ಮಡಿಕೇರಿ, ಮೇ.೨೫: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ೨೦೨೦ ಮತ್ತು ಜಾನುವಾರು ಸಾಗಾಟ ನಿಯಮಾವಳಿ ೨೦೨೧ರ ಪ್ರಕಾರ ಗೋಹತ್ಯೆ ಹಾಗೂ ಅಕ್ರಮ ಗೋಸಾಗಾಟ ಕಾನೂನು ಬಾಹಿರವಾಗಿದ್ದು, ಮುಂಬರುವ ಬಕ್ರೀದ್ ಹಬ್ಬದ ಸಂದರ್ಭ ಈ ನಿಯಮವನ್ನು ಗಾಳಿಗೆ ತೂರಿ ಗೋವಧೆ ನಡೆದರೆ ಕಾನೂನು ಉಲ್ಲಂಘಿಸಿದವರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕ್ರಮ ವಹಿಸಬೇಕೆಂದು ಜಿಲ್ಲಾ ವಿಶ್ವ ಹಿಂದೂ ಪರಿಷದ್ ಒತ್ತಾಯಿಸಿದೆ.
ಈ ವಿಷಯ ಸಂಬAಧ ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಅವರು, ಹಬ್ಬ ಸಂದರ್ಭ ಇತರ ಪ್ರಾಣಿಗಳನ್ನು ಸೇವನೆ ಮಾಡಬಹುದಾಗಿದೆ. ಆದರೆ ಹಿಂದೂ ಧರ್ಮದ ಪಾಲಿಗೆ ದೇವರಂತಿರುವ ಗೋವುಗಳನ್ನು ವಧೆ ಮಾಡಿ ಸೇವನೆ ಮಾಡುವುದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ. ಕರ್ನಾಟಕದಲ್ಲಿ ಗೋವಧೆ ಹಾಗೂ ಸಾಗಾಣೆ ಕಾನೂನುಬಾಹಿರ ಕೂಡ ಆಗಿದೆ. ಆದರೂ ಬಕ್ರೀದ್ ಸಂದರ್ಭ ಕಾನೂನನ್ನು ಲೆಕ್ಕಿಸದೆ ಗೋಹತ್ಯೆ ಹಾಗೂ ಮಾಂಸ ಸೇವನೆ ನಡೆಯುತ್ತದೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ಎಚ್ಚತ್ತುಕೊಳ್ಳಬೇಕಿದೆ ಎಂದರು.
ತಮ್ಮ ತಮ್ಮ ಠಾಣೆಗಳ ಬೀಟ್ ಪೊಲೀಸರನ್ನು ಉಪಯೋಗಿಸಿ ಅವರವರ ವ್ಯಾಪ್ತಿಯಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ಗುರುತಿಸಿ ದಾಳಿ ಮಾಡಿ ಶಾಶ್ವತವಾಗಿ ಮುಚ್ಚಿಸಬೇಕು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಜಾನುವಾರು ಹತ್ಯೆ ನಡೆದ ಮನೆ, ಕಟ್ಟಡ, ಖಾಲಿ ಜಮೀನುಗಳನ್ನು ಜಪ್ತಿ ಮಾಡಿ ಸರಕಾರಕ್ಕೆ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಬೇಕು. ಆರೋಪಿಗಳಿಗೆ ೭ ವರ್ಷ ಶಿಕ್ಷೆ ಹಾಗೂ ಜಾನುವಾರು ವಧೆ ಅಥವಾ ವಧೆ ಪ್ರಯತ್ನಕ್ಕೆ ಪ್ರತಿಯೊಂದು ಜಾನುವಾರಿಗೆ ಒಂದು ಲಕ್ಷ ದಂಡ ವಿಧಿಸಬೇಕು.
ಈ ಅಕ್ರಮ ಕಸಾಯಿಖಾನೆಗಳಲ್ಲಿ ಮಾಂಸ ಖರೀದಿಸುವವರನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷಿಸಬೇಕು. ಪ್ರತಿಯೊಂದು ಬೀಫ್ ಸ್ಟಾಲ್‌ಗಳಲ್ಲಿ ಬೀಫ್ ಮಾರಾಟ ಆದಾಗ ತನಿಖೆ ನಡೆಸಬೇಕು. ಪರ ರಾಜ್ಯಗಳಿಂದ ಬೀಫ್ ತಂದಿರುವೆನೆAದು ಹೇಳಿದರೆ ಈ ಬಗ್ಗೆ ತೀವ್ರ ತನಿಖೆ ನಡೆಸಬೇಕು.
ಅಕ್ರಮ ಜಾನುವಾರು ಸಾಗಾಟ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ಯಾವುದೇ ವಾಹನದಲ್ಲಿ ಕಾನೂನು ನಿಯಮಾವಳಿ ಮೀರಿ ಜಾನುವಾರು ಸಾಗಾಟ ಆಗದಂತೆ ತಡೆಯಲು ಈಗಿನಿಂದಲೇ ೨೪ ಗಂಟೆ ಗಸ್ತು ಸ್ಕಾ÷್ವಡ್ ನಿಯೋಜಿಸಬೇಕು ಎಂದರು.
ಬಕ್ರೀದ್ ಸಂದರ್ಭದಲ್ಲಿ ದನ, ಕರು, ಹೋರಿ ಹದಿಮೂರು ವರ್ಷದ ಒಳಗಿನ ಎಮ್ಮೆ ಕೋಣ ಇವುಗಳ ವಧೆ, ಬಲಿ (ಕುರ್ಬಾನಿ) ನಿಷೇಧ ಇರುವ ಬಗ್ಗೆ ಪೊಲೀಸ್ ಮತ್ತು ಇತರ ಇಲಾಖಾ ವತಿಯಿಂದ ವ್ಯಾಪಕ ಪ್ರಚಾರ ಮಾಡಬೇಕು ಎಂದರು.
ಹೋರಾಟದ ಎಚ್ಚರಿಕೆ
ಈ ಬಾರಿ ಬಕ್ರೀದ್ ಹಬ್ಬ ಸಂದರ್ಭ ಅಕ್ರಮ ಗೋಸಾಗಾಟ ಗೋಹತ್ಯೆ ನಡೆಯದಂತೆ ಪೊಲೀಸ್ ಇಲಾಖೆ ಕ್ರಮ ವಹಿಸಬೇಕೆಂದು ಕೊಡಗು ಭಜರಂಗದಳದ ಸಂಯೋಜಕ ವಿನಯ್ ಕುಮಾರ್ ಒತ್ತಾಯಿಸಿದರು. ಎಲ್ಲಾದರೂ ಜಿಲ್ಲೆಯಲ್ಲಿ ಹಬ್ಬದ ಸಂದರ್ಭ ಗೋಹತ್ಯೆಗೆ ಅವಕಾಶ ಮಾಡಿಕೊಟ್ಟರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು. ಹೋರಾಟ ತೀವ್ರ ರೂಪ ತಾಳಿ ಸಂಘರ್ಷ ಎದುರಾದರೆ ಇದಕ್ಕೆ ಪೊಲೀಸ್ ಇಲಾಖೆಯೇ ಜವಾಬ್ದಾರಿ ಎಂದು ಈ ಸಂದರ್ಭ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿ.ಹೆಚ್.ಪಿ ಜಿಲ್ಲಾಧ್ಯಕ್ಷ ಪುದಿಯೊಕ್ಕಡ ರಮೇಶ್, ಭಜರಂಗದಳದ ಸಹ ಸಂಯೋಜಕ ದುರ್ಗೇಶ್, ಭಜರಂಗದಳ ಮಡಿಕೇರಿ ತಾಲೂಕು ಸಹ ಸಂಯೋಜಕ ಮುಕುಂದ್ ಹಾಜರಿದ್ದರು.