ಕೂಡಿಗೆ, ಮೇ ೧೭: ಕೂಡಿಗೆಯಲ್ಲಿರುವ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಡೆಯುತ್ತಿರುವ ಸರಕಾರಿ ಕ್ರೀಡಾ ಶಾಲೆಯಲ್ಲಿ ಪ್ರಸುತ್ತ ವರ್ಷಗಳಲ್ಲಿ ಪದವಿ ತರಗತಿಗೆ ವಿದ್ಯಾರ್ಥಿಗಳಿಗೆ ವಸತಿ ಗೃಹಗಳ ಅನುಕೂಲ ಕಲ್ಪಿಸುವಂತೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯ ಸರಕಾರಕ್ಕೆ ಮತ್ತು ರಾಜ್ಯ ಮಟ್ಟದ ಆಯುಕ್ತರಿಗೆ ಪ್ರಸ್ತಾವನೆ ಕಳುಹಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ ಅವರು ಕೂಡಿಗೆ ಕ್ರೀಡಾಶಾಲೆಗೆ ಭೇಟಿ ನೀಡಿ ಅಲ್ಲಿನ ಹಾಕಿ ಮೈದಾನ ಸೇರಿದಂತೆ ಶಾಲಾ ಆವರಣದಲ್ಲಿರುವ ವ್ಯವಸ್ಥೆ ಮತ್ತು ಈಗಾಗಲೇ ಆರಂಭವಾಗಿರುವ ಪಿಯುಸಿ ಮುಗಿಸಿದ ಕ್ರೀಡಾ ವಿದ್ಯಾರ್ಥಿಗಳಿಗೆ ಪದವಿ ತರಗತಿಗೆ ಅವಕಾಶವನ್ನು ಕಲ್ಪಿಸುವ ಹಿತದೃಷ್ಟಿಯಿಂದ ವಸತಿ ಗೃಹಗಳ ನಿರ್ಮಾಣವನ್ನು ಕೂಡಿಗೆಯಲ್ಲಿ ಆರಂಭಿಸುವ ಚಿಂತನೆ ಹರಿಸಲಾಗಿದೆ ಎಂದು ತಿಳಿಸಿದ್ದಾರೆ. ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಅವರು ಸಂಬAಧಿಸಿದ ಇಲಾಖೆಯ ಇಂಜಿನಿಯರ್, ಜಿಲ್ಲಾ ಯುವ ಸಬಲೀಕರಣ ಸಹಾಯಕ ನಿರ್ದೇಶಕರು, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅಧಿಕಾರಿ ವರ್ಗದವರ ಸಮ್ಮುಖದಲ್ಲಿ ಸಭೆ ನಡೆಸಿ ಕ್ರೀಡಾ ಶಾಲಾ ಪಿಯುಸಿ ಶಿಕ್ಷಣ ಮುಗಿದ ನಂತರ ಪದವಿ ಶಿಕ್ಷಣ ಪಡೆಯಲು ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ, ಕ್ರೀಡಾ ಶಾಲಾ ವಿದ್ಯಾರ್ಥಿಗಳ ಪೋಷಕರ ಅನೇಕ ವರ್ಷಗಳ ಬೇಡಿಕೆಯ ಅನುಗುಣವಾಗಿ ಕ್ರೀಡಾ ಜಿಲ್ಲೆಕ್ಕೆ ಕ್ರೀಡಾ ಪಟುಗಳಿಗೆ ಅನುಕೂಲವಾಗುವಂತೆ ಕಾರ್ಯಗತಗೊಳಿಸಲು ಕ್ರೀಡಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ, ಇಂಜಿನಿಯರ್ ಜಯಪ್ರಕಾಶ್, ಹಾಕಿ ತರಬೇತಿ ದಾರರಾದ ವೆಂಕಟೇಶ್, ದೀನಾಮಣಿ, ಸುರೇಶ್, ಮುಖ್ಯೋಪಾಧ್ಯಾಯನಿ ಅಶ್ವಿತ್ ಸೇರಿದಂತೆ ಶಿಕ್ಷಕರ ವೃಂದ ಸಿಬ್ಬಂದಿ ವರ್ಗದವರು ಹಾಜರಿದ್ದರು.