ಗೋಣಿಕೊಪ್ಪಲು, ಮೇ ೨೦ : ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಹಾಗೂ ಪೊಳಕರಾಂಡಿ ಕುಟುಂಬದ ಸಹಯೋಗದಲ್ಲಿ ಪೊನ್ನಂಪೇಟೆಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ೨ ದಿನಗಳ ಕಾಲ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಚೆರಿಯಾಂಡಿ ಕುಟುಂಬವು ಚಾಂಪಿಯನ್ ಆಗಿ ಹೊರಹೊಮ್ಮಿತು. ರನ್ನರ್ ಅಪ್ ಪ್ರಶಸ್ತಿಗೆ ಚಿತ್ತಾಕೂಲ್ ಕುಟುಂಬ ತೃಪ್ತಿಪಟ್ಟುಕೊಂಡಿತು. ೩ನೇ ಸ್ಥಾನವನ್ನು ಚಕ್ಕಿಯಾಟ್ ಕುಟುಂಬ ಪಡೆದುಕೊಂಡಿತು. ಫೈನಲ್ ಪಂದ್ಯದಲ್ಲಿ ಚೆರಿಯಾಂಡಿ ಕುಟುಂಬವು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ ೪ ಓವರ್ಗಳಲ್ಲಿ ೫ ವಿಕೆಟ್ಗೆ ೪೦ ರನ್ ದಾಖಲಿಸಿತು. ಚಿತ್ತಾಕೂಲ್ ಕುಟುಂಬವು ೫ ವಿಕೆಟ್ ಕಳೆದುಕೊಂಡು ೩೦ ರನ್ಗಳಿಸಿ ಸೋಲನುಭವಿಸಿತು. ಚೆರಿಯಾಂಡಿ ಜುನೈದ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಚೆರಿಯಾಂಡಿ ಆರೀಸ್ ಬೆಸ್ಟ್ ಬ್ಯಾಟರ್, ಚೆರಿಯಾಂಡಿ ರಹೀಮ್ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದರು.
೧೨ ಕುಟುಂಬಗಳು
ಮಲಬಾರ್ ಮುಸ್ಲಿಂ ಅಸೋಸಿಯೇಷನ್ಗೆ ಒಳಪಡುವ ಮುಸ್ಲಿಂ ಕುಟುಂಬಗಳಾದ ಪೊಳಕರಾಂಡಿ, ಜೂರಿಯೋಡ್, ಕೇರಿಪರಂಬ್, ಚಿತ್ತಾಕೂಲ್, ಹರಕಾಟೆಲ್, ಕುಂಬಳಕAಡಿ, ಮುಸ್ಲಿಯಾರ್ ಅಗತ್, ಪುದುಪರಂಬಿಲ್, ಮಾರ್ಗರ, ಚಿಕ್ಕಿಯಾಟ್, ಅಲಿಂಗಲ್, ಚೆರಿಯಾಂಡಿ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ತಂಡಗಳು ಸೇರಿದಂತೆ ಒಟ್ಟು ೧೨ ಕುಟುಂಬ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.
ಚಕ್ಕಿಯಾಟ್ ಅಫ್ರೀದ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಪೊಳಕರಾಂಡಿ ರಬೀರ್ ಬೆಸ್ಟ್ ಕ್ಯಾಚ್ ಚಿತ್ತಾಕೂಲ್ನ ಸಂಶುರ್ ಬೆಸ್ಟ್ ಫೀಲ್ಡರ್ ಅತೀ ಹೆಚ್ಚು ಸಿಕ್ಸರ್ ಅಫ್ರೀದ್ ಚಕ್ಕಿಯಾಟ್, ವೈಯಕ್ತಿಕವಾಗಿ ಹೆಚ್ಚು ರನ್ ಅಫ್ರೀದ್ ಚಕ್ಕಿಯಾಟ್, ಅಸ್ಗರ್ ಚಿತ್ತಾಕೂಲ್ ಬೆಸ್ಟ್ ಬೌಲರ್ ರವೂಫ್ ಎಮರ್ಜಿಂಗ್ ಪ್ಲೇಯರ್, ಇಸ್ಮಾಯಿಲ್ ಕುಂಬಳಕAಡಿ ಬೆಸ್ಟ್ ಕೀಪರ್, ಸಫೀರ್ ಆಲಿಂಗಲ್ ಬೆಸ್ಟ್ ಬ್ಯಾಟರ್, ಪಿ.ಎ. ಸಾಜೀರ್ ಬೆಸ್ಟ್ ಕ್ಯಾಪ್ಟನ್, ಫೇರ್ ಪ್ಲೇ ತಂಡವಾಗಿ ಮುಸ್ಲಿಯಾರ್ ಅಗತ್ ಹೊರಹೊಮ್ಮಿತು.
ಮುಂದಿನ ವರ್ಷ ಮುಸ್ಲಿಯಾರ್
ಮಲಬಾರ್ ಮುಸ್ಲಿಂ ಅಸೋಸಿಯೇಷನ್ನ ಅಧ್ಯಕ ಕೆ.ಎಂ. ಫೈಜಲ್ ಅಧ್ಯಕ್ಷತೆಯಲ್ಲಿ ನಡೆದ ಸಮರೋಪ ಸಮಾರಂಭದಲ್ಲಿ ಮುಂದಿನ ವರ್ಷದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲು ಮುಸ್ಲಿಯಾರ್ ಕುಟುಂಬವು ಮುಂದೆ ಬಂದಿದ್ದು, ಸಮಿತಿಯ ಪದಾಧಿಕಾರಿಗಳು ಮುಸ್ಲಿಯಾರ್ ಕುಟುಂಬಕ್ಕೆ ಧ್ವಜವನ್ನು ಹಸ್ತಾಂತರ ಮಾಡಿದರು.
ಸಮಾರೋಪ ಸಮಾರಂಭದಲ್ಲಿ ಪೊಳಕರಾಂಡಿ ಕುಟುಂಬದ ಅಧ್ಯಕ್ಷ ಪಿ.ಎ.ಮುಸ್ತಫಾ, ಕಾರ್ಯದರ್ಶಿಗಳಾದ ಪಿ.ಎ. ಉಮ್ಮರ್, ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಗೌರವ ಅಧ್ಯಕ್ಷ ಪಿ.ಎ. ಅಜೀಜ್, ಅಧ್ಯಕ್ಷರಾದ ಕೆ.ಎಂ. ಫೈಜಲ್, ಉಪಾಧ್ಯಕ್ಷ ಎಂ.ಎ. ಅಶ್ರಫ್, ಕಾರ್ಯದರ್ಶಿ ಸಿ.ಎ. ಜುನೈದ್, ಖಜಾಂಚಿ ಸಿ.ಎ. ಸಜೀರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳನ್ನು ಕ್ರೀಡೋತ್ಸವದ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಮಲಬಾರ್ ಮುಸ್ಲಿಂ ಅಸೋಸಿಯೇಷನ್ನ ಕಾರ್ಯದರ್ಶಿ ಜುನೈದ್ ಸ್ವಾಗತಿಸಿ ವಂದಿಸಿದರು. ವೀಕ್ಷಣೆ ವಿವರಣೆಗಾರರಾಗಿ ಸಫೀರ್, ತೀರ್ಪುಗಾರರಾಗಿ ಟಿ.ಆರ್. ಕಿರಣ್ ಹಾಗೂ ಸುಹೇಲ್ ಕಾರ್ಯ ನಿರ್ವಹಿಸಿದರು.
-ಹೆಚ್.ಕೆ ಜಗದೀಶ್