ಮಡಿಕೇರಿ, ಮೇ. ೨೦: ೨೪೪ನೆಯ "ಹೊಂಬೆಳಕು- ಮಾಸಿಕ ತತ್ತ÷್ವಚಿಂತನಾ ಗೋಷ್ಠಿ" ಜೂನ್.೭ ರಂದು ಭಾನುವಾರ ಸಂಜೆ ೩ ರಿಂದ ೫ ಗಂಟೆಯರವರೆಗೆ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜ ಪ್ರಸಾದ ನಿಲಯದ ಸಭಾಂಗಣದಲ್ಲಿ ಜರುಗಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ವೈದ್ಯರಾದ ಡಾ. ಎಸ್. ವಿ ನರಸಿಂಹನ್ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ‘ಪ್ರಕೃತಿಯ ಕೌತುಕಗಳು' ವಿಷಯದಡಿ ಉಪನ್ಯಾಸವನ್ನು ಗೋಣಿಕೊಪ್ಪಲು ಪ್ರೌಢಶಾಲೆಯ ಕೃಷ್ಣ ಚೈತನ್ಯ ನೀಡಲಿದ್ದಾರೆ.