ಮಡಿಕೇರಿ, ಮೇ ೧೮: ವೈದ್ಯ ವೃತ್ತಿಯೊಂದಿಗೆ ಕಲಾತ್ಮಕ ಪ್ರವೃತ್ತಿ ಇರಿಸಿಕೊಂಡಿರುವ ಖ್ಯಾತ ವೈದ್ಯ ಡಾ. ಎಂ.ಜಿ. ಪಾಟ್ಕರ್ ಅವರ ಸಂಗ್ರಹದ ಅಪರೂಪದ ಐತಿಹಾಸಿಕ ನಾಣ್ಯಗಳ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ನಗರದ ಮ್ಯೂಸಿಯಂನಲ್ಲಿ ಹುಣಸೂರಿನ ಖ್ಯಾತ ನಾಣ್ಯ ಹಾಗೂ ಸ್ಟಾö್ಯಂಪ್ ಸಂಗ್ರಹಕಾರ ಕೇಶವಮೂರ್ತಿ ಅವರು ಹೆಸರಾಂತ ವೈದ್ಯ ಡಾಕ್ಟರ್ ಪಾಟ್ಕರ್ ಅವರು ಸಂಗ್ರಹಿಸಿರುವ ನಾಣ್ಯಗಳ ಪ್ರದರ್ಶನವನ್ನು ಉದ್ಘಾಟಿಸಿದರು.

ಡಾಕ್ಟರ್ ಪಾಟ್ಕರ್ ಅವರ ಸಂಗ್ರಹದಲ್ಲಿ ಸುಮಾರು ೩೦೦೦ ಅಪರೂಪದ ನಾಣ್ಯಗಳು ಇರುವುದನ್ನು ಅವರು ಶ್ಲಾಘಿಸಿದರು. ಸ್ಟ್ಯಾಂಪ್ ಹಾಗೂ ನಾಣ್ಯ ಸಂಗ್ರಹ ಒಂದು ಉತ್ತಮ ಹವ್ಯಾಸ ಎಂದು ವಿವರಿಸಿದರು.

ಈ ಹಿಂದೆ ಕೊಡಗು ಫಿಲಟಲಿ ಕ್ಲಬ್ ಅಧ್ಯಕ್ಷರೂ ಆಗಿದ್ದ ಪಾಟ್ಕರ್ ಅವರು ಮಾತನಾಡಿ, ತಮ್ಮ ತಂದೆ ಹಳೆಯ ಸ್ಟಾö್ಯಂಪ್‌ಗಳನ್ನು ಸಂಗ್ರಹಿಸಿ ಇಡುತ್ತಿದ್ದ ಕುರಿತು ಸ್ಮರಿಸಿದರು. ತಾನು ಕೂಡ ಅದೇ ಹವ್ಯಾಸವನ್ನು ಮುಂದುವರೆಸಿದ್ದು, ಮಡಿಕೇರಿಯ ಶೀತ ವಾತಾವರಣದಲ್ಲಿ ಸ್ಟಾö್ಯಂಪ್‌ಗಳನ್ನು ರಕ್ಷಿಸುವುದು ಅಸಾಧ್ಯವಾದಾಗ ನಾಣ್ಯಗಳ ಸಂಗ್ರಹಕ್ಕೆ ಮುಂದಾದರು ಎಂದರು.

ಪ್ರದರ್ಶನಕ್ಕೆ ಇರಿಸಿರುವ ನಾಣ್ಯಗಳಲ್ಲಿ ಅಪರೂಪದ ಬನವಾಸಿ ನಾಣ್ಯಗಳು ಎರಡನೇ ಚಂದ್ರಗುಪ್ತನ ಕಾಲದ ಮೂರನೇ ಶತಮಾನದ ಚಿನ್ನದ ವರಾಹ, ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿ ಚಲಾವಣೆಗೆ ಬಂದ ಭಾರತದ ಮೊಟ್ಟಮೊದಲ ಪಂಚ್ಮಾರ್ಕ್ ನಾಣ್ಯಗಳು, ಗ್ರೀಕ್ ರೋಮನ್ ಕುಶಾನರು ಗುಪ್ತ ಸಾಮ್ರಾಜ್ಯ ಶಾತವಾಹನ ಕ್ಷೇತ್ರ ಚೋಳ ಪಲ್ಲವ ಪಾಂಡ್ಯ ಇತ್ಯಾದಿ ನಾಣ್ಯಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.

ಮೊಘಲ್ ದೊರೆಗಳಾದ ಅಕ್ಬರ್ ಶಹಜಹಾನ್ ಅವರಂಗಜೇಬ್ ಜಹಾಂಗೀರ್ ಕಾಲದ ನಾಣ್ಯಗಳು, ಬ್ರಿಟಿಷರ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪೋರ್ಚುಗೀಸರ, ಫ್ರೆಂಚರ, ಡಚ್ಚರ ಕಾಲದ ನಾಣ್ಯಗಳು ವಿದೇಶಿ ಆಕ್ರಮಣಕಾರರಾದ ಸೂರಿ ಲೋಧಿ ಗೋರಿ ಕಿಲ್ಜಿ ತೊಗಲಕ್ ಗಜನಿ ಸಂದರ್ಭ ನಾಣ್ಯಗಳು ಹಾಗೂ ಸಾಕಷ್ಟು ಚಿನ್ನ ಬೆಳ್ಳಿಯ ನಾಣ್ಯಗಳು ತಾಮ್ರ ಹಿತ್ತಾಳೆಯ ನಾಣ್ಯಗಳು ಈ ಸಂಗ್ರಹದಲ್ಲಿ ಕಾಣಸಿಗಲಿವೆ.

ಉದ್ಘಾಟನಾ ಸಮಾರಂಭದಲ್ಲಿ ಕ್ಯುರೇಟರ್ ರೇಖಾ, ಜಯಲಕ್ಷಿö್ಮ ಪಾಟ್ಕರ್, ಚಿಂತನ ಪಾಟ್ಕರ್, ಸಲೀಲಾ ಪಾಟ್ಕರ್, ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ, ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್, ಸಮಾಜಸೇವಕ ದಿನೇಶ್, ಪತ್ರಿಕಾ ವಿತರಕರ ಸಂಘದ ಸದಸ್ಯ ಶಿವಪ್ರಸಾದ್ ಭಟ್ ಮತ್ತಿತರರು ಹಾಜರಿದ್ದರು.