ಮಡಿಕೇರಿ, ಮೇ.೧೮: ಕೊಡವ ಪರಂಪರೆ ಹಾಗೂ ಸಂಸ್ಕೃತಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬರುತ್ತಿರುವ ರಾಜ್ಯ ಪ್ರಶಸ್ತಿ ವಿಜೇತೆ ದಾನಿಗಳಾದ ಕೈಬುಲೀರ ಪಾರ್ವತಿ ಬೋಪಯ್ಯ ಅವರನ್ನು ಕಿಗ್ಗಟ್‌ನಾಡ್ ಹಿರಿಯ ನಾಗರಿಕರ ವೇದಿಕೆಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ವೇದಿಕೆಯ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ಅವರು, ಪಾರ್ವತಿ ಬೋಪಯ್ಯ ಅವರ ತ್ಯಾಗ ಹಾಗೂ ಸೇವೆಗಳನ್ನು ಬಣ್ಣಿಸಿದರು.

ಪಾರ್ವತಿ ಬೋಪಯ್ಯ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಕಿಗ್ಗಟ್‌ನಾಡ್ ಹಿರಿಯ ನಾಗರಿಕರ ವೇದಿಕೆಯ ಸೇವೆಯನ್ನು ಶ್ಲಾಘಿಸಿದರು.

ಈ ಸಂದರ್ಭ ವೇದಿಕೆಯ ಸ್ಥಾಪಕಾಧ್ಯಕ್ಷ ಕಾಟಿಮಾಡ ಜಿಮ್ಮ ಅಣ್ಣಯ್ಯ, ಜಂಟಿ ಕಾರ್ಯದರ್ಶಿ ಎನ್ ಸುಬ್ರಮಣಿ, ನಿರ್ದೇಶಕರುಗಳಾದ ಎಂ. ಪಾರ್ವತಿ ಜೋಯಪ್ಪ, ಎಚ್ ಬೋಜಮ್ಮ, ಎಂ. ಸುಮಿ ಮುತ್ತಣ್ಣ, ಎಂ. ಲವ್ಲಿ ಸೋಮಯ್ಯ ಹಾಗೂ ಪ್ರತಿಮಾ ರಮೇಶ್ ಆರ್ಯ, ಕೆ. ರಾಜ, ಬಿ. ಕಾಶಿ ಕಾರ್ಯಪ್ಪ, ಖಜಾಂಚಿ ಐನಂಡ ಕೆ ಮಂದಣ್ಣ, ನಿರ್ದೇಶಕರಾದ ಕೆ.ಎನ್ ಕಾರ್ಯಪ್ಪ, ಎಂ. ಪೊನ್ನಪ್ಪ, ಎಂ. ರಾಜಾ ಸುಬ್ಬಯ್ಯ ಹಾಜರಿದ್ದರು.