ಕುಶಾಲನಗರ, ಮೇ ೧೭: ಕುಶಾಲನಗರ ಗುಮ್ಮನಕೊಲ್ಲಿ ಬಳಿ ವಿದ್ಯುತ್ ತಂತಿ ತಗುಲಿ ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿ ಸಾನ್ವಿ ಚಿಕಿತ್ಸೆ ವೆಚ್ಚವನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಭರಿಸಲು ಕ್ರಮ ಕೈಗೊಳ್ಳುವುದು ಎಂದು ಚೆಸ್ಕಾಂ ಕೊಡಗು ವೃತ್ತದ ಅಧೀಕ್ಷಕ ಇಂಜಿನಿಯರ್ ಎಂ.ಕೆ. ಸೋಮಶೇಖರ್ ಭರವಸೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಕಚೇರಿಯಲ್ಲಿ ಭೇಟಿ ಮಾಡಿದ ಕುಶಾಲನಗರ ತಾಲೂಕು ಸೌಂದರ್ಯ ವರ್ಧಕ ತಜ್ಞರ ಅಸೋಸಿಯೇಷನ್ ಪದಾಧಿಕಾರಿಗಳ ಮನವಿಗೆ ಸ್ಪಂದಿಸಿ, ಆಕಸ್ಮಿಕ ಘಟನೆ ನಡೆದಿದೆ. ಬಾಲಕಿಗೆ ಚಿಕಿತ್ಸೆ ನಡೆಯುತ್ತಿದ್ದು ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡುಬAದಿದ್ದು ಆಕೆಯ ಚಿಕಿತ್ಸೆಗೆ ತಗಲುವ ವೆಚ್ಚವನ್ನು ನಿಗಮ ಭರಿಸಲಿದೆ ಎಂದು ಹೇಳಿದರು.

ಅಧಿಕಾರಿಗಳು ಈ ಸಂಬAಧ ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿ ಚಿಕಿತ್ಸೆಗೆ ತುರ್ತಾಗಿ ೫೦ ಸಾವಿರ ನೀಡಿರುವುದಾಗಿ ತಿಳಿಸಿದ್ದಾರೆ. ಹೆಚ್ಚುವರಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಘಟನೆಯ ಸಮಗ್ರ ವರದಿಯನ್ನು ತಕ್ಷಣ ನೀಡುವಂತೆ ಸಂಬAಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಟ್ಟಡಗಳ ಸಮೀಪ ಹಾದು ಹೋಗಿರುವ ವಿದ್ಯುತ್ ತಂತಿಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಕೂಡಲೇ ವರದಿ ನೀಡಿ ಅಗತ್ಯ ಇಲಾಖಾ ಕ್ರಮ ಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಸೋಮಶೇಖರ್ ಮಾಹಿತಿ ನೀಡಿದರು.

ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷೆ ವನಿತಾ ಚಂದ್ರಮೋಹನ್, ತಾಲೂಕು ಅಧ್ಯಕ್ಷೆ ನಾಗಮಣಿ, ಪ್ರಧಾನ ಕಾರ್ಯದರ್ಶಿ ನವ್ಯ, ತಾಜ್ ಇಸ್ಮಾಯಿಲ್ ಮೈಸೂರಿನ ಆಸ್ಪತ್ರೆಗೆ ತೆರಳಿ ಮಗುವಿನ ಆರೋಗ್ಯ ವಿಚಾರಿಸಿ ತುರ್ತು ಚಿಕಿತ್ಸೆ ವೆಚ್ಚಕ್ಕೆ ಕುಶಾಲನಗರ ತಾಲೂಕು ಸಂಘದಿAದ ರೂ. ೫ ಸಾವಿರ ಮತ್ತು ಸದಸ್ಯರ ಮೂಲಕ ರೂ. ೩೦ ಸಾವಿರ, ಜಿಲ್ಲಾ ಸೌಂದರ್ಯವರ್ಧಕ ಸಂಘದ ಸಂಘದ ಮೂಲಕ ೨೯ ಸಾವಿರ ಹಾಗೂ ಸಂಘದ ಕೋರಿಕೆ ಮೇರೆಗೆ ಬಿಎ ಐ ಸಂಸ್ಥೆ ಸುಮಾರು ೫೦ ಸಾವಿರ ರೂಪಾಯಿ ಸೇರಿದಂತೆ ಸುಮಾರು ೧.೫ ಲಕ್ಷ ರೂಗಳ ಸಹಾಯಹಸ್ತ ಈಗಾಗಲೇ ನೀಡಲಾಗಿದೆ ಎಂದು ಅಸೋಸಿಯೇಷನ್ ಪ್ರಮುಖರು ತಿಳಿಸಿದ್ದಾರೆ.