ಪೊನ್ನAಪೇಟೆ, ಮೇ. ೧೧: ಕೂರ್ಗ್ ಯುನೈಟೆಡ್ ಬಾಸ್ಕೆಟ್ ಬಾಲ್ ಕ್ಲಬ್ ಪೊನ್ನಂಪೇಟೆ ವತಿಯಿಂದ, ಟೀಗಲ್ ಹೂಪ್ ಸ್ಟರ್ಸ್ ಹಾಗೂ ಹಾಗೂ ಡಿ ಕೋಚ್‌ನ ಸಹಯೋಗದಲ್ಲಿ ಪೊನ್ನಂಪೇಟೆ ಸಂತ ಅಂತೋಣಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕೊಡಗು ಬಾಸ್ಕೆಟ್ ಬಾಲ್ ಲೀಗ್ ಸೀಸನ್ -೩ ರ ಚಾಂಪಿಯನ್ ಆಗಿ ಬಿಬಿಸಿ ಗೋಣಿಕೊಪ್ಪಲು ತಂಡ ಹೊರಹೊಮ್ಮಿತು. ೬ ಫ್ರಾಂಚೈಸಿಗಳ ನಡುವೆ ಜರುಗಿದ ಈ ಪಂದ್ಯಾವಳಿ ನಿನ್ನೆ ರೋಚಕವಾಗಿ ನಡೆಯಿತು. ಕೊಡಗು ಮೂಲದ ಖ್ಯಾತ ಬಾಸ್ಕೆಟ್ ಬಾಲ್ ಆಟಗಾರರು ಪಾಲ್ಗೊಂಡಿದ್ದರು.

ಫೈನಲ್ ಪಂದ್ಯದಲ್ಲಿ ಗೆಲುವಿಗಾಗಿ ತೀವ್ರ ಪೈಪೋಟಿ ನೀಡಿದ ಅವೆಂಜರ್ಸ್ ವೀರಾಜಪೇಟೆ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಚಾಂಪಿಯನ್ ಬಿಬಿಸಿ ತಂಡಕ್ಕೆ ೫೦ ಸಾವಿರ ನಗದು ಟ್ರೋಫಿ, ರನ್ನರ್ ಅಪ್ ಅವೆಂಜರ್ಸ್ ತಂಡಕ್ಕೆ ೨೫ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.

ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಿಬಿಸಿ ತಂಡ ಕೂರ್ಗ್ ಯುನೈಟೆಡ್ ವಿರುದ್ಧ ಜಯ ಗಳಿಸಿ ಫೈನಲ್ ಪ್ರವೇಶ ಪಡೆದುಕೊಂಡಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಗಲ್ ಹೂಪ್ ಸ್ಟರ್ಸ್ ವಿರುದ್ಧ ಜಯ ಸಾಧಿಸಿದ ಅವೆಂಜರ್ಸ್ ಫೈನಲ್ ಪ್ರವೇಶ ಪಡೆದುಕೊಂಡಿತು. ಮಾರ್ಷಲ್ಸ್ ಮಡಿಕೇರಿ, ಅವೆಂಜರ್ಸ್ ವೀರಾಜಪೇಟೆ, ಡಿ ಕೋಚ್ ಪೊನ್ನಂಪೇಟೆ, ಬಿಬಿಸಿ ಗೋಣಿಕೊಪ್ಪಲು, ಕೂರ್ಗ್ ಯುನೈಟೆಡ್ ಪೊನ್ನಂಪೇಟೆ, ಟೀಗಲ್ ಹೂಪ್ ಸ್ಟರ್ಸ್ ಗೋಣಿಕೊಪ್ಪಲು ಸೇರಿದಂತೆ ಒಟ್ಟು ೬ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಟ ನಡೆಸಿದವು. ಪಂದ್ಯಾವಳಿಯಲ್ಲಿ ಚೆನ್ನೆöÊ ಕಸ್ಟಮ್ಸ್ ಪರ ಆಡುತ್ತಿರುವ ಭಾರತ ತಂಡದ ಆಟಗಾರ ಪರದಂಡ ಎನ್. ಬೋಪಣ್ಣ, ರಾಷ್ಟಿçÃಯ ಆಟಗಾರ ಹಾಗೂ ಖೇಲೋ ಇಂಡಿಯಾ ಬೆಳ್ಳಿ ಪದಕ ವಿಜೇತ ಕುಂಬೆಯAಡ ಕರಣ್ ಅಯ್ಯಪ್ಪ, ರಾಷ್ಟ್ರೀಯ ಆಟಗಾರರಾದ ಅರ್ಪಣ್ ಪೂಜಾರಿ, ಸುರೇಶ್ ಶೆಟ್ಟಿ ವಿವಿಧ ತಂಡಗಳ ಪರ ಆಟ ಆಡಿ ಗಮನ ಸೆಳೆದರು.

ವೈಯಕ್ತಿಕ ಪ್ರಶಸ್ತಿ

ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್ ಆಗಿ ಬಿಬಿಸಿ ತಂಡದ ಬೋಪಣ್ಣ, ಸ್ಟೈಲಿಶ್ ಪ್ಲೇಯರ್ ಬಿಬಿಸಿ ತಂಡದ ಗೆದುನ್, ಬೆಸ್ಟ್ ಡಿಫೆನ್ಸಿವ್ ಆಗಿ ಅವೆಂಜರ್ಸ್ ತಂಡದ ಸನತ್, ಬೆಸ್ಟ್ ತ್ರಿ ಪಾಯಿಂಟರ್ ಆಗಿ ಟೀಗಲ್ ಹೂಪ್ ಸ್ಟರ್ಸ್ ತಂಡದ ಅರ್ಪಣ್ ಪ್ರಶಸ್ತಿ ಪಡೆದುಕೊಂಡರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪೊನ್ನಂಪೇಟೆ ಸಂತ ಅಂತೋಣಿ ವಿದ್ಯಾಸಂಸ್ಥೆ ಫಾದರ್ ಮನೋಜ್ ಮ್ಯಾನುವೆಲ್ ಡಿಸೋಜ, ಬಾಸ್ಕೆಟ್‌ಗೆ ಬಾಲ್ ಎಸೆಯುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಎಲ್ಲಾ ತಂಡಗಳು ಕ್ರೀಡಾ ಸೂರ್ತಿಯಿಂದ ಆಟ ಆಡಲು ಪ್ರಯತ್ನಿಸಬೇಕು. ಕ್ರೀಡೆಯ ಮೂಲಕ ಉತ್ತಮ ಭಾಂದವ್ಯ ಬೆಳೆಸಿಕೊಳ್ಳಬೇಕು ಎಂದರು. ಹೊನಲು ಬೆಳಕಿನಲ್ಲಿ ಅಂತಿಮ ಪಂದ್ಯಾವಳಿ ಜರುಗಿತು. ಈ ಸಂದರ್ಭ ಪಂದ್ಯಾವಳಿ ಆಯೋಜಕರಾದ ಚೊಟ್ಟಂಗಡ ಎಸ್. ಸೋಮಯ್ಯ, ಕೋಟ್ರಂಗಡ ಸುಬ್ಬಯ್ಯ, ಮುಕ್ಕಾಟಿರ ಡ್ಯಾನಿ ಕಾವೇರಪ್ಪ, ಕುಂಡÀಚ್ಚಿರ ನಿತಿನ್, ಜೋಜೋ, ನೌಷಾದ್, ಸೋಯಾಲ್ ಇದ್ದರು. - ಚನ್ನನಾಯಕ