ಕೂಡಿಗೆ, ಮೇ ೯: ಕೊಡಗು ಸೇರಿದಂತೆ ಅರಕಲಗೂಡು, ಸಾಲಿಗ್ರಾಮ, ಕೊಣನೂರು, ಹಾಗೂ ಮೈಸೂರು ಜಿಲ್ಲೆಯ ಮತ್ತು ಹಾಸನ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಅಧಿಕಾರಿಗಳ ಸೂಚನೆಯಂತೆ ಹಾರಂಗಿ ಅಣೆಕಟ್ಟೆಯ ಭದ್ರತಾ ಬಾಗಿಲುಗಳ ಮೂಲಕ ೫ ದಿನಗಳವರೆಗೆ ಇಂದಿನಿAದ ೫೦೦ ಕೂಸೆಕ್ಸ್ ನೀರು ಹರಿಸಲಾಗುತ್ತಿದೆ. ಬಿಸಿಲಿನ ತಾಪದಿಂದಾಗಿ ಕಾವೇರಿ ನದಿಯ ನೀರಿನ ಮಟ್ಟ ಕುಸಿದ ಹಿನ್ನೆಲೆ ಕಾವೇರಿ ನದಿ ತೀರದ ಎರಡೂ ಕಡೆಗಳ ಮೂರು ಜಿಲ್ಲೆಗಳ ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೆ ಸಂಬAಧಿಸಿದAತೆ ಅನುಕೂಲವಾಗಲು ೫೦೦ ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ ಎಂದು ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ಮಾಹಿತಿ ನೀಡಿದ್ದಾರೆೆ.