ಮಡಿಕೇರಿ, ಮೇ ೧೭: ಮಡಿಕೇರಿ ತಾಲೂಕು ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನ ನಾಪೋಕ್ಲು ಹೋಬಳಿಯ ಕಡಂಗ - ಅರಪಟ್ಟು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ. ೨೦ ರಂದು ನಡೆಯಲಿದೆ.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಆಯ್ಕೆಯಾಗಿದ್ದು, ಅವರನ್ನು ಮೈಸೂರಿನ ಅವರ ನಿವಾಸದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಹಾಗೂ ಸಮ್ಮೇಳನದ ಉಪ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭೇಟಿಯಾಗಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ಮನವಿ ಮಾಡಿ ಸಮ್ಮೇಳನಕ್ಕೆ ಆಹ್ವಾನಿಸಿದರು.

ಐತಿಚಂಡ ರಮೇಶ್ ಉತ್ತಪ್ಪ ಅವರು ಇದು ನನ್ನ ಸಾಹಿತ್ಯ ಸೇವೆಗೆ ಹುಟ್ಟೂರಿನಲ್ಲಿ ಸಿಗುತ್ತಿರುವ ಗೌರವ ಎಂದರು.

ಈ ಸಂದರ್ಭ ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷರೂ, ಹಣಕಾಸು ಸಮಿತಿ ಅಧ್ಯಕ್ಷರೂ ಆದ ಕೋಡಿರ ವಿನೋದ್ ನಾಣಯ್ಯ, ಸಂಚಾಲಕ ಕಣಿಯರ ಜಯಪ್ರಕಾಶ್, ಆಹಾರ ಸಮಿತಿ ಅಧ್ಯಕ್ಷ ಐತಿಚಂಡ ಪ್ರಕಾಶ್ ಕಾರ್ಯಪ್ಪ, ವೇದಿಕೆ ನಿರ್ವಹಣಾ ಸಮಿತಿ ಅಚ್ಚಾಂಡಿರ ತಾರಾ ಉದಯ, ಸಮಿತಿಯ ಸದಸ್ಯರುಗಳಾದ ಬೇಪಡಿಯಂಡ ಅರುಣ, ನೆರಪಂಡ ಸತೀಶ್, ಬಟ್ಟಿಯಂಡ ಅಂಬಿಕಾ ಅಶೋಕ್, ಬಾಕಿಲನ ಮಮತಾ ಸಚಿನ್, ಸಂಧ್ಯಾ ಕಾಮತ್ ಐತಿಚಂಡ ರಮೇಶ್ ಉತ್ತಪ್ಪ ಅವರ ಪತ್ನಿ ರೇಷ್ಮಾ ರಮೇಶ್ ಮತ್ತು ಅಜಯ್ ಉಪಸ್ಥಿತರಿದ್ದರು.