ಮಡಿಕೇರಿ, ಮೇ ೨೦: ಆನ್‌ಲೈನ್ ಮೂಲಕ ಔಷಧಿ ವ್ಯಾಪಾರವನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ರಾಷ್ಟçವ್ಯಾಪಿ ಕರೆ ನೀಡಿದ್ದ ಬಂದ್‌ಗೆ ಕೊಡಗು ಜಿಲ್ಲೆಯಲ್ಲಿ ಪೂರ್ಣ ಬೆಂಬಲ ದೊರೆಯಿತು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಜಿಲ್ಲಾ ವ್ಯಾಪಿ ಎಲ್ಲೆಡೆ ಔಷಧಿ ಮಳಿಗೆಗಳನ್ನು ವ್ಯಾಪಾರಿಗಳು ಬಂದ್ ಮಾಡಿ ಕ್ರಮಕ್ಕೆ ಆಗ್ರಹಿಸಿದರು.
ಕೋವಿಡ್ ಪರಿಸ್ಥಿತಿಯಲ್ಲಿ ಆನ್‌ಲೈನ್ ಮೂಲಕ ಔಷಧಿ ಮಾರಾಟ ಮಾಡಲು ಕೇಂದ್ರ ಸರಕಾರ ತಾತ್ಕಾಲಿಕ ಅನುಮತಿ ನೀಡಿತ್ತು. ಇದೀಗ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದರೂ ಸರಕಾರ ಆದೇಶ ಹಿಂಪಡೆಯದ ಪರಿಣಾಮ ಇಂದಿಗೂ ಆನ್‌ಲೈನ್‌ನಲ್ಲಿ ಔಷಧಿಗಳು ಮಾರಾಟವಾಗುತ್ತಿವೆ. ಇದಕ್ಕೆ ಸರಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಭಾರತೀಯ ಕೆಮಿಸ್ಟ್÷್ಸ ಹಾಗೂ ಡ್ರಗ್ಗಿಸ್ಟ್ ಅಸೋಸಿಯೇಷನ್ ಬಂದ್‌ಗೆ ಕರೆ ನೀಡಿತ್ತು. ಇದಕ್ಕೆ ಕೊಡಗು ಜಿಲ್ಲಾ ಘಟಕವೂ ಬೆಂಬಲ ಸೂಚಿಸಿತು. ಪರಿಣಾಮ ಇಂದು ೨೦೦ಕ್ಕೂ ಹೆಚ್ಚು ಔಷಧಿ ಮಳಿಗೆಗಳನ್ನು ಮುಚ್ಚಿ ಬಂದ್ ಆಚರಿಸಲಾಯಿತು. ಆನ್‌ಲೈನ್ ಮಾರಾಟದಿಂದ ಔಷಧಿ ವ್ಯಾಪಾರಿಗಳಿಗೆ ಸಮಸ್ಯೆ ಜೊತೆಗೆ ಸಮಾಜದ ಮೇಲೂ ಪರಿಣಾಮ ಬೀರುತ್ತಿದೆ. ಇದರಿಂದ ಮಾರಾಟಗಾರರು-ಖರೀದಿದಾರರ ಮಾಹಿತಿ ತಿಳಿಯುತ್ತಿಲ್ಲ. ಕಳಪೆ ಔಷಧಿ ಮಾರಾಟವೂ ಆಗುತ್ತಿದೆ ಎಂದು ವ್ಯಾಪಾರಿಗಳು ಆರೋಪಿಸಿದರು.
ಜನರಿಗೆ ಸಮಸ್ಯೆಯಾಗಬಾರದೆಂಬ ದೃಷ್ಟಿಯಲ್ಲಿ ಆಸ್ಪತ್ರೆ ಒಳಗಿನ ಮೆಡಿಕಲ್ ಶಾಪ್ ತೆರೆಯಲು ಅವಕಾಶ ನೀಡಲಾಗಿತ್ತು.
ಔಷಧಿ ಮಾರಾಟಗಾರರಿಗೆ ಶೇ ೧೬ ರಿಂದ ೨೦ ಲಾಭಾಂಶ ಮಾತ್ರ ದೊರೆಯುತ್ತಿದ್ದು, ಮಾರಾಟಗಾರರು ಸಂಕಷ್ಟದಲ್ಲಿದ್ದಾರೆ. ವ್ಯಾಪಾರಿಗಳ ಹಿತ ಕಾಯುವ ನಿಟ್ಟಿನಲ್ಲಿಯೂ ಸರಕಾರ ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಮಡಿಕೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸಹನಾ ಎಸ್ ಹಾದಿಮನಿ ಅವರ ಮೂಲಕ ಕೇಂದ್ರ ಸರಕಾರಕ್ಕೆ ಕೊಡಗು ಜಿಲ್ಲಾ ಕೆಮಿಸ್ಟ್÷್ಸ ಹಾಗೂ ಡ್ರಗ್ಗಿಸ್ಟ್÷್ಸ ಅಸೋಸಿಯೇಷನ್ ವತಿಯಿಂದ ಬೇಡಿಕೆಗಳ ಕುರಿತು ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಸಲ್ಲಿಕೆ ಸಂದರ್ಭ ಅಸೋಸಿಯೇಷನ್ ಅಧ್ಯಕ್ಷ ಅಂಬೆಕಲ್ಲು ಜೀವನ್, ಖಜಾಂಚಿ ಪ್ರಸಾದ್ ಗೌಡ, ಜಂಟಿ ಕಾರ್ಯದರ್ಶಿ ವಸಂತ್ ಕುಮಾರ್ ಹಾಜರಿದ್ದರು.