ವೀರಾಜಪೇಟೆ, ಮೇ ೧೮: ಇಲ್ಲಿಗೆ ಸಮೀಪದ ಗುಂಡಿಕೆರೆಯಲ್ಲಿ ಸಾಂತ್ವನ ಸಮಿತಿ ವತಿಯಿಂದ ಬಡ ಕುಟುಂಬಗಳಿಗೆ ನಿರ್ಮಿಸುತ್ತಿರುವ ಮನೆಯ ಕಾಮಗಾರಿಗೆ ಮುಖ್ಯಮಂಚಿತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಇಲ್ಲಿಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ದೃಷ್ಟಿಯಿಂದ ಈ ರೀತಿಯ ಪ್ರೋತ್ಸಾಹ ಬಹಳ ಅವಶ್ಯಕಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್, ಪುರಸಭೆ ಮಾಜಿ ಸದಸ್ಯ ರಾಫಿ, ಹಾಗೂ ಸ್ಥಳಿಯರಾದ ಮೊಯಿದು, ರಜಕ್, ಅಕ್ಬರ್, ರಫೀಕ್, ಫಾಕ್ರುದಿನ್, ಶಾಫಿಕ್, ನಿಜರ್, ಅಭಿದ್, ಪಕ್ಷದ ಮುಖಂಡರು ಇಸ್ಮಾಯಿಲ್, ಆಲಿ, ಮಂಜುನಾಥ್ ಯುವ ಬ್ಲಾಕ್ ಅಧ್ಯಕ್ಷ ಶಬೀರ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.