ಮಡಿಕೇರಿ, ಮೇ ೧೮: ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ ಮತಾಂತರ ಮಾಡಲಾಗುತ್ತಿದ್ದು, ಮತಾಂತರ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಹೇರೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಇತ್ತೀಚೆಗೆ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ ಮತಾಂತರ ಮಾಡಲು ತಮಿಳುನಾಡಿನಿಂದ ಬಂದು ಸರ್ಕಾರಿ ಜಾಗದಲ್ಲಿ ಯಾವುದೇ ಅನುಮತಿ ಪಡೆಯದೆ ಅನಧಿಕೃತವಾಗಿ ಚರ್ಚ್ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ಪರಿಶೀಲಿಸಿ ಸಂಬAಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೋಮಶೇಖರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಹಣದ ಆಮಿಷವೊಡ್ಡಿ ಮುಗ್ದ ಬುಡಕಟ್ಟು ಜನರನ್ನು ಮತಾಂತರ ಮಾಡಲಾಗುತ್ತಿದೆ. ಅನಧಿಕೃತವಾಗಿ ನಿರ್ಮಾಣ ಮಾಡಿರುವ ಚರ್ಚ್ ಅನ್ನು ತೆರವುಗೊಳಿಸಿ ಹೊರರಾಜ್ಯದಿಂದ ಬಂದು ಇಲ್ಲಿಯವರೊಂದಿಗೆ ಸೇರಿಕೊಂಡು ಮತಾಂತರ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಮನವಿ ಸಲ್ಲಿಕೆ ಸಂದರ್ಭ ಬಿಜೆಪಿ ಮುಖಂಡ ಚಂದ್ರಶೇಖರ್ ಹೇರೂರು, ರಾಜೀವ್ ಕುಶಾಲನಗರ, ಪಂಚಾಯಿತಿ ಮಾಜಿ ಅಧ್ಯಕ್ಷ ಜಗನ್ನಾಥ್ ಮಂದೊಡಿ, ಬಸವೇಶ್ವರ ದೇವಸ್ಥಾನದ ಸಮಿತಿ ಅಧ್ಯಕ್ಷ ವಸಂತ ಬಿ.ಎಸ್., ಕಾರ್ಯದರ್ಶಿ ನಂಜೇಗೌಡ, ಗ್ರಾಮಸ್ಥರುಗಳಾದ ಅರುಣ್ ಚೆಂಗಪ್ಪ, ಡಿಸಂತ್, ಸುನೀಲ್ ಬಿ.ಎಸ್., ಗಣೇಶ್ ಕೆ.ಎಸ್.,ರಮೇಶ್ ಕೆ.ಎಸ್., ರೇಣುಕುಮಾರ್ ಬಿ.ಎಸ್., ಜಯಪ್ರಕಾಶ್ ಸಿ.ಎಂ., ರಂಜನ್ ಬಿ.ಎಸ್., ಚರಣ್ ತೆಕ್ಕಡೆ, ಜಗತ್, ಅಪ್ಪುನು, ಪೃಥ್ವಿರಾಜ್ ಮತ್ತು ಡಯಾನ ಇದ್ದರು.