ಕುಶಾಲನಗರ, ಮೇ ೧೮: ತಾ ೧೬ ರಂದು ನಿಧನರಾದ ಕುಶಾಲನಗರದ ಕಾರ್ಡ್ ಸಂಸ್ಥೆಯ ರೂವಾರಿ ಆದಿವಾಸಿಗಳ ಹಕ್ಕುಗಳಿಗಾಗಿ ಶ್ರಮಿಸಿದ್ದ ಸಮಾಜ ಸೇವಕ ಕುಶಾಲನಗರದ ರಾಯ್ ಡೇವಿಡ್ ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿತು. ಮೃತರ ಅಂತ್ಯಕ್ರಿಯೆಯಲ್ಲಿ ನೂರಾರು ಮಂದಿ ಆದಿವಾಸಿಗಳು ಭಾಗಿಯಾಗಿ ಮೃತರ ಅಂತಿಮ ದರ್ಶನ ಪಡೆದು ಮೃತದೇಹದ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಜೇನು ಕುರುಬರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಜೆ.ಟಿ.ರಾಜಪ್ಪ, ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು, ಜೇನು ಕುರುಬರ ಅಭಿವೃದ್ಧಿ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಬಸವಣ್ಣ, ಬುಡಕಟ್ಟು ಕೃಷಿಕರ ಸಂಘದ ಜೆ.ಕೆ.ತಿಮ್ಮ, ಜೆ.ಎಂ.ಸೋಮಯ್ಯ, ಜಯಪ್ಪ ಜೆ.ಟಿ,ಕಾಳಿಂಗ ಮತ್ತಿತರರು ಇದ್ದರು.