ಮಡಿಕೇರಿ, ಮೇ ೧೪: ನವೀನ್ ಆಚಾರಿ ಬಿಳಿಗೇರಿ ಸ್ಮರಣಾರ್ಥ ನಡೆದ ಹಾಕತ್ತೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಸೀಜನ್೧೨ರಲ್ಲಿ ಪ್ರಸಾದ್ ಪೂಜಾರಿ ಮಾಲೀಕತ್ವದ ತುಶಾಂತ್ ಫ್ರೆಂಡ್ಸ್ ಬಿಳಿಗೇರಿ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ವಿಜಯ ಮಾಲೀಕತ್ವದ ರಾಯಲ್ ಸ್ಟಾರ್ ಹಾಕತ್ತೂರು ತಂಡ ದ್ವಿತೀಯ, ರಫ ಫೈಟರ್ಸ್ ತೃತೀಯ ಹಾಗೂ ಟೀಮ್ ೭೭ ಹಾಕತ್ತೂರು ತಂಡ ೪ನೇ ಸ್ಥಾನ ಪಡೆದುಕೊಂಡಿತು. ಐಪಿಎಲ್ ಮಾದರಿಯಲ್ಲಿ ಮೂರು ದಿನ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ೧೦ ತಂಡಗಳು ಭಾಗವಹಿಸಿದ್ದವು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರವೀಣ್ ಆಚಾರಿ, ಬಿಳಿಗೇರಿ. ಪ್ರಸಾದ್ ಪೂಜಾರಿ ಬಿಳಿಗೇರಿ, ಬಿ.ಸಿ.ನಾಣಯ್ಯ, ಪ್ರಶಾಂತ್ ಪೂಜಾರಿ ಹೊದ್ದೂರು, ಮಹಮ್ಮದ್ ಅಲಿ ಹಾಕತ್ತೂರು ಮತ್ತಿತರ ಪ್ರಮುಖರು ಹಾಜರಿದ್ದರು.