ವೀರಾಜಪೇಟೆ, ಮೇ.೭: ಸಮಾಜಗಳ ಏಳಿಗೆಯು ಸಮಾನತೆ ಮತ್ತು ಅಸ್ತಿತ್ವದ ಅಡಿಸ್ಥಾನದಲ್ಲಿ ನೆಲೆ ನಿಂತಿದೆ ಎಂದು ಸೊಲೂರು ಮಠದ ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತ ನಂದಾ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ವೀರಾಜಪೇಟೆ ಬಿಲ್ಲವ ಸೇವಾ ಸಂಘ ವತಿಯಿಂದ ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆದ ೨೦ನೇ ವರ್ಷ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಮುಖ ಭಾಷಣ ಮಾಡಿದ ಅವರು, ನೆಲ ಜಲದ ಮಹತ್ವದೊಂದಿಗೆ ಸಾಂಪ್ರದಾಯ ಮೂಲವನ್ನು ಮರೆತು ಜೀವನ ಇಲ್ಲ. ಸಮಾನತೆಯ ಸಾರವನ್ನು ಜಗತ್ತಿಗೆ ಪ್ರಚಾರ ಪಡಿಸಿದ ನಾರಾಯಣ ಗುರುಗಳ ತತ್ವ-ಸಿದ್ದಾಂತಗಳ ಮೇಲೆ ಸಂಘಟನೆ ಸಾಗಿದೆ. ಸಮುದಾಯ ಬಾಂಧವರು ಸಂಘಟನೆ ಮತ್ತು ತತ್ವಗಳ ಅನುಯಾಯಿಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದÀರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಅವರು ಕ್ರೀಡಾಕೂಟಕ್ಕೆ ಶುಭ ಹಾರೈಸಿ ಮಾತನಾಡಿ, ಜನಾಂಗದ ಬಾಂಧವರನ್ನು ಒಂದೆಡೆ ಸೇರಿಸುವಂತೆ ಮಾಡುವ ಶಕ್ತಿ ಕ್ರೀಡಾ ಸಂಗಮಕ್ಕಿದೆ. ಇದರ ಸದುಪಯೋಗಪಡಿಸಿಕೊಂಡು ಕುಟುಂಬದ ಸದಸ್ಯರೊಂದಿಗೆ ಬೆರೆಯಬೇಕೆಂದರು.

ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಮಾತನಾಡಿ, ಕೊಡವ ಜನಾಂಗ ಸಂಘಟಿತರಾಗಲು ಕೌಟುಂಬಿಕ ಹಾಕಿ ಪಂದ್ಯಾವಳಿಯು ಸಹಕಾರವಾಯಿತು. ತದ ನಂತರದಲ್ಲಿ ಎಲ್ಲ ಸಮುದಾಯಗಳು ಹಂತ ಹಂತವಾಗಿ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ತಮ್ಮ ಸಮುದಾಯದ ಬಲವರ್ಧನೆ ಮತ್ತು ಸಂಘಟಿತ ಕಾರ್ಯಕ್ಕೆ ಅಣಿಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು. ಆಯೋಜಕರ ಮನವಿಯ ಮೇರೆಗೆ ರೂ.೧೦ ಲಕ್ಷದ ಅನುದಾನ ಘೋಷಣೆ ಮಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾಜಿ ಸುಭೆದಾರ್ ಹಾಗೂ ಬಂಟ್ವಾಳದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾಧ್ಯಕ್ಷರಾದ ಮೊಣ್ಣಪ್ಪ, ಉದ್ಯಮಿ ರಮೇಶ್ ಪೂಜಾರಿ ಮತ್ತು ತೀಯನ್ ಮಹಾಸಭಾದ ಪ್ರಮುಖರಾದ ಎ.ಎನ್ ಪದ್ಮನಾಭ ಅವರು ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನ, ಸಾಧಕ ವ್ಯಕ್ತಿಗಳಿಗೆ ಸನ್ಮಾನ, ಲಕ್ಕಿ ಡಿಪ್ ಡ್ರಾ ಮತ್ತು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು.

ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿದ ಬಿಲ್ಲವ ಸೇವಾ ಸಂಘದ ಅದ್ಯಕ್ಷರಾದ ಬಿ.ಎಂ ಗಣೇಶ್ ಅವರು, ಮೂರು ದಿನಗಳ ಕಾಲ ಸಮುದಾಯ ಬಾಂಧವರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಯಿತು. ಬಾಂಧÀವರಲ್ಲಿ ವಿಶಿಷ್ಟ ಸಾಧನೆ ಮಾಡಿದ ವ್ಯಕ್ತಿಗಳನ್ನು ಸಮಾಜ ಪರಿಚಯ ಮಾಡಲಾಗಿದೆ. ಸಂಘ ಮುಂದೆಯೂ ಸಮುದಾಯ ಬಾಂಧವರನ್ನು ಗುರುತಿಸುವ ಕಾರ್ಯ ಮಾಡುತ್ತದೆ. ಸಂಘದ ಬಹು ನಿರೀಕ್ಷೆಯ ಸಭಾ ಭವನದ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕವಾಗಿ ನೆರವು ನೀಡಬೇಕು ಎಂದು ಮನವಿ ಮಾಡಿದರು. ಮೂರು ದಿನಗಳು ಕಾಲ ನಡೆದ ಕ್ರೀಡಾಕೂಟದಲ್ಲಿ ಕ್ರಿಕೆಟ್, ಕಾಲ್ಚೆಂಡು, ಹಗ್ಗ ಜಗ್ಗಾಟ, ವಾಲಿಬಾಲ್, ಶಟಲ್, ತ್ರೋಬಾಲ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ವೇದಿಕೆಯಲ್ಲಿ ಪಟ್ಟಡ ಪ್ರಮುಖರಾದ ರಂಜಿ ಪೂಣಚ್ಚ, ಉದ್ಯಮಿ ವೆಂಕಪ್ಪ ಪೂಜಾರಿ, ಅಪ್ಪು ರವೀಂದ್ರ, ಮಡಿಕೇರಿ ಬಿಲ್ಲವ ಸೇವಾ ಸಂಘ ಅಧ್ಯಕ್ಷರಾದ ಲೀಲಾವತಿ, ನಾಪೋಕ್ಲು ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಪ್ರದೀಪ್, ಸೋಮವಾರಪೇಟೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಚಂದ್ರಹಾಸ್ ಅವರುಗಳು ಹಾಜರಿದ್ದರು.

ವೀರಾಜಪೇಟೆ ಬಿಲ್ಲವ ಸೇವಾ ಸಂಘದ ಖಜಾಂಚಿಗಳಾದ ಬಿ ಸತೀಶ್ ಪೂಜಾರಿ ಸ್ವಾಗತಿಸಿ, ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿ ವಂದಿಸಿದರು. ಮೂರು ದಿನಗಳು ನಡೆದ ಕ್ರೀಡಾಕೂಟದಲ್ಲಿ ವೀರಾಜಪೇಟೆ ಬಿಲ್ಲವ ಸೇವಾ ಸಂಘದ ಪದಾಧಿಕಾರಿಗಳು, ಸದಸ್ಯರು, ಜಿಲ್ಲೆಯ ವಿವಿಧ ಸ್ಥಳಗಳ ಬಿಲ್ಲವ ಸಂಘದ ಸದಸ್ಯರು, ಸಮುದಾಯದ ಪ್ರಮುಖರು, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.