ಮಡಿಕೇರಿ, ಮೇ ೯: ಕೊಡಗು ಗೌಡ ಯುವ ವೇದಿಕೆ ವತಿಯಿಂದ ೧೦ ಕುಟುಂಬ ೧೮ ಗೋತ್ರದ ಗೌಡ ಕುಟುಂಬಗಳ ನಡುವೆ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ - ೨೦೨೬ ಕ್ರಿಕೆಟ್ ಪಂದ್ಯಾಟದಲ್ಲಿ ಕರ್ಣಯ್ಯನ, ಕೊಳಂಬೆ ಮುದಿಯಾರು, ತೆಕ್ಕಡೆ, ಉಡುದೋಳಿರ ತಂಡಗಳು ಮುಂದಿನ ಹಂತ ಪ್ರವೇಶಿಸಿವೆ.
ನೂಜಿಬೈಲು ವಿರುದ್ಧ ಬಾಜಿನಡ್ಕ ೧೦ ವಿಕೆಟ್‌ಗಳ ಗೆಲುವು ಸಾಧಿಸಿತು. ನೂಜಿಬೈಲು ೭ ವಿಕೆಟ್‌ಗೆ ೩೬ ರನ್‌ಗಳಿಸಿದರೆ, ಬಾಜಿನಡ್ಕ ಯಾವುದೇ ವಿಕೆಟ್ ನಷ್ಟವಿಲ್ಲದೆ ೩೭ ರನ್‌ಗಳಿಸಿತು.
ತೆಕ್ಕಡೆ ತಂಡ ತೇಲಬೈಲು ವಿರುದ್ಧ ಗೆಲುವು ಸಾಧಿಸಿತು. ತೆಕ್ಕಡೆ ಯಾವುದೇ ವಿಕೆಟ್ ನಷ್ಟವಿಲ್ಲದೆ ೮೯ ರನ್‌ಗಳಿಸಿದರೆ, ತೇಲಬೈಲು ೫ ವಿಕೆಟ್‌ಗೆ ೪೨ ರನ್‌ಗಳಿಸಿತು. ತೆಕ್ಕಡೆ ಯತೀಶ್ ೧೦ ಸಿಕ್ಸರ್‌ನೊಂದಿಗೆ ೬೮ ರನ್‌ಗಳಿಸಿದರು. ಕೊಳಂಬೆ ತಂಡ ಮಿತ್ತೂರು ವಿರುದ್ಧ ಜಯಿಸಿತು. ಮಿತ್ತೂರು ೬ ವಿಕೆಟ್‌ಗೆ ೪೮ ರನ್‌ಗಳಿಸಿದರೆ, ಕೊಳಂಬೆ ೩ ವಿಕೆಟ್‌ಗೆ ೫೧ ರನ್ ಬಾರಿಸಿತು.
ಮುದಿಯಾರು ತಂಡ ಅಮೆಮನೆ ವಿರುದ್ಧ ಜಯಗಳಿಸಿತು. ಮುದಿಯಾರು ೧ ವಿಕೆಟ್‌ಗೆ ೮೮ ರನ್‌ಗಳಿಸಿದರೆ, ಅಮೆಮನೆ ೪ ವಿಕೆಟ್‌ಗೆ ೭೪ ರನ್‌ಗಳಿಸಿತು. ಮುದಿಯಾರು ದಿನೇಶ್ ೮ ಸಿಕ್ಸ್, ೨ ಬೌಂಡರಿ ಸೇರಿ ೫೮ ರನ್‌ಗಳಿಸಿದರು.
ದಂಬೆಕೋಡಿ ತಂಡ ಪೊಕ್ಕುಳಂಡ್ರ ವಿರುದ್ಧ ಜಯಗಳಿಸಿತು. ಪೊಕ್ಕುಳಂಡ್ರ ೬ ವಿಕೆಟ್‌ಗೆ ೩೧ ರನ್‌ಗಳಿಸಿದರೆ, ದಂಬೆಕೋಡಿ ಯಾವುದೇ ವಿಕೆಟ್‌ನಷ್ಟವಿಲ್ಲದೆ ೩೪ ರನ್ ಬಾರಿಸಿತು.
ಉಡುದೋಳಿರ ತಂಡ ಹುದೇರಿ ವಿರುದ್ಧ ಗೆಲುವು ಸಾಧಿಸಿತು. ಉಡುದೋಳಿರ ೩ ವಿಕೆಟ್‌ಗೆ ೬೧ ರನ್‌ಗಳಿಸಿದರೆ ಹುದೇರಿ ೩ ವಿಕೆಟ್‌ಗೆ ೫೫ ರನ್‌ಗಳಿಸಿತ್ತು. ಉಡುದೋಳಿರ ತಂಡ ಬೆಪ್ಪುರನ ವಿರುದ್ಧ ಜಯಗಳಿಸಿತು. ಬೆಪ್ಪುರನ ೩ ವಿಕೆಟ್‌ಗೆ ೪೩ ರನ್ ಗಳಿಸಿದರೆ, ಉಡುದೋಳಿರ ೧ ವಿಕೆಟ್‌ಗೆ ೪೯ ರನ್‌ಗಳಿಸಿತು.
ಬೆಪ್ಪುರನ ತಂಡ ಕಲ್ಲುಗದ್ದೆ ವಿರುದ್ಧ ಜಯಿಸಿತು. ಬೆಪ್ಪುರನ ೩ ವಿಕೆಟ್‌ಗೆ ೪೪ ರನ್‌ಗಳಿಸಿದರೆ, ಕಲ್ಲುಗದ್ದೆ ೫ ವಿಕೆಟ್‌ಗೆ ೩೪ ರನ್‌ಗಳಿಸಿತು. ಉಡುದೋಳಿರ ತಂಡ ಕುಡೆಕಲ್ಲು (ಎ) ವಿರುದ್ಧ ಜಯಗಳಿಸಿತು. ಉಡುದೋಳಿರ ೨ ವಿಕೆಟ್‌ಗೆ ೯೩ ರನ್‌ಗಳಿಸಿದರೆ, ಕುಡೆಕಲ್ಲು ೪ ವಿಕೆಟ್‌ಗೆ ೫೪ ರನ್‌ಗಳಿಸಿತು. ತೆಕ್ಕಡೆ ತಂಡ ಬಾಜಿನಡ್ಕ ವಿರುದ್ಧ ಗೆಲುವು ಸಾಧಿಸಿತು. ತೆಕ್ಕಡೆ ೩ ವಿಕೆಟ್‌ಗೆ ೭೭ ರನ್‌ಗಳಿಸಿದರೆ, ಬಾಜಿನಡ್ಕ ೨ ವಿಕೆಟ್‌ಗೆ ೧೪ ರನ್‌ಗಳಿಸಿತು.
ಬೆಪ್ಪುರನ ತಂಡ ದೇರಳ ವಿರುದ್ಧ ಜಯಿಸಿತು. ಬೆಪ್ಪುರನ ೩ ವಿಕೆಟ್‌ಗೆ ೭೭ ರನ್‌ಗಳಿಸಿದರೆ, ದೇರಳ ೪ ವಿಕೆಟ್‌ಗೆ ೩೭ ರನ್‌ಗಳಿಸಿತು. ಕರ್ಣಯ್ಯನ ತಂಡ ಬಾಡನ ವಿರುದ್ಧ ಜಯಗಳಿಸಿತು. ಬಾಡನ ೩ ವಿಕೆಟ್‌ಗೆ ೩೫ ರನ್‌ಗಳಿಸಿದರೆ, ಕರ್ಣಯ್ಯನ ಯಾವುದೇ ವಿಕೆಟ್ ನಷ್ಟವಿಲ್ಲದೆ ೩೯ ರನ್‌ಗಳಿಸಿತು.
ತೆಕ್ಕಡೆ ತಂಡ ದಂಬೆಕೋಡಿ ವಿರುದ್ಧ ಗೆಲುವು ಸಾಧಿಸಿತು. ತೆಕ್ಕಡೆ ೨ ವಿಕೆಟ್‌ಗೆ ೮೬ ರನ್‌ಗಳಿಸಿದರೆ, ದಂಬೆಕೋಡಿ ೨ ವಿಕೆಟ್‌ಗೆ ೭೪ ರನ್‌ಗಳಿಸಿತು. ಕರ್ಣಯ್ಯನ ತಂಡ ಚೋಂಡಿರ ವಿರುದ್ಧ ಜಯಿಸಿತು. ಕರ್ಣಯ್ಯನ ಯಾವುದೇ ವಿಕೆಟ್ ನಷ್ಟವಿಲ್ಲದೆ ೪೦ ರನ್‌ಗಳಿಸಿದರೆ, ಚೋಂಡಿರ ೩ ವಿಕೆಟ್‌ಗೆ ೩೯ ರನ್‌ಗಳಿಸಿತು.