ಸೋಮವಾರಪೇಟೆ, ಮೇ ೨೨: ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊAಡು ೧ ವರ್ಷ ಪೂರ್ಣಗೊಂಡಿದ್ದು, ಶಾಸಕ ಡಾ. ಮಂತರ್ ಗೌಡ ಅವರ ಶ್ರಮದಿಂದ ಸರ್ಕಾರದ ಯೋಜನೆ ಅನುಷ್ಠಾನಗೊಂಡಿದೆ. ಆದರೆ ಪ್ರಸ್ತುತ ಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರ ಲಭಿಸುತ್ತಿಲ್ಲ. ಕ್ಯಾಂಟೀನ್‌ನ ವ್ಯವಸ್ಥೆ ಸುಧಾರಣೆಗೆ ಶಾಸಕರು ಗಮನ ಹರಿಸಬೇಕೆಂದು ಇಂದಿರಾ ಗಾಂಧಿ ಅಭಿಮಾನಿಗಳ ಸಂಘ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಹೆಚ್.ಎ ನಾಗರಾಜು ಅವರು, ಸೋಮವಾರಪೇಟೆಯಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಇಂದಿರಾ ಗಾಂಧಿ ಅಭಿಮಾನಿಗಳ ಸಂಘ ಹಲವಷ್ಟು ಹೋರಾಟಗಳನ್ನು ನಡೆಸಿತ್ತು. ಕೊನೆಗೂ ಶಾಸಕ ಮಂತರ್ ಗೌಡ ಅವರ ಶ್ರಮದಿಂದ ಕ್ಯಾಂಟೀನ್ ಆರಂಭವಾಯಿತು. ಆರಂಭದಲ್ಲಿ ಉತ್ತಮವಾಗಿದ್ದ ಇಂದಿರಾ ಕ್ಯಾಂಟೀನ್ ಇದೀಗ ನಿರೀಕ್ಷೆಯಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂದರು.
ಆರAಭದಲ್ಲಿ ಸರ್ಕಾರದಿಂದ ಒಂದು ಊಟಕ್ಕೆ ರೂ. ೬೫ ಸಹಾಯಧನ ನೀಡಲಾಗುತ್ತಿದೆ ಎಂದಿದ್ದರು. ಇದೀಗ ಸರಿಯಾಗಿ ಬೆಳಗಿನ ತಿಂಡಿ ಸಿಗುತ್ತಿಲ್ಲ. ಹಿಂದಿನAತೆ ರುಚಿಯೂ ಇಲ್ಲ. ಅನ್ನ ಸಾಂಬಾರ್ ಉತ್ತಮವಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅಡುಗೆ ಅನಿಲದ ಸಮಸ್ಯೆ ಎಂದು ಸಬೂಬು ನೀಡುತ್ತಿದ್ದಾರೆ ಎಂದು ನಾಗರಾಜ್ ತಿಳಿಸಿದರು.
ಪ್ರಸ್ತುತ ಮೂರೂ ಹೊತ್ತು ಕೇವಲ ಚಿತ್ರಾನ್ನ ನೀಡುತ್ತಿದ್ದಾರೆ. ಅಡುಗೆ ಅನಿಲದ ಸಮಸ್ಯೆ ಮುಗಿದ ತಕ್ಷಣ ಶಾಸಕರು, ಪ.ಪಂ ಮುಖ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಶುಚಿ-ರುಚಿ ಊಟ ಲಭಿಸುವಂತಾಗ ಬೇಕು. ಮೆನು ಕಾರ್ಡ್ನಲ್ಲಿ ನಿಗದಿ ಪಡಿಸಿರುವಂತೆ ಊಟ ತಿಂಡಿ ನೀಡಬೇಕು. ಮಾಜೀ ಪ್ರಧಾನಿಗಳ ಹೆಸರಿನಲ್ಲಿ ನಡೆಯುತ್ತಿರುವ ಸರ್ಕಾರದ ಯೋಜನೆಯನ್ನು ನಿಷ್ಪçಯೋಜಕವಾಗಲು ಬಿಡಬಾರದು ಎಂದರು.
ಇದರೊAದಿಗೆ ಕುಂಬೂರಿನಲ್ಲಿ ಬಡವರು ನಿವೇಶನಕ್ಕಾಗಿ ಹೋರಾಟ ಮಾಡುತ್ತಿದ್ದರೂ ಸರ್ಕಾರ ಯಾವುದೇ ಸ್ಪಂದನೆ ನೀಡಿಲ್ಲ. ಈ ಬಗ್ಗೆ ಶಾಸಕರು ಗಮನ ಹರಿಸಬೇಕು. ಖಾಸಗಿ ಕ್ಲಬ್‌ನವರು ಬೇಳೂರು ಬಾಣೆಗೆ ಅಳವಡಿಸಿರುವ ಬೇಲಿ ತೆರವು ಮಾಡಬೇಕು. ಈ ನಿಟ್ಟಿನ ಹೊರಾಟಕ್ಕೆ ಇಂದಿರಾ ಗಾಂಧಿ ಅಭಿಮಾನಿಗಳ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದು ನಾಗರಾಜ್ ಹೇಳಿದರು.
ಪ.ಪಂ. ವ್ಯಾಪ್ತಿಯಲ್ಲಿರುವ ಪೌರ ಕಾರ್ಮಿಕರಿಗೆ ಈವರೆಗೆ ನಿವೇಶನ ನೀಡಿಲ್ಲ. ನಿವೇಶನದ ಕಡತ ಕಳ್ಳತನ ಆದ ನಂತರ ಏನಾಯಿತು ಎಂಬುದೇ ತಿಳಿದಿಲ್ಲ. ಪೌರ ಕಾರ್ಮಿಕರೊಂದಿಗೆ ಪಟ್ಟಣದಲ್ಲಿರುವ ನಿವೇಶನ ರಹಿತರಿಗೂ ನಿವೇಶನ ಹಂಚಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಹೆಚ್.ಬಿ. ರಾಜಪ್ಪ, ನಾರಾಯಣ ಗೌಡ ಬಣದ ಕರವೇ ತಾಲೂಕು ಅಧ್ಯಕ್ಷ ಎ.ಯುಸಂತೋಷ್, ಖಜಾಂಚಿ ಎ.ಬಿ ಶಿವರಾಂ ಇದ್ದರು.