ಮಡಿಕೇರಿ, ಮೇ ೧೩: ಹತ್ತು ಕುಟುಂಬ ಹದಿನೆಂಟು ಗೊತ್ರದ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿರುವ ರಿಂಕ್ ಹಾಕಿ ಮೈದಾನದಲ್ಲಿ ನಡೆಯುತ್ತಿರುವ ರಿಂಕ್ ಹಾಕಿ ಹಬ್ಬದ ಸೆಮಿಫೈನಲ್ ಹಾಗೂ ಅಂತಿಮ ಪಂದ್ಯಾಟ ತಾ.೧೪ರಂದು (ಇಂದು) ನಡೆಯಲಿದೆ.

ಹೊನಲು ಬೆಳಕಿನ ಹಾಕಿ ಹಬ್ಬದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಕುಂಬಗೌಡನ ತಂಡ ತೋರೇರ ತಂಡವನ್ನು ೭-೦ ಗೋಲುಗಳ ಅಂತರದಿAದ ಸೋಲಿಸಿತು. ಕುಂಬಗೌಡನ ಪರ ಶ್ಯಾಂ ೨, ಭರತ್, ಭವಿ, ಸೋಮಣ್ಣ, ಅಜಿತ್, ಪ್ರಪಂಚ್ ತಲಾ ಒಂದು ಗೋಲು ದಾಖಲಿಸಿದರು.

ಪರಿಚನ ಹಾಗೂ ಕೊಟ್ಟಕೇರಿಯನ ನಡುವಿನ ಪಂದ್ಯದಲ್ಲಿ ಪರಿಚನ ೧-೦ ಗೋಲಿನಿಂದ ಗೆದ್ದಿತು. ಪರಿಚನ ಶರತ್ ಗೋಲು ದಾಖಲಿಸಿದರು. ಬಾರಿಕೆ ಹಾಗೂ ಕಟ್ಟೆಮನೆ ತಂಡಗಳ ನಡುವಿನ ಪಂದ್ಯದಲ್ಲಿ ಬಾರಿಕೆ ೬-೦ ಗೋಲಿನಿಂದ ಗೆಲುವು ಸಾಧಿಸಿತು. ಬಾರಿಕೆ ಪರ ಜೂನಿಯರ್ ರಾಷ್ಟಿçÃಯ ಆಟಗಾರ ಚಂದನ್ ೨, ಡಿವೈಎಸ್ ಆಟಗಾರ ಲಿಕಿತ್ ೩, ಹಾಗೂ ನಿತಿನ್ ಗೋಲು ಬಾರಿಸಿದರು. ಮುಕ್ಕಾಟಿ ಎ ತಂಡ ಬಾಕಿಲನ ತಂಡವನ್ನು ೫-೦ ಗೋಲಿನಿಂದ ಸೋಲಿಸಿತು. ಮುಕ್ಕಾಟಿ ಪರ ದಿಲಿಪ್ ೨, ಕಿರಣ್ ೨, ಕುಶ ೧ ಗೋಲು ದಾಖಲಿಸಿದರು. ಕೆದಂಬಾಡಿ ಹಾಗೂ ಕುಡೆಕಲ್ಲು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಡೆಕಲ್ಲು ತಂಡ ೫-೦ ಗೋಲಿನಿಂದ ಗೆಲುವು ಸಾಧಿಸಿತು. ಕುಡೆಕಲ್ಲು ಪರ ನಿಹಾಲ್ ಹ್ಯಾಟ್ರಿಕ್ ಸಾಧನೆಯೊಂದಿಗೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮೂರು ಗೋಲು ಬಾರಿಸಿದರೆ, ಕಿಶೋರ್ ೨ ಗೋಲು ದಾಖಲಿಸಿದರು.

ಬಿಟ್ಟಿರ ಹಾಗೂ ಕುಂಬಗೌಡನ ನಡುವಿನ ಪಂದ್ಯದಲ್ಲಿ ಕುಂಬಗೌಡನ ೨-೦ ಗೋಲಿನಿಂದ ಗೆಲುವು ಸಾಧಿಸಿತು. ಕುಂಬಗೌಡನ ವಿಶ್ವಜಿತ್(ಪ್ರೀತಂ) ಗೋಲು ಬಾರಿಸಿದರು. ಪರಿಚನ ಹಾಗೂ ಹಾಗೂ ಬಾರಿಕೆ ನಡುವಿನ ಪಂದ್ಯದಲ್ಲಿ ಬಾರಿಕೆ ೪-೦ ಗೋಲುಗಳಿಂದ ಗೆಲುವು ಸಾಧಿಸಿತು. ಬಾರಿಕೆ ಪರ ಚಂದನ್ ೩, ಲಿಕಿತ್ ಒಂದು ಗೋಲು ದಾಖಲಿಸಿದರು.

ಪಡಿಕಲ್ ಹಾಗೂ ಆನೇರ ನಡುವಿನ ಪಂದ್ಯದಲ್ಲಿ ಆನೇರ ೧-೦ ಗೋಲಿನಿಂದ ಗೆದ್ದುಕೊಂಡಿತು. ಆನೇರ ಧವನ್ ಗೋಲು ಬಾರಿಸಿದರು.

ಕುಡೆಕಲ್ಲು ಹಾಗೂ ಮುಕ್ಕಾಟಿ ತಂಡದ ನಡುವಿನ ಪಂದ್ಯದಲ್ಲಿ ಮುಕ್ಕಾಟಿ ೨-೧ ಗೋಲಿನಿಂದ ಗೆಲುವು ಸಾಧಿಸಿತು. ಮುಕ್ಕಾಟಿ ಪರ ದಿಲಿಪ್ ಗೋಲು ಬಾರಿಸಿದರೆ, ಕುಡೆಕಲ್ಲು ಪರ ನಿಹಾಲ್ ಗೋಲು ಹೊಡೆದರು.

ರೋಚಕತೆಯಿಂದ ಕೂಡಿದ್ದ ಕುಂಬಗೌಡನ ಹಾಗೂ ಬಾರಿಕೆ ತಂಡಗಳ ನಡುವಿನ ಪಂದ್ಯದಲ್ಲಿ ಅಂತಿಮವಾಗಿ ಕುಂಬಗೌಡನ ತಂಡ ಗೆಲುವು ಸಾಧಿಸಿತು. ಪಂದ್ಯಾವಳಿಯ ಪೂರ್ಣಾವಧಿಯಲ್ಲಿ ೨-೨ ಗೋಲುಗಳಿಂದ ಸಮನಾಯಿತು. ಕುಂಬಗೌಡನ ಪರ ವಿಶ್ವಜಿತ್ ಹಾಗೂ ಬಾರಿಕೆ ಪರ ಲಿಕಿತ್ ಗೋಲು ದಾಖಲಿಸಿದರು. ನಂತರ ನೀಡಲಾದ ಪೆನಾಲ್ಟಿ ಸ್ಟೊçÃಕ್‌ನಲ್ಲಿ ಕುಂಬಗೌಡನ ೩-೨ ಗೋಲುಗಳಿಂದ ಜಯ ದಾಖಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.