ಚೆಯ್ಯಂಡಾಣೆ, ಮೇ ೨೦ : ಎತ್ತ ನೋಡಿದರತ್ತ ಹಸಿರು ವರ್ಣದಿಂದ ಕೂಡಿದ ಬೆಟ್ಟಗುಡ್ಡಗಳ ಸಾಲುಗಳ ನಡುವೆ ಎಲ್ಲೆಡೆ ಕನ್ನಡದ ಕಹಳೆ ಮೊಳಗಿತು. ಹಾದಿ, ಬೀದಿ, ಮಾರ್ಗಗಳು ಹಳದಿ, ಕೆಂಪು ಬಣ್ಣಗಳಿಂದ ಕಂಗೊಳಿಸುತ್ತಿತ್ತು, ಕನ್ನಡಾಭಿಮಾನಿಗಳು ಪಾಲ್ಗೊಂಡು ಸಂಭ್ರಮಿಸಿದರು. ಪೂರ್ಣಕುಂಭ ಕಳಸಹೊತ್ತ ಮಹಿಳೆಯರು ಮುನ್ನಡೆಸಿದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿಸಿತ್ತು. ಊರಿಗೆ ಊರೇ ಸಂಭ್ರಮದಲ್ಲಿ ಪಾಲ್ಗೊಂಡಿತ್ತು. ಇದಕ್ಕೆ ಸಾಕ್ಷಿಯಾಗಿದ್ದು ಮಡಿಕೇರಿ ತಾಲೂಕಿನ ವೀರಾಜಪೇಟೆ -ನಾಪೋಕ್ಲುವಿಗೆ ತೆರಳುವ ಮಾರ್ಗಮಧ್ಯೆ ಸಿಗುವ ಕಡಂಗ ಗ್ರಾಮ. ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮ ಸಡಗರದಿಂದ ಜರುಗಿತು.

ಧ್ವಜಾರೋಹಣ

ಸಮ್ಮೇಳನದ ಅಂಗವಾಗಿ ರಾಷ್ಟç ಧ್ವಜಾರೋಹಣವನ್ನು ಸ್ವಾಗತ ಸಮಿತಿಯ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ನೆರವೇರಿಸಿದರು.

ಸಾಹಿತ್ಯ ಪರಿಷತ್ ಧ್ವಜವನ್ನು ಕಸಾಪ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಕನ್ನಡ ಧ್ವಜವನ್ನು ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ನೆರವೇರಿಸಿದರು.

ರಾಷ್ಟçಗೀತೆಯನ್ನು ಅಂಶಾದ್ ಸಅದಿ ತಂಡ, ನಾಡಗೀತೆಯನ್ನು ಸ.ಮಾ. ಪ್ರಾಥಮಿಕ ಶಾಲೆ ಚೆಯ್ಯಂಡಾಣೆಯ ವಿದ್ಯಾರ್ಥಿಗಳು ಹಾಡಿದರು.

ಆಕರ್ಷಕ ಮೆರವಣಿಗೆ

ಸಮ್ಮೇಳನದ ಅಂಗವಾಗಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆಕರ್ಷಣೀಯವಾಗಿತ್ತು. ಕಡಂಗ ವಿಜಯ ಪ್ರೌಢ ಶಾಲಾ ಮೈದಾನದಿಂದ ಆರಂಭಗೊAಡ ಮೆರವಣಿಗೆಗೆ ಐತಿಚಂಡ ನಾಣಯ್ಯ, ಪಾಂಡAಡ ಚಂಗಪ್ಪ ಹಾಗೂ ಹಿರಿಯರಾದ ಯೂಸುಫ್ ಮುಸ್ಲಿಯಾರ್ ಜಂಟಿಯಾಗಿ ಚಾಲನೆ ನೀಡಿದರು.

ಮಂಗಳವಾದ್ಯ, ಚಂಡೆ, ಕಳಸ ಹೊತ್ತ ಮಹಿಳೆಯರು, ಸ್ತಬ್ಧಚಿತ್ರಗಳು, ಗೊಂಬೆ, ಪೂಜಾ ಕುಣಿತ, ಡೊಳ್ಳು ಕುಣಿತ, ಮೀರಗಾಸೆ, ದುಡಿಕೊಟ್ಟ್ ಪಾಟ್, ಕೊಡಗಿನ ವಾಲಗ, ದಫ್ ಪ್ರದರ್ಶನ, ಬ್ಯಾಂಡ್ ಸೆಟ್ ಸೇರಿದಂತೆ ಕೊಡಗಿನ ಸಾಂಪ್ರದಾಯಿಕ ಉಡುಪಿನಲ್ಲಿದ್ದ ಪುರುಷ, ಮಹಿಳೆಯರು, ಹಸಿರು, ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸುತಿದ್ದ ಮಹಿಳೆಯರು ಮೆರವಣಿಗೆಗೆ ಮೆರುಗು ತಂದರು.

ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ ಒಕ್ಕೂಟ, ಧರ್ಮಸ್ಥಳ ಸಂಘ, ಅಂಗನವಾಡಿ ಸಂಘಟನೆ, ಸ್ತಿçÃಶಕ್ತಿ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಆಟೋ ಮತ್ತು ವಾಹನ ಚಾಲಕರ ಸಂಘದವರು ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸಂಘ ಸಂಸ್ಥೆಗಳ ಸದಸ್ಯರುಗಳು ಜೊತೆಗೂಡಿದರು. ಸಮ್ಮೇಳನಾಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸಮ್ಮೇಳನ ನಡೆಯುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ ಆವರಣಕ್ಕೆ ಕರೆ ತರಲಾಯಿತು. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್, ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಸಾಥ್ ನೀಡಿದರು.

ದ್ವಾರಗಳ ಉದ್ಘಾಟನೆ

ಸಮ್ಮೇಳನದ ಪ್ರಯುಕ್ತ ವಿವಿಧ ರಸ್ತೆಗಳಲ್ಲಿ ನಿರ್ಮಿಸಲಾಗಿದ್ದ ಗಣ್ಯರ ನೆನಪಿನ ದ್ವಾರಗಳನ್ನು ಉದ್ಘಾಟನೆ ಮಾಡಲಾಯಿತು.

ಕುಲ್ಲಚಂಡ ದಿ.ಲಾಲು ಮೇದಯ್ಯ ಮತ್ತು ದಿ. ದೇವಕಿ ನೆನಪಿನ ಪ್ರವೇಶ ದ್ವಾರವನ್ನು ಕುಲ್ಲಚಂಡ ತಮ್ಮಯ್ಯ ಹಾಗೂ ರಶಿ ಪೂವಯ್ಯ, ಕೋಡಿರ ದಿ. ಮನು ಮೊಣ್ಣಪ್ಪ ನೆನಪಿನ ಪ್ರವೇಶ ದ್ವಾರವನ್ನು ಕೋಡಿರ ಪೂವಿ ಮೊಣ್ಣಪ್ಪ, ದೇಯಿರ ಕುಟುಂಬಸ್ಥರ ನೆನಪಿನ ಪ್ರವೇಶ ದ್ವಾರವನ್ನು ದೇಯಿರ ಕಾರ್ಯಪ್ಪ ಹಾಗೂ ಬೋಪಣ್ಣ, ಮೇದುರ ದಿ.ನಂಜಪ್ಪ ಹಾಗೂ ದಿ.ಸೀತಮ್ಮ ನೆನಪಿನ ದ್ವಾರವನ್ನು ಮೇದುರ ವಿಶಾಲ್ ಕುಶಾಲಪ್ಪ, ಕೋಡಿರ ದಿ.ಮುತ್ತಣ್ಣ ಹಾಗೂ ದಿ.ಸುನಂಧಿ ಮುತ್ತಣ್ಣ ನೆನಪಿನ ಪ್ರವೇಶ ದ್ವಾರವನ್ನು ಕೋಡಿರ ಪೃಥ್ವಿ ಮಂದಣ್ಣ ಹಾಗೂ ಕೋಡಿರ ಪೊನ್ನು ಮುತ್ತಣ್ಣ, ಚಲ್ಮಂಡ ದಿ.ಸುಬ್ಬಯ್ಯ ಹಾಗೂ ದಿ.ಕಾಮವ್ವ ನೆನಪಿನ ದ್ವಾರವನ್ನು ಚಲ್ಮಂಡ ಬೆಲ್ಲು ಚರ್ಮಣ, ನಂಬಿಯಪAಡ ದಿ.ಅಪ್ಪಣ್ಣ ಹಾಗೂ ಕಾಮವ್ವ ನೆನಪಿನ ದ್ವಾರವನ್ನು ನಂಬಿಯಪAಡ ಮಣಿ ಅಯ್ಯಮ್ಮ, ಮುಕ್ಕಾಟಿರ ದಿ.ಚಂಗಪ್ಪ ಹಾಗೂ ದಿ.ಕಾಂಜವ್ವ ನೆನಪಿನ ಪ್ರವೇಶ ದ್ವಾರವನ್ನು ಮುಕ್ಕಾಟಿರ ಕಿರಣ್ ಬೋಪಯ್ಯ, ಅನ್ನಂಬಿರ ದಿ.ತಮ್ಮಯ್ಯ ನೆನಪಿನ ಪ್ರವೇಶ ದ್ವಾರವನ್ನು ಅನ್ನಂಬಿರ ಅಕ್ಕವ್ವ, ಅನ್ನಂಬಿರ ದಿ. ಉತ್ತಪ್ಪ ಹಾಗೂ ದಿ.ಪಾರ್ವತಿ ನೆನಪಿನ ಪ್ರವೇಶ ದ್ವಾರವನ್ನು ಅನ್ನಂಬಿರ ಗಿರೀಶ್, ದಿ. ಪಾಲಚಂಡ ಮಿಟ್ಟು ಕಾವೇರಪ್ಪ ಹಾಗೂ ದಿ.ಭೋಜಕ್ಕಿ ನೆನಪಿನ ಪ್ರವೇಶ ದ್ವಾರವನ್ನು ಪಾಲಚಂಡ ಅಜಿತ್ ಅಪ್ಪಯ್ಯ ಹಾಗೂ ಬೀನಾ ಅಪಯ್ಯ ಉದ್ಘಾಟಿಸಿದರು.

ಕಣಿಯರ ದಿ.ಬೆಳ್ಯಪ್ಪ ಹಾಗೂ ಕಣಿಯರ ದಿ.ಜೋಯಪ್ಪ ನೆನಪಿನ ಮುಖ್ಯದ್ವಾರವನ್ನು ಕಣಿಯರ ಶಾರದಾ ಹಾಗೂ ಕಣಿಯರ ನಂಜುAಡ, ರಾವ್ ಬಹದ್ದೂರ್ ಕೋಡಿರ ಟಿ. ಉತ್ತಪ್ಪ ನೆನಪಿನ ಮಹಾದ್ವಾರವನ್ನು ಕೋಡಿರ ಕುಟುಂಬದ ಅಧ್ಯಕ್ಷ ಕೋಡಿರ ಪ್ರಕಾಶ್ ಈರಪ್ಪ ಉದ್ಘಾಟಿಸಿದರು. ನಡಿಕೇರಿಯಂಡ ಚಿಣ್ಣಪ್ಪ ನೆನಪಿನ ಪುಸ್ತಕ ಮಳಿಗೆಯನ್ನು ನಡಿಕೇರಿಯಂಡ ಅರ್ಜುನ್ ಕಾವೇರಪ್ಪ, ಪಾಲಚಂಡ ಪೊನ್ನು ತಿಮ್ಮಯ್ಯ ನೆನಪಿನ ಸ್ತಿçÃಶಕ್ತಿ ಮಳಿಗೆಯನ್ನು ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಉಮ್ಮರ್ ಎಡಪಾಲ ಉದ್ಘಾಟಿಸಿದರು.

ದಿ.ಪಾಂಡAಡ ಕುಟ್ಟಣಿ ಸಭಾಂಗಣವನ್ನು ಪಾಂಡAಡ ಲೀಲಾ ಕುಟ್ಟಪ್ಪ ಹಾಗೂ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಬೋಪಣ್ಣ, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ವೇದಿಕೆಯನ್ನು ಮೇದುರ ಗಣು ಕುಶಾಲಪ್ಪ ಉದ್ಘಾಟಿಸಿದರು.

ಉದ್ಘಾಟನೆ-ಗೋಷ್ಠಿಗಳು

ನಂತರ ಹರಿದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭದೊAದಿಗೆ ಸಾಹಿತ್ಯಗೋಷ್ಠಿ, ಕವಿಗೋಷ್ಠಿ, ಬಹಿರಂಗ ಅಧಿವೇಶನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿದವು.

ಮಧ್ಯಾಹ್ನ ಭೋಜನದ ವಿರಾಮದಲ್ಲಿ ವಿವಿಧ ಗಾಯಕರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮಗಳು ಮೂಡಿಬಂದವು.

ಸಾಂಸ್ಕೃತಿಕ ಕಾರ್ಯಕ್ರಮ

ಸಮಾರೋಪದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ವಿದ್ಯಾರ್ಥಿಗಳು, ವಿವಿಧ ಕಲಾ ತಂಡಗಳು, ಸಾರ್ವಜನಿಕರಿಂದ ಮೂಡಿಬಂದ ಕಾರ್ಯಕ್ರಮಗಳು ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಬಿಂಬಿಸಿದವು.

ಬAದೋಬಸ್ತ್

ಸಮ್ಮೇಳನದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸುವ ನಿಟ್ಟಿನಲ್ಲಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವೀರಾಜಪೇಟೆ ಗ್ರಾಮಾಂತರ ಠಾಣೆಯಿಂದ ಪೊಲೀಸ್ ವ್ಯವಸ್ಥೆ ಮಾಡಲಾಗಿತ್ತು. ಮೆರವಣಿಗೆ ಸಂದರ್ಭ ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ವಾಹನಗಳನ್ನು ಪೊಲೀಸರು ಯಶಸ್ವಿಯಾಗಿ ನಿಭಾಯಿಸಿದರು. ಸಮ್ಮೇಳನದ ಸ್ಥಳದಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ಆವರಣದಲ್ಲಿ ಪುಸ್ತಕ ಮಳಿಗೆ ಹಾಗೂ ವಿವಿಧ ಬಗೆಯ ಮಳಿಗೆಗಳನ್ನು ತೆರೆಯಲಾಗಿತ್ತು. ಸಮ್ಮೇಳನಕ್ಕೆ ಆಗಮಿಸಿದ್ದ ಎಲ್ಲಾ ಕನ್ನಡಾಭಿಮಾನಿಗಳಿಗೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಗ್ರಾಮಸ್ಥರು, ವಿವಿಧ ಉಪಸಮಿತಿಗಳ ಪರಿಶ್ರಮ ಎದ್ದು ಕಾಣುತ್ತಿತ್ತು.

ವರದಿ : ಅಶ್ರಫ್ ಚೆಯ್ಯಂಡಾಣೆ

ಚಿತ್ರಗಳು : ಲಕ್ಷಿö್ಮಶ್, ದುಗ್ಗಳ