ಶನಿವಾರಸಂತೆ, ಮೇ ೧೪: ಶನಿವಾರಸಂತೆ ಪ್ರೀಮಿಯರ್ ಲೀಗ್ ತಂಡ ಹಾಗೂ ಈವ್ನಿಂಗ್ ಕ್ರಿಕೆಟರ್ಸ್ ವತಿಯಿಂದ ನಡೆದ ಡಾ ಮಂತರ್ ಗೌಡ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಲೀಗ್‌ನಲ್ಲಿ ವಿಯಾನ ಫ್ರೆಂಡ್ಸ್ ತಂಡ ಚಾಂಪಿಯನ್ ಸ್ಥಾನ ಪಡೆದುಕೊಂಡಿತು. ಜೈ ಭೀಮ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ೩ ದಿನಗಳ ಕಾಲ ನಡೆದ ಪಂದ್ಯದಲ್ಲಿ ೧೪ ತಂಡಗಳು ರೋಚಕ ಪ್ರದರ್ಶನ ನೀಡಿದವು.

ಪಂದ್ಯಾವಳಿಯಲ್ಲಿ ವಿಯಾನ್ ಫ್ರೆಂಡ್ಸ್ ನಿಡ್ತ ತಂಡ ಪ್ರಥಮ ಬಹುಮಾನ ಪಡೆದು ರೂ. ೪೦ ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಕೊಡ್ಲಿಪೇಟೆ ಜೈ ಭೀಮ್ ತಂಡ ದ್ವಿತೀಯ ಸ್ಥಾನದೊಂದಿಗೆ ರೂ.೨೦ ಸಾವಿರ ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಶನಿವಾರಸಂತೆ ಈವ್ನಿಂಗ್ ಕ್ರಿಕೇಟರ್ಸ್ ತಂಡ ತೃತೀಯ ಬಹುಮಾನ, ಆಲೂರುಸಿದ್ದಾಪುರ ಜಿ-ಕಿಂಗ್ಸ್ ತಂಡ ಚತುರ್ಥ ಬಹುಮಾನ ಪಡೆಯಿತು. ಸಮಾರೋಪ ಸಮಾರಂಭದಲ್ಲಿ ಮಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಸಿ.ಶರತ್ ಶೇಖರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಭುವನೇಶ್ವರಿ ವಿಜೇತ ತಂಡಗಳಿಗೆ ಬಹುಮಾನ ಹಾಗೂ ಟ್ರೋಫಿ ವಿತರಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ಪ್ರಾಂಶುಪಾಲ ನಿರಂಜನ್, ಉದ್ಯಮಿಗಳಾದ ಸಂಜು, ಕುಮಾರ್, ಮಹೇಶ್, ನಿಶಾಂತ್, ಅಕ್ಷಯ್, ನಿತಿನ್, ಪೊಲೀಸ್ ಸಿಬ್ಬಂದಿ ಮಂಜು, ಪ್ರಮುಖರಾದ ದಿಕ್ಷೀತ್ ಪೂಜಾರಿ, ದಿನೇಶ್, ಯತೀಶ್, ಮುನಾಫ್, ಅಝರ್, ರಶೀದ್ ಉಪಸ್ಥಿತರಿದ್ದರು.

ಆಯೋಜಕರಾದ ಚಂದ್ರು, ಅವಿನಾಶ್, ಸಂತೋಷ್ ಎಸ್.ರತ್ನಾಕರ್, ಮಹೇಶ್, ವಿನಯ್, ಸುಜೀತ್, ಸ್ಯಾಂಡಿ, ಟ್ರಾö್ಯಕ್ಟರ್ ಸಂತು, ಪ್ರಜ್ವಲ್ ಆಚಾರ್ಯ, ಪ್ರಮೋದ್, ಯಶವಂತ್ ಹಾಜರಿದ್ದರು.