ಮಡಿಕೇರಿ, ಮೇ ೧೯: ಮರದ ರೆಂಬೆಗಳನ್ನು ಕಡಿಯುತ್ತಿದ್ದ ಸಂದರ್ಭ ಮರದ ರೆಂಬೆ ಬಿದ್ದು ಕಾರ್ಮಿಕ ದುರ್ಮರಣ ಹೊಂದಿರುವ ಘಟನೆ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಮಡಿಕೇರಿ ನಗರಸಭಾ ಸಿಬ್ಬಂದಿ ಸೋಮಶೇಖರ್ ಎಂಬವರು ವಾಸವಿರುವ ಸೆಸ್ಕ್ ಕಚೇರಿ ಬಳಿ ಇರುವ ನಗರಸಭಾ ಸಿಬ್ಬಂದಿಗಳ ವಸತಿ ಗೃಹದ ಬಳಿ ಇದ್ದ ಮರವನ್ನು ಕಡಿಯುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಮರ ಕಡಿಯುತ್ತಿದ್ದ ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಕಿರಣ್ ಸಾವನ್ನಪ್ಪಿದ ದುರ್ದೈವಿ.
ತೊಡಿಕಾನ ಗ್ರಾಮದ ವಿನಯ್ ಕುಮಾರ್ ಎಂಬವರೊAದಿಗೆ ಕೆಲಸಕ್ಕೆ ಕಿರಣ್ ಬಂದಿದ್ದ. ವಿನಯ್ ಮರ ಕಡಿಯುತ್ತಿದ್ದ ಸಂದರ್ಭ ರೆಂಬೆಯೊAದು ಕಿರಣ್ ಮೇಲೆ ಬಿದ್ದಿದ್ದು, ತೀವ್ರ ಘಾಸಿಗೊಂಡು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ನಗರಸಭಾಧ್ಯಕ್ಷೆ ಪಿ.ಕಲಾವತಿ, ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಕಿರಣ್‌ನ ಪತ್ನಿ ದೀಪಿಕಾ ನೀಡಿದ ದೂರಿನನ್ವಯ ನಗರ ಪೊಲೀಸ್ ಠಾಣೆಯಲ್ಲಿ ವಿನಯ್ ಕುಮಾರ್ ಹಾಗೂ ಸೋಮಶೇಖರ್ ವಿರುದ್ಧ ಮೊಕದ್ದಮೆ ದಾಖಲಾಗಿದೆ.