನ್ನು ನಿಷೇಧಿಸಲಾಗಿದೆ. ಅಯ್ಯಪ್ಪ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ವಾಹನಗಳ ನಿಲುಗಡೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ವೇಷಾಧಾರಿ ಭಕ್ತಾದಿಗಳು ದೇಹದ ಮೇಲೆ ಎಣ್ಣೆಯನ್ನು ಸುರಿದುಕೊಂಡು ದೊಣ್ಣೆ ಮತ್ತು ಇತರೇ ಮಾರಕಾಯುಧಗಳನ್ನು ಹಿಡಿದುಕೊಂಡು ದೇವಸ್ಥಾನದ ಒಳಗೆ ಹಾಗೂ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಜೀವ ಕೋಳಿಗಳನ್ನು ಎಸೆಯುವುದನ್ನು ಹಾಗೂ ಪ್ರಾಣಿ ಹಿಂಸೆ ಮಾಡುವುದನ್ನು ನಿಷೇಧಿಸಲಾಗಿದೆ.

ಬೇಡು ಹಬ್ಬ ಆಚರಣೆಗಾಗಿ ಆಗಮಿಸಿರುವ ಭಕ್ತಾದಿಗಳು, ವೇಷಾಧಾರಿಗಳು ಸೂಚನೆ ಉಲ್ಲಂಘಿಸಿದಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಸಿದ್ದಾರೆ.