*ಗೋಣಿಕೊಪ್ಪ, ಮೇ ೧೮: ಗೋಣಿಕೊಪ್ಪ ಕೊಡಗು ಹಿಂದೂ ಮಲಯಾಳಿ ಸಮಾಜದ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಕೆ.ಪಿ. ಪ್ರಶಾಂತ್ಕುಮಾರ್, ಗೌರವ ಅಧ್ಯಕ್ಷ ಪಿ.ಎಸ್. ಶರತ್ಕಾಂತ್, ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಖಜಾಂಚಿ ಶಾಜಿ ಅಚ್ಚುತ್ತನ್, ಉಪಾಧ್ಯಕ್ಷರುಗಳಾದ ಕೆ.ಜಿ. ಪ್ರಸಾದ್, ಸಿ.ಕೆ. ವೇಣುಗೋಪಾಲ್, ಪುಷ್ಪ ಮನೋಜ್, ಶ್ರೀಜಾ ಪ್ರದೀಪ್, ಸಂಘಟನಾ ಕಾರ್ಯದರ್ಶಿ ಟಿ.ಜಿ. ಮನುಕುಮಾರ್, ಸರಳ ಮಣಿಲಾಲ್, ಸಹ ಕಾರ್ಯದರ್ಶಿ ಬಿಂದು ಶಾಜಿ, ಕಾನೂನು ಸಲಹೆಗಾರ ಕೆ.ಬಿ. ಸಂಜೀವ್, ನಿರ್ದೇಶಕರುಗಳಾದ ಪಿ.ಈ. ರಾಜಶೇಖರ್, ಪಿ.ವಿ. ಚಂದ್ರ, ರತೀಶ್ ಕುಮಾರ್, ವಿ.ಎನ್ ರೀನಾ ಪದಗ್ರಹಣ ಸ್ವೀಕರಿಸಿದರು.
ಸಮಾಜದ ಅಧ್ಯಕ್ಷ ಕೆ.ಪಿ. ಪ್ರಶಾಂತ್ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರ ಬೆಂಬಲದಿAದ ಸಮಾಜವನ್ನು ಮುನ್ನಡೆಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಮಾಜಕ್ಕಾಗಿ ದುಡಿಯುವ ಮನೋಭಾವದೊಂದಿಗೆ ಎಲ್ಲರೂ ಸೇರಿ ಸಮಾಜವನ್ನು ಮುನ್ನಡೆಸಬೇಕಿದೆ ಎಂದರು.
ಪೊನ್ನAಪೇಟೆ ತಾಲೂಕು ಶ್ರೀ ಅಮ್ಮ ಕುಟುಂಬದ ಶಾಂತ ಕುಂಞÂಕಣ್ಣನ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು. ಚೆನ್ನಯ್ಯನಕೋಟೆ ಪ್ರಾಥಮಿಕ ಶಾಲೆಯ ಪ್ರಬಾರ ಮುಖ್ಯ ಶಿಕ್ಷಿಕಿ ಕೆ.ಕೆ. ಸುಷಾ ಮೋಹನ್ ಪದಗ್ರಹಣ ಬೋಧಿಸಿದರು.
ಜಿಲ್ಲಾ ಸಮಿತಿ ಸಲಹೆಗಾರ ಟಿ.ಆರ್. ವಾಸುದೇವ್ ಮಾತನಾಡಿ, ಮನೆಯಲ್ಲಿ ಮಲಯಾಳಂ ಭಾಷೆ ಮಾತನಾಡುವುದರಿಂದ ಮುಂದಿನ ಪೀಳಿಗೆಗೆ ಭಾಷಾ ಅಭಿಮಾನ ಹೆಚ್ಚಾಗಲಿದೆ. ದುಡಿದು ಬದುಕುವ ಶಿಕ್ಷಣವನ್ನು ಮಕ್ಕಳಿಗೆ ಮನೆಯಲ್ಲಿಯೇ ನೀಡಬೇಕು ಎಂದು ಸಲಹೆ ನೀಡಿದರು.
ತಾಲೂಕು ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕಿ ಕೆ.ಆರ್. ಬಿಂದು ಸಮಾಜದ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿ, ಸಮಾಜ ಬೆಳವಣಿಗೆಗೆ ಆಡಳಿತ ಮಂಡಳಿ, ಸದಸ್ಯರ ಬೆಂಬಲ ಮುಖ್ಯ ಎಂದರು.
ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಎಸ್. ಶರತ್ಕಾಂತ್ ಮಾತನಾಡಿ, ೨೦೧೭ ರಲ್ಲಿ ಸಮಾಜ ಅಸ್ತಿತ್ವಕ್ಕೆ ಬಂದ ನಂತರ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಸಮಾಜ ಬಾಂಧವರಿಗಾಗಿ ನಡೆದಿದೆ. ಸಮಾಜದ ಉಳಿವಿಗೆ ಎಲ್ಲರ ಸಹಕಾರ ಮುಖ್ಯ ಎಂದರು.
ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಗೋಣಿಕೊಪ್ಪ ಶಾಖೆಯ ಅಧ್ಯಕ್ಷ ಕೆ. ವೇಣುಗೋಪಾಲ ಮೆನನ್, ಗೋಣಿಕೊಪ್ಪ ಎಸ್.ಎನ್.ಡಿ.ಪಿ ಅಧ್ಯಕ್ಷ ಪಿ.ಜಿ. ರಾಜಶೇಖರ್, ಗೋಣಿಕೊಪ್ಪ ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಣಿಕಂಠ ಉಪಸ್ಥಿತರಿದ್ದರು.
ಲಿದಿನಾ ಸುಹಾಸ್ ಸ್ವಾಗತ ನೃತ್ಯ ಮಾಡಿದರು. ಸಾನ್ವಿ ಪ್ರಾರ್ಥಿಸಿದರು. ಎಂ.ಎಸ್. ಸುಬ್ರಮಣಿ ಸ್ವಾಗತಿಸಿದರು.