ಮಡಿಕೇರಿ, ಮೇ ೧೧: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ ೨೦೨೬-೨೭ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಜನಾಂಗದವರಿಗೆ ಅರಿವು, ಶ್ರಮಶಕ್ತಿ ಯೋಜನೆ, ವೃತ್ತಿ ಪ್ರೋತ್ಸಾಹ, ಮೈಕ್ರೋ ಸಾಲ ಯೋಜನೆ(ಸ್ವ ಸಹಾಯ ಸಂಘ), ಪಶುಸಂಗೋಪನೆ, ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ನಿಗಮದಿಂದ ಸಾಲ ಸೌಲಭ್ಯಗಳನ್ನು ಒದಗಿಸಲಾಗಿದ್ದು, ೨೦೧೩-೧೪ನೇ ಸಾಲಿನಿಂದ ೨೦೧೮-೧೯ನೇ ಸಾಲಿನ ಫಲಾನುಭವಿಗಳಿಗೆ ಬಡ್ಡಿ ರಹಿತ ಸಾಲ ಮುಕ್ತಾಯಕ್ಕಾಗಿ ಒಂದಾವರ್ತಿ ತೀರುವಳಿ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ೨೦೨೬ ರ ಮೇ ೧ ರಿಂದ ೨೦೨೬ ರ ಜುಲೈ ೩೧ ರ ಅಂತ್ಯದವರೆಗೆ ಕಾಲಾವಕಾಶದಲ್ಲಿ ಸಾಲ ತೀರಿಸಲು ಅವಕಾಶ ನೀಡಲಾಗಿದ್ದು, ಈ ಅವಧಿಯಲ್ಲಿ ಅಸಲು ತೀರಿಸುವ ಫಲಾನುಭವಿಗಳಿಗೆ ಬಡ್ಡಿ ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಜಾದ್ ಭವನ, ಗ್ರಾಮಾಂತರ ಪೊಲೀಸ್ ಠಾಣೆ ಹತ್ತಿರ, ಕಾಲೇಜು ರಸ್ತೆ, ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ ಈ ಕಚೇರಿಗೆ ಭೇಟಿ ನೀಡುವುದು ಅಥವಾ ಜಿಲ್ಲಾ ಕಚೇರಿಯ ದೂ.ಸಂ. ೦೮೨೭೨-೨೦೧೪೪೯, ೮೨೭೭೯೪೪೨೨೨ನ್ನು ಸಂಪರ್ಕಿಸಬಹುದು. ಒಂದಾವರ್ತಿ ತೀರುವಳಿ ಯೋಜನೆಯ ಕೊನೆಯ ದಿನಾಂಕ ೨೦೨೬ ರ ಜುಲೈ ೩೧ ಆಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.