ಸುಂಟಿಕೊಪ್ಪ, ಮೇ.೧೮: ೭ನೇ ಹೊಸಕೋಟೆ ಬಳಿ ಆನೆಕಾಡಿನಿಂದ ಕಾಡಾನೆಯೊಂದು ರಾಷ್ಟಿçÃಯ ಹೆದ್ದಾರಿಯಲ್ಲಿ ಮನಸೋ ಇಚ್ಛೆ ಸಂಚರಿಸಿ ಅಕ್ಕ ಪಕ್ಕದ ನಿವಾಸಿಗಳಲ್ಲಿ ಹಾಗೂ ಹೆದ್ದಾರಿಯಲ್ಲಿ ಸಂಚರಿಸುವವರಲ್ಲಿ ಆತಂಕ ಸೃಷ್ಟಿಸುತ್ತಿದೆ.
ಇತ್ತೀಚೆಗೆ ನಿತ್ಯವೂ ಹೆದ್ದಾರಿಯಲ್ಲಿ ರಾಜಾರೋಷವಾಗಿ ಆಹಾರವನ್ನು ಅರಸಿ ಬರುವ ಕಾಡಾನೆ ಸಂಚಾರ ನಡೆಸುತ್ತಿದ್ದು ಇತ್ತೀಚೆಗೆ ರಾತ್ರಿಯ ವೇಳೆ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದೆ. ಸವಾರನ ಸಮಯ ಪ್ರಜ್ಞೆಯಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಇದೇ ಸಂದರ್ಭ ಮತ್ತೊಂದು ಕಾಡಾನೆಯು ರಾಷ್ಟಿçÃಯ ಹೆದ್ದಾರಿಗೆ ಅಡ್ಡಾದಿಡ್ಡಿ ಸಂಚರಿಸಿ ಗೀಳಿಟ್ಟು ಪಕ್ಕದ ತೋಟದೊಳಗೆ ಹೋಗಿದೆ.
ಈ ಕಾಡಾನೆಯು ದಿನನಿತ್ಯ ರಾತ್ರಿ ಎಂಟು ಗಂಟೆ ಬಳಿಕ ರಾಷ್ಟಿçÃಯ ಹೆದ್ದಾರಿಗೆ ಇಳಿದು ಮೇಟ್ನಹಳ್ಳದ ಕಡೆಗೆ ಬಂದು ಸುತ್ತಮುತ್ತಲಿನ ತೋಟಗಳ ಕಡೆಗೆ ಆಹಾರವನ್ನು ಅರಸಿ ಹೋಗುತ್ತದೆ.
ಮೇಟ್ನಹಳ್ಳದ ರಸ್ತೆ ಬದಿಯಲ್ಲಿಯೇ ಆನೆ ಕಾವಲು ಕೇಂದ್ರ ಇದೆ. ಆದರೆ ಇದು ಕಳ್ಳಬೇಟೆ ತಡೆಯುವ ತಪಾಸಣಾ ಕೇಂದ್ರವಾಗಿದ್ದು ಆನೆಯು ರಸ್ತೆಗೆ ಇಳಿಯುವುದನ್ನು ತಡೆಯಲು ಅರಣ್ಯ ಇಲಾಖೆ ಇದುವರೆಗೂ ಕ್ರಮ ಕಗೈಗೊಳ್ಳದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಕೊಡಗರಹಳ್ಳಿ ಮತ್ತು ಉಪ್ಪುತೋಡು, ೭ನೇ ಹೊಸಕೋಟೆ ಹಾಗೂ ಕಂಬಿಬಾಣೆ, ಕೆದಕಲ್ ಹಾಗೂ ಹೆರೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮಿತಿಮೀರಿದ್ದು ಕಾಫಿ ಬೆಳೆಗಾರರು, ಕೃಷಿಕರು ಆತಂಕದಲ್ಲಿಯೇ ಬದುಕುವ ಸ್ಥಿತಿ ಬಂದೊದಗಿದೆ.
ನಿತ್ಯ ಹೆದ್ದಾರಿಯಲ್ಲಿ ಸಂಚರಿಸುವ ಕಾಡಾನೆಯ ಬಗ್ಗೆ ಮಾಹಿತಿ ಬಂದಿದ್ದು ಈ ಬಗ್ಗೆ ಅದರ ಚಲನವಲನಗಳನ್ನು ಗಂಭೀರವಾಗಿ ಕಲೆ ಹಾಕಲಾಗುತ್ತಿದೆ. ಹೆರೂರು, ನಾಕೂರು, ಕೊಡಗರಹಳ್ಳಿಯ ಅಂದಗೋವೆ ಪೈಸಾರಿಯಲ್ಲಿ ಸಂಚರಿಸಿ ಮರಳಿ ಆನೆಕಾಡಿಗೆ ಹೋಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆನೆಯನ್ನು ಸೆರೆಹಿಡಿಯುವ ಅಥವಾ ಪರ್ಯಾಯ ಮಾರ್ಗಗಳ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಮಾಹಿತಿ ನೀಡಿದ್ದಾರೆ.