ಚೆಯ್ಯಂಡಾಣೆ, ಮೇ ೧೮: ಕಡಂಗ ಪಟ್ಟಣದಲ್ಲಿ ತಾ. ೬ ರಂದು ಬೆಂಕಿಗಾಹುತಿಯಾದ ಹೊಟೇಲ್, ಮೊಬೈಲ್, ತರಕಾರಿ ಅಂಗಡಿಗಳಿಗೆ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಭೇಟಿ ನೀಡಿ, ಅಂಗಡಿಗಳನ್ನು ಕಳೆದು ಕೊಂಡವರಿಗೆ ಸಾಂತ್ವನ ಹೇಳಿದರು.

ಅಂಗಡಿ ಮಳಿಗೆಗಳು ಬೆಂಕಿಗಾಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂಗಡಿ ಮಾಲೀಕರು ಶಾಸಕರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಸುಬೈರ್ ಸಿ.ಇ, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ನಾಸರ್, ಮತ್ತಿತರರು ಇದ್ದರು.