ಸೋಮವಾರಪೇಟೆ, ಮೇ ೧೦: ಬರೋಬ್ಬರಿ ೧೮ ವರ್ಷಗಳ ನಂತರ ಸೋಮವಾರಪೇಟೆಯಲ್ಲಿ ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ವತಿಯಿಂದ ಆಯೋಜನೆಗೊಂಡಿದ್ದ ರಾಜ್ಯಮಟ್ಟದ ಪ್ರತಿಷ್ಠಿತ ತಂಡಗಳ ನಡುವಿನ ಯಿಫಾ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಅಮೋಘ ಆಟ ಪ್ರದರ್ಶಿಸಿದ ಎಜಿಓಆರ್‌ಸಿ ತಂಡ ಪ್ರತಿಷ್ಠಿತ ಯಿಫಾ ಚಾಂಪಿಯನ್ಸ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು.

ಅAತಿಮ ಪಂದ್ಯಾಟದ ಅಂತಿಮ ಕ್ಷಣದವರೆಗೂ ರಣರೋಚಕವಾಗಿದ್ದ ಪಂದ್ಯಾಟದಲ್ಲಿ ಸದನ್ ಕಮಾಂಡ್ ತಂಡ ೩-೨ ಗೋಲುಗಳ ಅಂತರದಿAದ ಪರಾಭವಗೊಂಡು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಫೈನಲ್‌ನ ಆರಂಭಿಕ ನಿಮಿಷದಲ್ಲಿಯೇ ಎಜಿಓಆರ್‌ಸಿ ತಂಡದ ಪರವಾಗಿ ಅಂತರರಾಷ್ಟಿçÃಯ ಹಾಕಿ ಆಟಗಾರ ತ್ರಿಶೂಲ್ ಅವರು ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು. ತದನಂತರ ೩೫ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ತಂಡಕ್ಕೆ ೨-೦ ಮುನ್ನಡೆ ತಂದುಕೊಟ್ಟರು. ಪಂದ್ಯಾವಳಿಯ ೪೫ನೇ ನಿಮಿಷದಲ್ಲಿ ಮತ್ತೋರ್ವ ಅಂತರರಾಷ್ಟಿçÃಯ ಹಾಕಿ ಆಟಗಾರ ರಹೀಲ್ ಗೋಲು ಗಳಿಸಿದರು.

ಸದನ್ ಕಮಾಂಡ್ ತಂಡದ ಅಂತರರಾಷ್ಟಿçÃಯ ಆಟಗಾರ ರಜಂತ್ ಅವರು ೪೮ನೇ ನಿಮಿಷದಲ್ಲಿ ಫೀಲ್ಡ್ ಗೋಲು ಗಳಿಸಿ ೩-೧ರ ಅಂತರಕ್ಕೆ ಏರಿಸಿದರು. ಇದೇ ಸಂದರ್ಭ ಎಜಿಓಆರ್‌ಸಿ ತಂಡದ ಗೋಲ್ ಕೀಪರ್ ಯಲ್ಲೋ ಕಾರ್ಡ್ ಪಡೆದು ೫ ನಿಮಿಷಗಳ ಕಾಲ ಪಂದ್ಯಾಟದಿAದ ಹೊರಗುಳಿಯಬೇಕಾಯಿತು. ಈ ಸಮಯವನ್ನು ಸದುಪಯೋಗಪಡಿಸಿಕೊಂಡ ಸದನ್ ಕಮಾಂಡ್ ತಂಡದ ಅಭಿಷೇಕ್ ೫೨ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ನಂತರ ಪಂದ್ಯಾಟದ ಕೊನೆಯ ಕ್ಷಣದವರೆಗೂ ಯಾವುದೇ ಗೋಲುಗಳು ದಾಖಲಾಗದೇ ಅಂತಿಮವಾಗಿ ೩-೨ರ ಗೋಲಿನೊಂದಿಗೆ ಎಜಿಓಆರ್‌ಸಿ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಅAತಿಮ ಪಂದ್ಯಾಟವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಹಾಕಿ ಪ್ರೇಮಿಗಳು, ಸಾರ್ವಜನಿಕರು ಆಗಮಿಸಿದ್ದರು. ಎಜಿಓಆರ್‌ಸಿ ತಂಡದ ಪರವಾಗಿ ಅಂತರರಾಷ್ಟಿçÃಯ ಹಾಕಿ ಆಟಗಾರರಾದ ಸೋಮವಾರಪೇಟೆಯ ಆಭರಣ್ ಸುದೇವ್, ಜೂನಿಯರ್ ಇಂಡಿಯಾ ಹಾಕಿ ತಂಡದ ಆಟಗಾರ ಸೂರ್ಯ ಅವರುಗಳು ಭಾಗಿಯಾಗಿದ್ದರು.

ಇವರೊಂದಿಗೆ ಅಂತರರಾಷ್ಟಿçÃಯ ಆಟಗಾರರಾದ ರಹೀಲ್, ನಿತಿನ್ ತಿಮ್ಮಯ್ಯ, ಎಂ.ಬಿ. ಅಯ್ಯಪ್ಪ, ಹರೀಶ್ ಮುತ್ತುಗಾರ್ ಅವರುಗಳು ತಮ್ಮ ಆಟದ ಮೋಡಿಯ ಮೂಲಕ ಪ್ರೇಕ್ಷಕರಿಗೆ ಹಾಕಿ ರಸದೌತಣ ಉಣಬಡಿಸಿದರು.

ಹಾಕಿ ಕ್ರೀಡೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸುತ್ತಿರುವ ಆಭರಣ್ ಸುದೇವ್, ನಿತಿನ್ ತಿಮ್ಮಯ್ಯ, ಶೇಷೇಗೌಡ, ಪ್ರಧಾನ್ ಸೋಮಣ್ಣ, ವಿ.ಎಸ್. ವಿನಯ್, ರಜಂತ್, ಪಿ.ಎಲ್. ತಿಮ್ಮಣ್ಣ, ಮಂಜಿತ್, ಎಂ.ಬಿ. ಅಯ್ಯಪ್ಪ ಅವರುಗಳೊಂದಿಗೆ ಜೂನಿಯರ್ ಇಂಡಿಯಾದ ಎನ್.ಎಂ. ಸೂರ್ಯ, ಜೈಪ್ರಕಾಶ್, ಜೀತ್‌ಪಾಲ್, ಬಿಪಿನ್, ಹರೀಶ್ ಮುತ್ತುಗಾರ್, ಇಂಡಿಯನ್ ರೈಲ್ವೇ ತಂಡದ ಪೂಣಚ್ಚ, ಇಂಡೋರ್ ಕ್ರಿಕೆಟ್ ಅಂತರರಾಷ್ಟಿçÃಯ ಆಟಗಾರ ಕರಿನೆರವಂಡ ಸೋಮಣ್ಣ ಅವರುಗಳು ವಿವಿಧ ತಂಡಗಳ ಪರವಾಗಿ ಮೈದಾನದಲ್ಲಿದ್ದು, ಹಾಕಿ ಕ್ರೀಡೆಯ ರಸದೌತಣ ಉಣಬಡಿಸಿದರು.

ಇದರೊಂದಿಗೆ ಸೀನಿಯರ್ ಇಂಡಿಯಾ ಕ್ಯಾಂಪರ್ ಕೆ.ಪಿ. ಸೋಮಯ್ಯ, ಜೂನಿಯರ್ ಇಂಡಿಯಾ ವಲ್ಡ್ ಕಪ್ ತಂಡದಲ್ಲಿದ್ದ ಪಿ.ವಿ. ಸುನಿಲ್, ಕ್ಯಾಂಪರ್‌ಗಳಾದ ವಿಶ್ವಾಸ್, ನಿಯಾಸ್,ತರುಣ್, ನ್ಯಾಷನಲ್ ಗೇಮ್ಸ್ ಮೆಡಲಿಸ್ಟ್ಗಳಾದ ಭರತ್, ಶಮಂತ್, ಪುನೀತ್, ಶಾನ್ ಮೊಣ್ಣಪ್ಪ ಅವರುಗಳು ತಮ್ಮ ಅಮೋಘ ಆಟದ ಮೂಲಕ ಹಾಕಿ ಪ್ರೇಮಿಗಳನ್ನು ರಂಜಿಸಿದರು.

ಹಾಕಿ ಇಂಡಿಯಾ, ಹಾಕಿ ಕರ್ನಾಟಕ ಹಾಗೂ ಹಾಕಿ ಕೂರ್ಗ್ನ ಸಹಕಾರದೊಂದಿಗೆ ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್ ಆಯೋಜಿಸಿದ್ದ ಪಂದ್ಯಾವಳಿಯ ನಿರ್ದೇಶಕರಾಗಿ ಹಾಕಿ ಕೂರ್ಗ್ನ ಬಡಕಡ ದೀನಾ ಪೂವಯ್ಯ, ಪಂದ್ಯಾವಳಿ ವೀಕ್ಷಕರಾಗಿ ಅಂಜಪರವAಡ ಕುಶಾಲಪ್ಪ ಅವರುಗಳು ಜವಾಬ್ದಾರಿ ವಹಿಸಿದ್ದರು.

ಇದರೊಂದಿಗೆ ತಾಂತ್ರಿಕ ಟೇಬಲ್‌ನಲ್ಲಿ ಜೆಸಿಬಿ ವಿನೋದ್, ತೀರ್ಪುಗಾರರಾಗಿ ಹಾಕಿ ಕರ್ನಾಟಕ ಹಾಗೂ ಹಾಕಿ ಕೂರ್ಗ್ನ ಬೊಳ್ಳಚಂಡ ನಾಣಯ್ಯ, ಮೋಕಚಂಡ ನಾಚಪ್ಪ, ದೀಕ್ಷಿತ್, ಸುಪ್ರಿತ್, ಅಪ್ಪಚಟ್ಟೋಳಂಡ ಅಣ್ಣಪ್ಪ ಅವರುಗಳು ಜವಾಬ್ದಾರಿ ನಿರ್ವಹಿಸಿದರು. ಪ್ರಥಮ ಬಾರಿಗೆ ಯಿಫಾ ಸಂಘಟನೆಯ ಸದಸ್ಯರು ಆಯೋಜಿಸಿದ್ದ ಹಾಕಿ ಹಬ್ಬ ನೂರಾರು ಆಟಗಾರರ ಸಮ್ಮಿಲನ, ಸಾವಿರಾರು ಕ್ರೀಡಾಪ್ರೇಮಿಗಳ ಪ್ರೋತ್ಸಾಹದೊಂದಿಗೆ ಯಶಸ್ವಿಯಾಯಿತು.

ಸಭಾ ಕಾರ್ಯಕ್ರಮ

ಪಂದ್ಯಾಟಕ್ಕೆ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಕ್ರೀಡಾ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಅವರು, ಸೋಮವಾರಪೇಟೆಯ ಟರ್ಫ್ ಮೈದಾನದಲ್ಲಿ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಹಾಕಿ ಕ್ರೀಡೆಗೆ ಪ್ರೋತ್ಸಾಹ ತುಂಬುವ ಯಂಗ್ ಇಂಡಿಯನ್ ಫಾಮರ‍್ಸ್ ಅಸೋಸಿಯೇಷನ್‌ನ ಶ್ರಮ ಶ್ಲಾಘನೀಯ ಎಂದರು.

ತಪೋಕ್ಷೇತ್ರ ಮನೆಹಳ್ಳಿ ಮಠಾಧೀಶರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಂಗ್ ಇಂಡಿಯನ್ ಫಾಮರ‍್ಸ್ ಅಸೋಷಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ವಹಿಸಿದ್ದರು. ವೇದಿಕೆಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕ ವಿಷ್ಣು ಸುಧಾಕರನ್, ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ, ಲೀಡಿಂಗ್ ಎಡ್ಜ್ ಸಂಸ್ಥೆಯ ಮಾಲೀಕ ಎಡಿಕೇರಿ ಪ್ರಸನ್ನ, ಭಾರತೀಯ ಮಹಿಳಾ ಹಾಕಿ ತಂಡದ ಮಾಜೀ ತರಬೇತುಗಾರ್ತಿ ದೇವರಾಜಮ್ಮ, ಉದ್ಯಮಿಗಳಾದ ಆನಂದ್ ಸಿಂಘಾಲ್, ಅಚಿನ್, ಹಾಕಿ ಕೂರ್ಗ್ನ ಕಾರ್ಯದರ್ಶಿ ಚೇತನ್, ಭಾರತ ಮಹಿಳಾ ಹಾಕಿ ತಂಡದ ಕೋಚ್ ಟಿಮ್ ವೈಟ್, ಯಿಫಾ ಸಂಘಟನೆಯ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ ಸೇರಿದಂತೆ ಇತರರು ಇದ್ದರು. - ವಿಜಯ್ ಹಾನಗಲ್