ಮಡಿಕೇರಿ, ಮೇ. ೧೯ : ಅಬಕಾರಿ ಅಕ್ರಮ ಪ್ರಕರಣಗಳಲ್ಲಿ ಜಪ್ತುಪಡಿಸಿದ ವಾಹನಗಳನ್ನು ತಾ.೨೬ ರಂದು ವಿಲೇವಾರಿ ಮಾಡಲಾಗುತ್ತದೆ.
ಅಬಕಾರಿ ನಿರೀಕ್ಷಕರ ಕಚೇರಿ-ಮಡಿಕೇರಿ ವಲಯ (೨ ವಾಹನ), ಅಬಕಾರಿ ನಿರೀಕ್ಷಕರ ಕಚೇರಿ-ಸೋಮವಾರಪೇಟೆ ವಲಯ (೬ ವಾಹನ) ಮತ್ತು ಅಬಕಾರಿ ನಿರೀಕ್ಷಕರ ಕಚೇರಿ-ವೀರಾಜಪೇಟೆ ವಲಯ (೨ ವಾಹನ) ಕಚೇರಿಗಳಲ್ಲಿ ತಾ.೨೬ ರಂದು ಬೆಳಿಗ್ಗೆ ೧೧ ಗಂಟೆಗೆ ಟೆಂಡರ್ ಕಂ ಹರಾಜಿನಲ್ಲಿ ವಿಲೇವಾರಿ ಮಾಡಲಾಗುತ್ತದೆ. ಷರತ್ತುಗಳ ಪ್ರಕಾರ ವಾಹನಗಳು ಎಲ್ಲಿದೆಯೋ, ಹೇಗಿದೆಯೋ ಹಾಗೆ ಟೆಂಡರ್ ಕಂ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.
ಹೆಚ್ಚಿನ ಮಾಹಿತಿಗೆ ಅಬಕಾರಿ ನಿರೀಕ್ಷಕರು, ಮಡಿಕೇರಿ ವಲಯ, ಮಡಿಕೇರಿ ೯೭೪೨೯೯೯೯೧೨, ಅಬಕಾರಿ ನಿರೀಕ್ಷರು, ಸೋಮವಾರಪೇಟೆ ವಲಯ, ಸೋಮವಾರಪೇಟೆ ೯೭೪೩೨೫೧೨೮೬ ಹಾಗೂ ಅಬಕಾರಿ ನಿರೀಕ್ಷಕರು, ವೀರಾಜಪೇಟೆ ವಲಯ, ವೀರಾಜಪೇಟೆ ೯೧೧೩೮೮೭೪೭೨ ಅನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.