ವಿಶೇಷ ವರದಿ : ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಮೇ ೧೫: ಭವಿಷ್ಯದ ದೃಷ್ಟಿಯನ್ನು ಮುಂದಿಟ್ಟುಕೊAಡು ನಾಗರಿಕರಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಕ್ಕೆ ತರಲು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರ ತವರು ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು ಯೋಜನೆ ಅನುಷ್ಠಾನಗೊಂಡಲ್ಲಿ ಬೇಗೂರು, ಹುದಿಕೇರಿ, ಟಿ. ಶೆಟ್ಟಿಗೇರಿ ಹಾಗೂ ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಯ ಫಲ ಲಭಿಸಲಿದೆ.
ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನವನ್ನು ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ತಮ್ಮ ತವರು ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತಂದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಯ ಫಲವನ್ನು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಕುಟುಂಬಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಕೆಆರ್- ಕಕ್ಕಟ್ಟ್ ಹೊಳೆಯಿಂದ ಹರಿಯುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಹುದಿಕೇರಿ ಗ್ರಾಮ, ಬಿ. ಶೆಟ್ಟಿಗೇರಿ - ಶ್ರೀಮಂಗಲ ಗ್ರಾಮಕ್ಕೆ ಇದರ ಪ್ರಯೋಜನ ಲಭಿಸಲಿದೆ. ಈ ಭಾಗದಿಂದ ಹರಿಯುವ ನೀರು ಹೈಸೊಡ್ಲೂರು ಬಳಿಯ ಕಕ್ಕಟ್ ಭಾಗದಿಂದ ಹರಿದು ಕುಟ್ಟಂದಿ - ಕೊಂಗಣ ಮಾರ್ಗವಾಗಿ ಲಕ್ಷö್ಮಣ ತೀರ್ಥ ನದಿಗೆ ಸೇರುತ್ತಿದೆ. ಈ ನೀರನ್ನು ಕುಡಿಯುವ ನೀರಿನ ಯೋಜನೆಗೆ ಸದ್ಬಳಕೆ ಮಾಡಿಕೊಂಡಲ್ಲಿ ಬೇಗೂರು-ಹುದಿಕೇರಿ-ಬೆಳ್ಳೂರು-ಟಿ. ಶೆಟ್ಟಿಗೇರಿ ಹಾಗೂ ಶ್ರೀಮಂಗಲ ವ್ಯಾಪ್ತಿಯವರೆಗೂ ನೀರನ್ನು ಸರಬರಾಜು ಮಾಡುವ ಅವಕಾಶವೂ ಈ ಯೋಜನೆಯಿಂದ ಲಭಿಸಬಹುದಾಗಿದೆ.
ಈ ಯೋಜನೆ ಕೈಗೊಂಡಲ್ಲಿ ಹುದಿಕೇರಿ ಮುಖ್ಯ ರಸ್ತೆಯ ಬಳಿಯಲ್ಲಿರುವ ಖಾಸಗಿ ಜಾಗದಲ್ಲಿ ನೀರು ಪೂರೈಕೆಗೆ ಬೇಕಾದ ಶುದ್ದೀಕರಣದ ಘಟಕವನ್ನು ನಿರ್ಮಾಣ ಮಾಡಲು ಅವಕಾಶವಿದ್ದು ಯೋಜನೆಯ ಫಲ ಸಾವಿರಾರು ಕುಟುಂಬಗಳಿಗೆ ತಲುಪಲಿದೆ.