ಚೆಯ್ಯಂಡಾಣೆ, ಮೇ ೨೦; ಪ್ರಸಕ್ತ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ೧೯ ಸಾವಿರ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಇವರಲ್ಲಿ ೧೮,೬೭೮ ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡ ಭಾಷೆಯಲ್ಲಿಯೇ ಅನುತ್ತೀರ್ಣರಾಗಿರುವ ಬಗ್ಗೆ ಚಿಂತಿಸಬೇಕಿದೆ ಎಂದು ಸಮ್ಮೇಳನಾಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ಕಳವಳ ವ್ಯಕ್ಪಡಿಸಿದರು.
ನಮ್ಮದೇ ಭಾಷೆ, ನಮ್ಮದೇ ಉಸಿರಾಗಿರುವ ಕನ್ನಡದಲ್ಲಿ ನಮ್ಮ ಮಕ್ಕಳೇ ಅನುತ್ತೀರ್ಣರಾಗುತ್ತಿದ್ದಾರೆ. ಇದಕ್ಕೊಂದು ಪರಿಹಾರವೇನು ಎಂಬುದನ್ನು ಎಲ್ಲರೂ ಅವಲೋಕನ ಮಾಡಬೇಕಿದೆ. ನಾಡಿನ ಮಕ್ಕಳಿಗೆ ಕನ್ನಡ ಭಾಷೆ ಕಬ್ಬಿಣದ ಕಡಲೆಯೇ, ಪಠ್ಯ ಪುಸ್ತಕ ದೋಷವೇ, ಕಲಿಸುವಲ್ಲಿ ದೋಷವೇ ಅಥವಾ ವ್ಯವಸ್ಥೆಯ ದೋಷವೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಅವರು ಪ್ರತಿಪಾದಿಸಿದರು.
ಕನ್ನಡ ಉಪ ಭಾಷೆಯಾಗಿ ಕನ್ನಡದೊಂದಿಗೆ ಬೆಳೆದು ಬಂದ ಗ್ರಾಮಾಂತರ ಪ್ರದೇಶಗಳಲ್ಲಿ ಇರುವ ಬುಡಕಟ್ಟು ಜನರ ಪರಿಸ್ಥಿತಿ ಬದಲಾಗಿಲ್ಲ. ಇಲ್ಲಿನ ಯರವರ ಸಂಖ್ಯೆ ಕಡಿಮೆಯಾಗುತ್ತಿದೆ. ಯರವರು ಸೇರಿದಂತೆ ಆದಿವಾಸಿ ಮಕ್ಕಳು ಶಿಕ್ಷಣ ಪಡೆದು ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮುಖ್ಯವಾಹಿನಿಗೆ ಬರಬೇಕು. ಕೊಡಗಿನಲ್ಲಿ ವಾಸಿಸುವ ಬುಡಕಟ್ಟು ಜನರಿಗೆ ಸ್ವಂತ ಜಾಗವಿಲ್ಲ. ಇಂದಿಗೂ ಸಹ ನಿವೇಶನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ ಎಂದರು.
ಕೊಡಗು ಎರಡನೇ ಗೋವಾ
ಕೊಡಗು ಪ್ರವಾಸೋದ್ಯಮದಿಂದಾಗಿ ಎರಡನೇ ಗೋವಾ ಆಗುತ್ತಿದ್ದು, ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇಲ್ಲಿನ ಪರಿಸರ ಮತ್ತು ಜಲಮೂಲಗಳನ್ನು ಉಳಿಸಬೇಕು. ಆ ನಿಟ್ಟಿನಲ್ಲಿ ಕೊಡಗು ಕೊಡಗಾಗಿ ಉಳಿಯುವಲ್ಲಿ ಎಲ್ಲರೂ ಗಮನಹರಿಸಬೇಕಿದೆ. ಕೊಡವ, ಅರೆಭಾಷೆ, ತುಳು ಮತ್ತಿತರ ಕನ್ನಡ ಉಪ ಭಾಷೆಗಳಿಗೆ ಕನ್ನಡವೇ ಲಿಪಿಯಾಗಿದ್ದು, ಇದನ್ನು ಮುಂದುವರಿಸಿಕೊAಡು ಹೋಗಬೇಕು. ಅದನ್ನು ಬಿಟ್ಟು ಪ್ರತ್ಯೇಕ ಲಿಪಿ ಅಗತ್ಯವಿಲ್ಲ ಎಂದು ಒತ್ತಿ ಹೇಳಿದರು.
ವಸ್ತು ಸಂಗ್ರಹಾಲಯ
ನಡಿಕೇರಿಯAಡ ಚಿಣ್ಣಪ್ಪ ಅವರು ಕರಡ ಗ್ರಾಮ, ತಾಲೂಕಿಗೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅವರ ಹೆಸರಿನಲ್ಲಿ ವಸ್ತು ಸಂಗ್ರಹಾಲಯ ಆಗಬೇಕು. ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಬರಹಗಾರರಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು. ಕೊಡಗು ಜಿಲ್ಲೆಯಲ್ಲಿ ಪ್ರತಿ ಗ್ರಾಮದಲ್ಲಿಯೂ ಸಹ ದಾಖಲೀಕರಣ ಆಗಬೇಕು. ಕೊಡಗಿನ ಗಾಂಧಿ ಪಂದ್ಯAಡ ಬೆಳ್ಯಪ್ಪ ಅವರು ಕೊಡಗಿನ ಇತಿಹಾಸದ ಬಗ್ಗೆ ಸಮಗ್ರವಾಗಿ ಚಿತ್ರಿಸಿದ್ದಾರೆ. ಅದರಂತೆ ಅವುಗಳನ್ನು ಅಧ್ಯಯನ ಮಾಡಬೇಕು. ಹಾಗೆಯೇ ಶತಮಾನೋತ್ಸವ ಆಚರಿಸುವ ಶಾಲೆಗಳಲ್ಲಿ ಕನ್ನಡ ಹಬ್ಬವನ್ನು ಆಚರಿಸುವಂತಾಗಬೇಕೆAದು ಆಭಿಪ್ರಾಯ ವ್ಯಕ್ತಪಡಿಸಿದರು.