ಮಡಿಕೇರಿ, ಮೇ ೨೫; ತೈಲ ಬೆಲೆ ಕೊರತೆ ಹಿನ್ನೆಲೆಯಲ್ಲಿ ರಾಷ್ಟçದ ಪ್ರಧಾನಿ ನರೇಂದ್ರ ಮೋದಿ ಅವರು ವಾಹನಗಳಲ್ಲಿ ಓಡಾಟ, ಹೆಚ್ಚಿನ ಬಳಕೆಯನ್ನು ಕಡಿಮೆ ಮಾಡುವಂತೆ ನೀಡಿರುವ ಕರೆಯನ್ನು ಮನ್ನಿಸಿರುವ ಮಾಜಿ ಸಚಿವ ಹಾಗೂ ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರಿಂದು ಸಾರಿಗೆ ಸಂಸ್ಥೆಯ ಬಸ್ಸನ್ನೇರಿ ಬೆಂಗಳೂರಿಗೆ ಪಯಣ ಬೆಳೆಸಿದರು.
ಇಂದು ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ತಮ್ಮ ಪತ್ನಿ ಶೈಲ ಅಪ್ಪಚ್ಚು ಸಹಿತ ಸಾರಿಗೆ ಸಂಸ್ಥೆಯ ಐರಾವತ ಬಸ್ನಲ್ಲಿ ಬೆಂಗಳೂರಿಗೆ ಪಯಣಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರಂಜನ್; ಕೊಲ್ಲಿ ರಾಷ್ಟçದಲ್ಲಿ ಯುದ್ಧದ ಪರಿಣಾಮದಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಿತ ವಾಹನ ಬಳಕೆಯೊಂದಿಗೆ ತೈಲ ಬಳಕೆಯನ್ನು ಕಡಿಮೆ ಮಾಡುವಂತೆ ಕರೆ ನೀಡಿದ್ದಾರೆ. ಈ ಕರೆಗೆ ದೇಶಾದ್ಯಂತ ಉತ್ತಮ ಸ್ಪಂದನ ಕಂಡು ಬರುತ್ತಿದೆ. ತಾವು ಕೂಡ ಕರೆಯನ್ನು ಮನ್ನಿಸಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವದಾಗಿ ಹೇಳಿದರು. ಜನತೆ ಕೂಡ ಈ ಕರೆಗೆ ಸ್ಪಂದಿಸಬೇಕಾಗಿದೆ. ಒಂದು ವಾಹನದಲ್ಲಿ ಒಬ್ಬರೇ ಪಯಣಿಸುವದಕ್ಕಿಂತ ನಾಲ್ಕೆöÊದು ಮಂದಿ ಒಟ್ಟುಗೂಡಿ ಪಯಣಿಸುವದರಿಂದ ಇಂಧನ ಉಳಿಸಬಹುದು ಎಂದು ಹೇಳಿದರು. ದಿನದಿಂದ ದಿನಕ್ಕೆ ಇಂಧನ ದರ ಹೆಚ್ಚಾಗುತ್ತಿದೆ. ಭಾರತಕ್ಕೆ ಅರಬ್ ರಾಷ್ಟçದಿಂದ ಇಂದನ ಸರಬರಾಜಾಗುತ್ತಿದ್ದು, ಬೆಲೆ ಹೆಚ್ಚಳ ಅಲ್ಲಿಂದಲೇ ಆಗುತ್ತಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದ ಸಂದರ್ಭದಲ್ಲಿ ತೈಲ ಬೆಲೆ ಹೆಚ್ಚಳವಾದ ಸಂದರ್ಭದಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಜನರಿಗೆ ಹೊರೆಯಾಗದಂತೆ ತೈಲದ ಮೇಲೆ ತೆರಿಗೆಯನ್ನು ಶೇ.೫ರಷ್ಟು ಕಡಿತ ಮಾಡಲಾಗಿತ್ತು. ಈಗಲೂ ತೆರಿಗೆ ಕಡಿಮೆ ಮಾಡಲು ರಾಜ್ಯ ಸರಕಾರಕ್ಕೆ ಅವಕಾಶವಿದ್ದು, ಕಡಿಮೆ ಮಾಡಿದ್ದಲ್ಲಿ ಜನರಿಗೆ ತೈಲದ ಮೇಲಿನ ಹೊರೆಯನ್ನು ಕಡಿಮೆ ಮಾಡಿದಂತಾಗುತ್ತದೆ. ಈ ಬಗ್ಗೆ ರಾಜ್ಯ ಸರಕಾರ ಗಮನ ಹರಿಸಬೇಕಿದೆ. ಇದರೊಂದಿಗೆ ಪ್ರಧಾನಿ ಕರೆಯಂತೆ ಜನತೆ ವಿದೇಶಿ ಪ್ರಯಾಣ ಕೂಡ ಕಡಿಮೆ ಮಾಡಿದ್ದು, ಪರಿಸ್ಥಿತಿಯನ್ನು ಎಲ್ಲರೂ ಕೂಡ ಪ್ರಧಾನಿ ಕರೆಗೆ ಮನ್ನಣೆ ನೀಡುವಂತೆ ಮನವಿ ಮಾಡಿದರು.