ಸುಂಟಿಕೊಪ್ಪ, ಮೇ ೯: ಗದ್ದೆಹಳ್ಳದ ಬಳಿ ಇನೋವಾ ಕಾರುಗಳು, ಟೆಂಪೋ ಟ್ರಾವೆಲರ್ ನಡುವೆ ಅಪಘಾತ ಸಂಭವಿಸಿದೆ.
ಶನಿವಾರ ಮಧ್ಯಾಹ್ನ ೨.೩೦ ರ ಸಂದರ್ಭ ಸುಂಟಿಕೊಪ್ಪ ರಾಷ್ಟಿçÃಯ ಹೆದ್ದಾರಿಯಲ್ಲಿ ಗದ್ದೆಹಳ್ಳದ ವಂದನಾಬಾರ್ ತಿರುವಿನಲ್ಲಿ ಬೆಂಗಳೂರಿನಿAದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ (ಕೆಎ.೫೧ ಎಜೆ ೮೬೬೧) ಹಾಗೂ ಮಡಿಕೇರಿ ಕಡೆಯಿಂದ ಕುಶಾಲನಗರ ಕಡೆಗೆ ಆಗಮಿಸುತ್ತಿದ್ದ ಇನೋವಾ ಕಾರು (ಕೆಎ೦೩ ಎಂಆರ್ ೯೯೦೦) ಮತ್ತು ಮೈಸೂರಿನಿಂದ ಮಡಿಕೇರಿ ಕಡೆಗೆ ಆಗಮಿಸುತ್ತಿದ್ದ ಇನೋವಾ (ಕೆಎ೦೧ಎಕೆ೭೩೪೯) ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ಹೆದ್ದಾರಿ ಬದಿಯಲ್ಲಿ ಮಗುಚಿಕೊಂಡಿದ್ದು ಈ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಘಟನೆಯಿಂದ ಕೆಲ ಗಂಟೆಗಳ ಕಾಲ ರಾಷ್ಟಿçÃಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿತ್ತು. ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ