ಚೆಟ್ಟಳ್ಳಿ, ಮೇ ೭: ಉತ್ತಮ ಮಳೆಗಾಗಿ ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಏಳು ಭದ್ರಕಾಳಿ ನೆಲೆಯ ತಕ್ಕಮುಖ್ಯಸ್ಥರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಾಟಕೇರಿ, ಗಾಳಿಬೀಡು, ಇಬ್ನಿವಳವಾಡಿ, ಮಕ್ಕಂದೂರು, ಹಾಲೇರಿ, ಕೆದಕಲ್, ಮದೆನಾಡ್ ಸೇರಿದಂತೆ ಏಳು ಭದ್ರಕಾಳಿ ನೆಲೆಗಳ ಪ್ರಮುಖರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ತೆರಳಿ ಬೈವಾಡ್ ಸೇವೆಯನ್ನು ಸಮರ್ಪಿಸಿದರು. ಕೊಡಗಿನ ಸಮೃದ್ಧಿಗಾಗಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮಳೆಯಾಗಲೆಂದು ಪ್ರಾರ್ಥನೆ ಸಲ್ಲಿಸಿದರು.