ಮುಳ್ಳೂರು, ಮೇ ೧೫: ಬೆಂಗಳೂರು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ೨೦೨೬ನೇ ಸಾಲಿನಲ್ಲಿ ಪ್ರಕಟಿಸಿರುವ ಆಯುರ್ವೇದ ಎಂಡಿ ಸ್ನಾತ್ತಕೋತ್ತರ ಪದವಿ ಪರೀಕ್ಷೆಯ ಫಲಿತಾಂಶದಲ್ಲಿ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿ ಡಾ. ಎಂ.ಪಿ. ಸೋನಿಯಾ ‘ಅಗದ ತಂತ್ರಜ್ಞಾನ’À ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಡಾ. ಸೋನಿಯಾ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಮೂದರವಳ್ಳಿ ಗ್ರಾಮದ ಎಂ.ಎಸ್. ಪುಟ್ಟೇಗೌಡ ಮತ್ತು ಶಿಕ್ಷಕಿ ಎ.ಎಸ್. ಸೌಭಾಗ್ಯ ದಂಪತಿ ಪುತ್ರಿ.